- Home
- Entertainment
- ಕೇವಲ 23ನೇ ವಯಸ್ಸಿಗೆ 250 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ..ಈ ಸೀರಿಯಲ್ ಬ್ಯೂಟಿ ಸಾಮಾನ್ಯಳಲ್ಲ!
ಕೇವಲ 23ನೇ ವಯಸ್ಸಿಗೆ 250 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ..ಈ ಸೀರಿಯಲ್ ಬ್ಯೂಟಿ ಸಾಮಾನ್ಯಳಲ್ಲ!
23 year old actress: ಇತ್ತೀಚೆಗೆ ಸಿನಿಮಾ ನಾಯಕಿಯರು ಮಾತ್ರವಲ್ಲ, ಸೀರಿಯಲ್ ಸುಂದರಿಯರು ಸಹ ಪ್ರಸಿದ್ಧರಾಗುತ್ತಿದ್ದಾರೆ. ನಾಯಕಿಯರನ್ನು ಮೀರಿ ಕ್ರೇಜ್ ಗಳಿಸಿದ್ದಾರೆ. ಹೌದು. ಇತ್ತೀಚೆಗೆ ಓರ್ವ ಸೀರಿಯಲ್ ಬ್ಯೂಟಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ರೇಂಜ್‌ಗೆ ಕ್ರೇಜ್ ಗಳಿಸಿದ್ದಾರೆ.

ಚಲನಚಿತ್ರಗಳಲ್ಲಿ ಅವಕಾಶ
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಿನಿಮಾಗಳಂತೆ ಧಾರಾವಾಹಿಗಳೂ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಬಹುಶಃ ಜನರು ಒಂದು ಹೊತ್ತು ಊಟ ಬಿಡ್ತಾರೆ. ಆದರೆ ಧಾರಾವಾಹಿಗಳನ್ನು ನೋಡುವುದನ್ನ ಮಾತ್ರ ನಿಲ್ಲಿಸೋದಿಲ್ಲ. ಲಾಕ್‌ಡೌನ್ ನಂತರ ಧಾರಾವಾಹಿಗಳನ್ನು ನೋಡುವ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಧಾರಾವಾಹಿಗಳು ಈಗ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸಕ್ಸಸ್ ಆಗಿವೆ. ಅಷ್ಟೇ ಏಕೆ ಧಾರಾವಾಹಿಗಳಲ್ಲಿ ನಟಿಸಿದ ಅನೇಕ ಮುದ್ದಾದ ನಟಿಯರು ಈಗ ಚಲನಚಿತ್ರಗಳಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
ಈಗ ಅನೇಕ ನಾಯಕಿಯರು ನಾಯಕರಿಗಿಂತ ಹೆಚ್ಚಿನ ಕ್ರೇಜ್ ಗಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವ ನಟಿಯರು ಕಡಿಮೆ ಸಮಯದಲ್ಲಿ ಸ್ಟಾರ್‌ಡಮ್ ಗಳಿಸುತ್ತಿದ್ದಾರೆ. ನಾಯಕಿಯರಿಗಾಗಿಯೇ ಸಿನಿಮಾಗಳಿಗೆ ಹೋಗುವ ಕೆಲವರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ, ಅನೇಕ ಸುಂದರಿಯರು ರಾತ್ರೋರಾತ್ರಿ ಸ್ಟಾರ್‌ಗಳಾಗಿದ್ದಾರೆ. ಅದರೊಂದಿಗೆ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಒಂದು ರೇಂಜ್‌ಗೆ ಕ್ರೇಜ್
ಕೆಲವು ನಾಯಕಿಯರು ಸ್ಟಾರ್ ಹೀರೋಗಳಿಗೆ ಸಮಾನವಾದ ಸಂಭಾವನೆ ಪಡೆಯುತ್ತಿದ್ದಾರೆ ಮತ್ತು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಿನಿಮಾ ನಾಯಕಿಯರು ಮಾತ್ರವಲ್ಲ, ಸೀರಿಯಲ್ ಸುಂದರಿಯರು ಸಹ ಪ್ರಸಿದ್ಧರಾಗುತ್ತಿದ್ದಾರೆ. ನಾಯಕಿಯರನ್ನು ಮೀರಿ ಕ್ರೇಜ್ ಗಳಿಸಿದ್ದಾರೆ. ಹೌದು. ಇತ್ತೀಚೆಗೆ ಓರ್ವ ಸೀರಿಯಲ್ ಬ್ಯೂಟಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ರೇಂಜ್‌ಗೆ ಕ್ರೇಜ್ ಗಳಿಸಿದ್ದಾರೆ.
ಆಕೆ ಬೇರೆ ಯಾರೂ ಅಲ್ಲ...
ಆ ಸೀರಿಯಲ್ ನಟಿ ಸ್ಟಾರ್ ಹೀರೋಗಳಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಸ್ತಿ ಕೂಡ ಸ್ಟಾರ್ ಹೀರೋಗಳಿಗಿಂತ ಹೆಚ್ಚು. ಆಕೆಗೆ ಕೇವಲ 23 ವರ್ಷ. ಆದರೆ ಆಸ್ತಿ 250 ಕೋಟಿ ರೂ.ಗಳಿಗಿಂತ ಹೆಚ್ಚು. ಸ್ಟಾರ್ ಹೀರೋಯಿನ್‌ಗಳು ಸಹ ಇಷ್ಟೊಂದು ಸಂಪಾದಿಸಿಲ್ಲ. ಅಷ್ಟೇ ಅಲ್ಲ, ಚಿತ್ರೋದ್ಯಮದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸೀರಿಯಲ್ ನಟಿ. ಆಕೆ ಬೇರೆ ಯಾರೂ ಅಲ್ಲ, ಬಾಲಿವುಡ್ ನಟಿ ಜನ್ನತ್ ಜುಬೈರ್.
ಫಾಲೋವರ್ಸ್‌ಗಳಲ್ಲಿ ಶಾರುಖ್ ರನ್ನು ಹಿಂದಿಕ್ಕಿದ ಬ್ಯೂಟಿ
ಜನ್ನತ್ ಜುಬೈರ್ ಚಿಕ್ಕ ವಯಸ್ಸಿನಲ್ಲೇ ಸ್ಟಾರ್‌ಡಮ್ ಗಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈಕೆಯ ಬಗ್ಗೆ ಅಪಾರ ಕ್ರೇಜ್ ಇದೆ. ನಟಿಯನ್ನು ಅನುಸರಿಸುವ ಲಕ್ಷಾಂತರ ಜನರಿದ್ದಾರೆ. ಫಾಲೋವರ್ಸ್‌ಗಳಲ್ಲಿ ಶಾರುಖ್ ಖಾನ್‌ರನ್ನು ಸಹ ಹಿಂದಿಕ್ಕಿದ್ದಾರೆ.
ರಾಣಿ ಮುಖರ್ಜಿ ಜೊತೆ ನಟನೆ
ಜನ್ನತ್ ಜುಬೈರ್ ಇನ್ಸ್ಟಾಗ್ರಾಮ್ ನಲ್ಲಿ 49.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಾಲ ಕಲಾವಿದೆಯಾಗಿ ಕಿರುತೆರೆಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ಮುದ್ದಾದ ನಟಿ ಈಗ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ರಾಣಿ ಮುಖರ್ಜಿ ನಾಯಕಿಯಾಗಿ ನಟಿಸಿದ 'ಹಿಚ್ಕಿ'ಯಲ್ಲಿಯೂ ಅಭಿನಯಿಸಿದ್ದಾರೆ.
ವೈರಲ್ ಆಗ್ತಿವೆ ನಟಿಯ ಫೋಟೋಗಳು
ಧಾರಾವಾಹಿಗಳ ಜೊತೆಗೆ ಜನ್ನತ್ ಜುಬೈರ್ ಅನೇಕ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜನ್ನತ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಫೋಟೋಗಳಿಗೆ ಭಾರಿ ಕ್ರೇಜ್ ಇದೆ. ಒಂದೇ ಒಂದು ಫೋಟೋ ಹಂಚಿಕೊಂಡ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತವೆ. ಆ ನಟಿಯ ಫೋಟೋಗಳನ್ನ ನೀವಿಲ್ಲಿ ನೋಡಬಹುದು.