- Home
- Entertainment
- ಸದ್ದಿಲ್ಲದೆ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟಿ: ಬಹುಕಾಲದ ಗೆಳೆಯನನ್ನು ವರಿಸಿದ ಪ್ರಿಯಾ!
ಸದ್ದಿಲ್ಲದೆ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟಿ: ಬಹುಕಾಲದ ಗೆಳೆಯನನ್ನು ವರಿಸಿದ ಪ್ರಿಯಾ!
ತಮಿಳು ಚಿತ್ರರಂಗದ ನಟಿಯರಲ್ಲೊಬ್ಬರಾದ ಪ್ರಿಯಾ ಭವಾನಿ ಶಂಕರ್ ಅವರ ಮದುವೆ ಸರಳವಾಗಿ ನಡೆದಿದೆ. ಅವರು ತಮ್ಮ ಬಹುಕಾಲದ ಗೆಳೆಯ ರಾಜವೇಲ್ ಜೊತೆ ಮದುವೆ ದಿರಿಸಿನಲ್ಲಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಪ್ರಿಯಾ ಭವಾನಿ ಶಂಕರ್ ಮದುವೆ
ತಮಿಳು ಚಿತ್ರರಂಗದ ನಟಿಯರಲ್ಲೊಬ್ಬರಾದ ಪ್ರಿಯಾ ಭವಾನಿ ಶಂಕರ್ ಅವರ ಮದುವೆ ಸರಳವಾಗಿ ನಡೆದಿದೆ. ಅವರು ತಮ್ಮ ಬಹುಕಾಲದ ಗೆಳೆಯ ರಾಜವೇಲ್ ಜೊತೆ ಮದುವೆ ದಿರಿಸಿನಲ್ಲಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಪ್ರಿಯಾ ಭವಾನಿ ಶಂಕರ್ಗೆ ಮದುವೆ ಆಗಿದೆಯಾ ಅಂತ ಪ್ರಶ್ನಿಸುತ್ತಿದ್ದಾರೆ.
ವೈರಲ್ ಆಗಿರುವ ಆ ವಿಡಿಯೋದಲ್ಲಿ ಪ್ರಿಯಾ ಭವಾನಿ ಶಂಕರ್ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು ಮದುಮಗಳ ಅಲಂಕಾರದಲ್ಲಿ ಕುಳಿತಿದ್ದಾರೆ. ಅವರ ಪಕ್ಕದಲ್ಲಿ ರಾಜವೇಲ್ ಬಿಳಿ ಬಣ್ಣದ ಉಡುಪಿನಲ್ಲಿ ಇದ್ದಾರೆ. ಇಬ್ಬರೂ ಮದುವೆ ಹಾರವನ್ನು ಹಾಕಿಕೊಂಡಿದ್ದು, ರಾಜವೇಲ್ ತಾಳಿ ಕಟ್ಟುವ ದೃಶ್ಯಗಳೂ ಅದರಲ್ಲಿವೆ.
ಮದುವೆಯ ಸುಳಿವು ನೀಡಿದ ಇನ್ಸ್ಟಾಗ್ರಾಮ್ ಪೋಸ್ಟ್ಗಳು!
ಈ ವಿಡಿಯೋ ಬಿಡುಗಡೆಯಾಗುವ ಮುನ್ನವೇ ಪ್ರಿಯಾ ಭವಾನಿ ಶಂಕರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗಳು ಅಭಿಮಾನಿಗಳಲ್ಲಿ ಕೆಲವು ಅನುಮಾನಗಳನ್ನು ಮೂಡಿಸಿದ್ದವು. ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಜವೇಲ್ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಇಬ್ಬರೂ ಮಲ್ಲಿಗೆ ಹೂವಿನ ಹಾರ ಹಾಕಿಕೊಂಡಿದ್ದರು. ಮತ್ತೊಂದು ಪೋಸ್ಟ್ನಲ್ಲಿ ಕೈಗೆ ಮೆಹಂದಿ ಹಚ್ಚಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದರು.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಮದುವೆ ಸಿದ್ಧತೆಗಳು ಏನಾದರೂ ನಡೆಯುತ್ತಿವೆಯಾ ಎಂದು ಪ್ರಶ್ನಿಸಿದ್ದರು. ಆದರೆ, ಮದುವೆ ಬಗ್ಗೆ ಅವರು ಆಗ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಬಿಡುಗಡೆಯಾಗಿರುವ ವಿಡಿಯೋ ಊಹಾಪೋಹಗಳನ್ನು ನಿಜ ಮಾಡಿದೆ.
ಅನಿರುದ್ಧ್ ಮದುವೆ ನಿರೀಕ್ಷೆಯ ನಡುವೆ ಬಂದ ಸರ್ಪ್ರೈಸ್!
ಇಂದು ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಮದುವೆಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಪ್ರಿಯಾ ಭವಾನಿ ಶಂಕರ್ ಅವರ ಮದುವೆಯ ವಿಡಿಯೋ ಸರ್ಪ್ರೈಸ್ ಆಗಿ ಹೊರಬಂದು ಅಂತರ್ಜಾಲದಲ್ಲಿ ಗಮನ ಸೆಳೆಯುತ್ತಿದೆ. ಅನಿರುದ್ಧ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಪ್ರಿಯಾ ಅವರ ವಿಡಿಯೋ ಬಿಡುಗಡೆಯಾಗಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.
ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ, ಮದುವೆಯ ಮಾಹಿತಿಯನ್ನು ಮುಂಚಿತವಾಗಿ ಪ್ರಕಟಿಸದಿದ್ದರೂ, ಮದುವೆಯ ದೃಶ್ಯಗಳು ಇದೀಗ ಬಿಡುಗಡೆಯಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ ಎಂದು ಕಾಮೆಂಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪ್ರೀತಿಯಿಂದ ಮದುವೆಯವರೆಗೆ!
ಇನ್ನು ಕಿರುತೆರೆಯಲ್ಲಿ ಸುದ್ದಿ ವಾಚಕಿಯಾಗಿ ಪಯಣ ಆರಂಭಿಸಿ, ನಂತರ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಬೆಳೆದವರು ಪ್ರಿಯಾ ಭವಾನಿ ಶಂಕರ್. ಹಲವು ಸಿನಿಮಾಗಳಲ್ಲಿ ನಟಿಸಿ ತಮಗಾಗಿಯೇ ಒಂದು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಕಾಲೇಜು ದಿನಗಳಿಂದಲೇ ರಾಜವೇಲ್ ಜೊತೆ ಪ್ರೀತಿಯಲ್ಲಿರುವ ಪ್ರಿಯಾ, ಹಲವು ವರ್ಷಗಳಿಂದ ತಮ್ಮ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇಬ್ಬರೂ ಕಳೆದ ವರ್ಷ ಹೊಸ ಮನೆ ಕಟ್ಟಿ ಗೃಹಪ್ರವೇಶವನ್ನೂ ಮಾಡಿದ್ದರು.
ಆಗ ಮದುವೆ ಯಾವಾಗ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ನಡೆಯಲಿದೆ ಎಂದು ಪ್ರಿಯಾ ಉತ್ತರಿಸಿದ್ದರು. ಸದ್ಯ ಇದೀಗ ಸರ್ಪ್ರೈಸ್ ಆಗಿ ಮದುವೆ ಮಾಡಿಕೊಂಡಿದ್ದಾರೆ. ಮದುವೆ ಗುಟ್ಟಾಗಿ ನಡೆದಿದ್ದರೂ, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿತ ಆರತಕ್ಷತೆ ಕಾರ್ಯಕ್ರಮವನ್ನು ನಡೆಸಲು ಈ ಜೋಡಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













