- Home
- Entertainment
- ಕಿಚ್ಚ ಸುದೀಪ್ ಮದುವೆ ವಾರ್ಷಿಕೋತ್ಸವದಲ್ಲಿ 3 ಕ್ಷೇತ್ರದ ದಿಗ್ಗಜರ ಸಮಾಗಮ, ವೆಂಕಿ ಹಂಚಿದ ಬೆಂಕಿ ಫೋಟೋ
ಕಿಚ್ಚ ಸುದೀಪ್ ಮದುವೆ ವಾರ್ಷಿಕೋತ್ಸವದಲ್ಲಿ 3 ಕ್ಷೇತ್ರದ ದಿಗ್ಗಜರ ಸಮಾಗಮ, ವೆಂಕಿ ಹಂಚಿದ ಬೆಂಕಿ ಫೋಟೋ
ಕಿಚ್ಚ ಸುದೀಪ್ ದಂಪತಿಗೆ 25ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ. ಈ ಸಮಾರಂಭದಲ್ಲಿ ಮೂರು ಕ್ಷೇತ್ರದ ದಿಗ್ಗಜರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭ್ರಮದ ಫೋಟೋವನ್ನು ವೆಂಕಟೇಶ್ ಪ್ರಸಾದ್ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ವೆಡ್ಡಿಂಗ್ ಆ್ಯನಿವರ್ಸರಿ
ಕಿಚ್ಚ ಸುದೀಪ್ ಸಿನಿ ಸ್ಯಾಂಡಲ್ವುಡ್, ಹಾಲಿವುಡ್ ಸೇರಿದಂತೆ ಪ್ರಮುಖ ಸಿನಿ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದೇಶದ ಬಹುತೇಕ ಸಿನಿಮಾ ಇಂಡಸ್ಟ್ರೀಯ ದಿಗ್ಗಜರು, ಪ್ರಮುಖರು ಕಿಚ್ಚ ಸುದೀಪ್ ಜೊತೆ ಆತ್ಮೀಯರಾಗಿದ್ದಾರೆ. ವಿಶೇಷ ಅಂದರೆ ಕಿಚ್ಚ ಸುದೀಪ್ ಆತ್ಮೀಯತೆ ಕೇವಲ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್, ರಾಜಕೀಯ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಕಿಚ್ಚ ಸುದೀಪ್ ಜೊತೆ ಆತ್ಮೀಯರಾಗಿದ್ದಾರೆ. ಇದೀಗ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ 25ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಕಿಚ್ಚ ಸುದೀಪ್ ವೈಯುಕ್ತಿಕ ಬದುಕಿನ ಪ್ರಮುಖ ಘಟ್ಟದಲ್ಲಿ ಕನ್ನಡದ ಮೂರು ಕ್ಷೇತ್ರದ ದಿಗ್ಗಜರು ಒಂದೇ ಕಡೆ ಕಾಣಿಸಿಕೊಂಡಿದ್ದಾರೆ.
ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿ ಮೂವರು ದಿಗ್ಗಜರು
ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ 25ನೇ ಮದುವೆ ವಾರ್ಷಿಕೋತ್ಸವದಲ್ಲಿ ಕನ್ನಡದ ಮೂರು ಕ್ಷೇತ್ರದ ದಿಗ್ಗಜರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಒಂದೆಡೆ ಸಿನಿಮಾ ದಿಗ್ಗಜ ಕಿಚ್ಚ ಸುದೀಪ್, ಮತ್ತೊಂದೆಡೆ ಕ್ರಿಕೆಟ್ ದಿಗ್ಗಜ ವೆಂಕಟೇಶ್ ಪ್ರಸಾದ್, ಇನ್ನೊಂದು ಮ್ಯೂಸಿಕ್ ದಿಗ್ಗಜ ವಿಜಯ್ ಪ್ರಕಾಶ್.
ಫೋಟೋ ಹಂಚಿಕೊಂಡ ವೆಂಕಟೇಶ್ ಪ್ರಸಾದ್
ಕಿಚ್ಚ ಸುದೀಪ್ ಹಾಗೂ ಪ್ರಿಯಾ 25ನೇ ವರ್ಷದ ಮದುವೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ವೆಂಕಟೇಶ್ ಪ್ರಸಾದ್ ಹಾಗೂ ಕುಟುಂಬ ನಟನಿಗೆ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್ ಪಯಣ ನೋಡುವುದು ನನಗೆ ಹೆಮ್ಮೆಯಾಗಿದೆ. ಒಬ್ಬ ಕಲಾವಿದನಾಗಿ, ಆಪ್ತ ಗೆಳೆಯನಾಗಿ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಕಿಚ್ಚ ಸುದೀಪ್ ಹಾಗೂ ಪ್ರಿಯಾಗೆ 25ನೇ ಮದುವೆ ವಾರ್ಷಿಕೋತ್ಸವ ಶುಭಾಶಯಗಳು ಎಂದು ವೆಂಕಟೇಶ್ ಪ್ರಸಾದ್ ಶುಭ ಕೋರಿದ್ದಾರೆ.
ಕಿಚ್ಚ ಸುದೀಪ್ ವಾರ್ಷಿಕೋತ್ಸವದಲ್ಲಿ ಗಣ್ಯರ ದಂಡು
ಕಿಚ್ಚ ಸುದೀಪ್ 25ನೇ ಮದುವೆ ವಾರ್ಷಿಕೋತ್ಸವದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಮಾಜಿ ಸಂಸದೆ ಸುಮಲತಾ ಅಂಬರೀಷ್ ಕೂಡ ಪಾಲ್ಗೊಂಡಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚ ಸುದೀಪ್ ದಂಪತಿಗೆ ಹಲವು ಪ್ರಮುಖರು, ಸಿನಿ ತಾರೆಯರು ಶುಭಕೋರಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಕಿಚ್ಚ ಸುದೀಪ್ ದಂಪತಿ
ಸಾಂಪ್ರದಾಯಿಕ ಉಡುಗೆಯಲ್ಲಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಎಲ್ಲರ ಗಮನ ಸೆಳೆದಿದ್ದಾರೆ. ಮದುವೆ ವಾರ್ಷಿಕೋತ್ಸವದ ಪೂಜೆ ಸೇರಿದಂತೆ ವಿಶೇಷ ಕಾರ್ಯಕ್ರಮದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಿಚ್ಚ ಸುದೀಪ್ ದಂಪತಿಗೆ ಶುಭಕೋರಿದ್ದಾರೆ. ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

