Diljit Dosanjh news: ಅಕ್ಟೋಬರ್ 31 ರಂದು ಕಾರ್ಯಕ್ರಮದ ಮುಂಬರುವ ಸಂಚಿಕೆಯ ಪ್ರಚಾರದ ಕ್ಲಿಪ್ ಅನ್ನು ತಯಾರಕರು ಹಂಚಿಕೊಂಡರು. ಅದರಲ್ಲಿ ದಿಲ್ಜಿತ್ ಬಿಗ್ ಬಿ ಅವರ ಪಾದಗಳನ್ನು ಮುಟ್ಟಿ ಅವರಿಗೆ ಗೌರವ ಸಲ್ಲಿಸುತ್ತಿರುವುದು ಕಂಡುಬಂದಿದೆ.
ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ (Punjabi singer Diljit Dosanjh) ಒಂದಲ್ಲ ಒಂದು ಕಾರಣಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಗಾಯಕ ಅಮಿತಾಬ್ ಬಚ್ಚನ್ (Bollywood actor Amitabh Bachchan) ಆಯೋಜಿಸಿದ್ದ ಕ್ವಿಜ್ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) 17 ರಲ್ಲಿ ಭಾಗವಹಿಸಿ, ಅಲ್ಲಿ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟಿ ಗೌರವ ಸಲ್ಲಿಸಿದರು. ಆದರೆ ಬಿಗ್ ಬಿ ಕಾಲಿಗೆ ಬಿದ್ದದ್ದು ಖಲಿಸ್ತಾನಿ ಸಂಘಟನೆಗಳಿಗೆ ಇಷ್ಟವಾಗಲಿಲ್ಲ. ಅಂದಿನಿಂದ ಗಾಯಕನಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ದಿಲ್ಜಿತ್ ದೋಸಾಂಜ್ ಈಗ ಇದಕ್ಕೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.
ಅಮಿತಾಬ್ ಬಚ್ಚನ್ ಪಾದ ಮುಟ್ಟಿದ್ದಕ್ಕೆ ಗದ್ದಲ
ಅಕ್ಟೋಬರ್ 31 ರಂದು ಕಾರ್ಯಕ್ರಮದ ಮುಂಬರುವ ಸಂಚಿಕೆಯ ಪ್ರಚಾರದ ಕ್ಲಿಪ್ ಅನ್ನು ತಯಾರಕರು ಹಂಚಿಕೊಂಡರು. ಅದರಲ್ಲಿ ದಿಲ್ಜಿತ್ ಬಿಗ್ ಬಿ ಅವರ ಪಾದಗಳನ್ನು ಮುಟ್ಟಿ ಅವರಿಗೆ ಗೌರವ ಸಲ್ಲಿಸುತ್ತಿರುವುದು ಕಂಡುಬಂದಿದೆ. ಈಗ ಸಂಚಿಕೆ ಪ್ರಸಾರವಾಗುವ ಒಂದು ದಿನ ಮೊದಲು ನಿಷೇಧಿತ ಖಲಿಸ್ತಾನಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (Sikhs for Justice) ವಿಡಿಯೋ ನೋಡಿ ದೋಸಾಂಜ್ ಅವರನ್ನು ಗುರಿಯಾಗಿಸಿಕೊಂಡಿದೆ. ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು(SFJ chief Gurpatwant Singh Pannun) , ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟಿದ್ದಕ್ಕಾಗಿ ದಿಲ್ಜಿತ್‌ಗೆ ಎಚ್ಚರಿಕೆ ನೀಡಿದರು ಮತ್ತು ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ಅವರ ಮುಂಬರುವ ಸಂಗೀತ ಕಚೇರಿಯನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದರು.
ಇದೀಗ ವಿವಾದ ಮತ್ತು ಬೆದರಿಕೆಗಳಿಗೆ ಪ್ರತಿಕ್ರಿಯಿಸುತ್ತಾ ದಿಲ್ಜಿತ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಅವರು ಬೆದರಿಕೆಗಳಿಗೆ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ಕೌನ್ ಬನೇಗಾ ಕರೋಡ್ ಪತಿಯಲ್ಲಿ ಭಾಗವಹಿಸಲು ಕಾರಣವನ್ನು ವಿವರಿಸಿದ್ದಾರೆ. ತಾನು ವೈಯಕ್ತಿಕ ಪ್ರಚಾರಕ್ಕಾಗಿ ಅಲ್ಲ, ಪಂಜಾಬ್ ಅನ್ನು ಬೆಂಬಲಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.
ದಿಲ್ಜಿತ್ ದೋಸಾಂಜ್ ಪೋಸ್ಟ್‌ನಲ್ಲಿ ಇರುವುದೇನು?
"ನಾನು ಅಲ್ಲಿಗೆ ಯಾವುದೇ ಸಿನಿಮಾ ಪ್ರಚಾರ ಮಾಡಲು ಹೋಗಿಲ್ಲ, ಬೇರೆ ಏನನ್ನೋ ಪ್ರಚಾರ ಮಾಡಲು ಹೋಗಿಲ್ಲ. ಪಂಜಾಬ್‌ನಲ್ಲಿ ನಿರಂತರ ಪ್ರವಾಹದಿಂದಾಗಿ ಜನ ತತ್ತರಿಸಿದ್ದಾರೆ. ಆದ್ದರಿಂದ ನಾನು ಈ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಅಲ್ಲಿಗೆ ಹೋಗಿದ್ದೆ. ಏಕೆಂದರೆ ಜನರು ದೇಣಿಗೆ ನೀಡಲಿಕ್ಕಾಗಿ" ಎಂದು ದಿಲ್ಜಿತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ (Instagram Story) ಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕೆ ಕಾರಣವನ್ನು ವಿವರಿಸಿದ್ದಾರೆ.

ಏನಿದು ವಿವಾದ?
ಸಿಖ್ ನರಮೇಧ ಸ್ಮರಣಾರ್ಥ ಮೆಲ್ಬೋರ್ನ್(Melbourne)ನಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಯನ್ನು ಅಡ್ಡಿಪಡಿಸುವುದಾಗಿ ಖಲಿಸ್ತಾನಿ ಭಯೋತ್ಪಾದಕ ಗುಂಪು ಬೆದರಿಕೆ ಹಾಕಿದೆ. "ಬಚ್ಚನ್ ಅವರ ಪಾದಗಳನ್ನು ಮುಟ್ಟುವ ಮೂಲಕ, ದಿಲ್ಜಿತ್ ದೋಸಾಂಜ್ 1984 ರ ಸಿಖ್ ನರಮೇಧದ ಪ್ರತಿಯೊಬ್ಬ ಸಂತ್ರಸ್ತರು, ಪ್ರತಿಯೊಬ್ಬ ವಿಧವೆ ಮತ್ತು ಪ್ರತಿಯೊಬ್ಬ ಅನಾಥರನ್ನು ಅವಮಾನಿಸಿದ್ದಾರೆ" ಎಂದು ಗುಂಪು ಹೇಳಿಕೆ ನೀಡಿದೆ. 1984 ರಲ್ಲಿ ಇಂದಿರಾ ಗಾಂಧಿ ಅಂಗರಕ್ಷಕನಿಂದ ಹತ್ಯೆಯಾದ ನಂತರ ಸಿಖ್ ವಿರೋಧಿ ಗಲಭೆಗಳು ಭುಗಿಲೆದ್ದವು. ಇದರಲ್ಲಿ ದೆಹಲಿಯಲ್ಲಿ ಸುಮಾರು 2,800 ಜನರು ಮತ್ತು ಭಾರತದಾದ್ಯಂತ 3,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಗಲಭೆಗಳ ನಂತರ, ಅಮೃತಸರ ಮೂಲದ ಅಕಲ್ ತಖ್ತ್ ಸಾಹಿಬ್ ನವೆಂಬರ್ 1 ಅನ್ನು ಸತ್ತವರ ಸ್ಮರಣಾರ್ಥ ಸಿಖ್ ನರಮೇಧ ಸ್ಮಾರಕ ದಿನವೆಂದು ಘೋಷಿಸಿತು.