ಶಿವಣ್ಣ ಸಿನಿಮಾದ ರೆಕಾರ್ಡಿಂಗ್ ಮುಗ್ತಿದ್ದಂತೆ ಸಾಹಿತಿಯನ್ನು ತಬ್ಬಿಕೊಂಡಿದ್ರು SBP
2000ರಲ್ಲಿ ಬಿಡುಗಡೆಯಾದ ಶಿವರಾಜ್ಕುಮಾರ್ ಚಿತ್ರದ ಹಾಡಿನ ಸಾಹಿತ್ಯಕ್ಕೆ ಎಸ್ಪಿಬಿ ಮಾರುಹೋಗಿದ್ದರು. ಈ ಹಾಡಿನ ರೆಕಾರ್ಡಿಂಗ್ ಮುಗಿದ ನಂತರ ಗೀತಸಾಹಿತಿ ಅವರನ್ನು ಎಸ್ಪಿಬಿ ಅಪ್ಪಿಕೊಂಡು ಅಪಾರ ಮೆಚ್ಚುಗೆ ಸೂಚಿಸಿದ್ದರು.

ಶಿವರಾಜ್ಕುಮಾರ್ ಸಿನಿಮಾದ ಹಾಡು
2000ರಲ್ಲಿ ಬಿಡುಗಡೆಯಾದ ಶಿವರಾಜ್ಕುಮಾರ್ ಸಿನಿಮಾದ ಹಾಡಿನ ರೆಕಾರ್ಡಿಂಗ್ ಮುಗಿಸಿ ಬರುತ್ತಿದ್ದಂತೆ ಸಾಹಿತಿಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅಪ್ಪಿಕೊಂಡು ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದರು. ಸಿನಿಮಾ ಬಿಡುಗಡೆಯಾಗಿ 26 ವರ್ಷ ಆಗಿದ್ರೂ ಇಂದಿಗೂ ಈ ಹಾಡು ಕೇಳುಗರನ್ನು ಕುಣಿಸುತ್ತಿದೆ. ಇತ್ತೀಚೆಗೆ ಎಸ್ಪಿಬಿ ಅವರ ಮಾನಸಪುತ್ರ ರಾಜೇಶ್ ಕೃಷ್ಣನ್ ಈ ಹಾಡು ಹಾಡಿದ್ದರು. ಅದು ಸಹ ವೈರಲ್ ಆಗುತ್ತಿದೆ.
ಪದಗಳಿಗೆ ಜೀವ ತುಂಬುತ್ತಿದ್ದ ಎಸ್ಪಿಬಿ
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಕೇಳುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಹಾಡಿನ ಒಂದೊಂದು ಅಕ್ಷರಕ್ಕೂ ಎಸ್ಪಿಜಿ ಜೀವ ತುಂಬುತ್ತಿದ್ದರು. ಪದಗಳ ಗುಚ್ಛಕ್ಕೆ ಜೀವ ತುಂಬುತ್ತಿದ್ದ ಎಸ್ಪಿಬಿ ಕೆಲವೊಂದು ಹಾಡುಗಳ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ಆಂಧ್ರಪ್ರದೇಶ ಮೂಲದವರಾದ ಎಸ್ಪಿಬಿ ಕರುನಾಡಿನ ಪುತ್ರ ಎಂದು ಹೇಳಿಕೊಳ್ಳುತ್ತಿದ್ದರು.
ಯಾವುದು ಈ ಸಿನಿಮಾ?
2000ರಲ್ಲಿ ಬಿಡುಗಡೆಯಾದ ಗಲಾಟೆ ಅಳಿಯಂದ್ರು ಸಿನಿಮಾ ಕಾಮಿಡಿ ಜೊತೆ ರೊಮ್ಯಾಂಟಿಕ್ ಕಥೆಯೊಂದಿಗೆ ಮ್ಯೂಸಿಕಲ್ ಹಿಟ್ ಆಗಿತ್ತು. ಗಲಾಟೆ ಅಳಿಯಂದ್ರು ಸಿನಿಮಾವು ಆರು ಹಾಡುಗಳನ್ನು ಹೊಂದಿದೆ. ಕನ್ನಡದ ಸಿಂಗಿಂಗ್ ರಿಯಾಲಿಟಿ ಶೋ ಅಥವಾ ಯಾವುದೇ ಆರ್ಕೆಸ್ಟ್ರಾ ಆದ್ರೂ ಗಲಾಟೆ ಅಳಿಯಂದ್ರು ಸಿನಿಮಾದ ಹಾಡುಗಳಿರುತ್ತವೆ.
ಸಾಗರಿಯೇ ಹಾಡು!
ಈ ಚಿತ್ರದ ಸಾಗರಿಯೇ ಹಾಡು ಪ್ರೇಮಕವಿ ಕೆ.ಕಲ್ಯಾಣ್ ಅವರ ಲೇಖನಿಯಲ್ಲಿ ಮೂಡಿಬಂದಿತ್ತು. ಕಲ್ಯಾಣ್ ಅವರ ಅದ್ಭುತ ಪದಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೆ.ಎಸ್.ಚಿತ್ರ ಧ್ವನಿಯಾಗಿದ್ದರು. ಈ ಹಾಡಿನ ರೆಕಾರ್ಡಿಂಗ್ ಮುಗಿಸಿ ಬರುತ್ತಿದ್ದಂತೆ ಎಸ್ಪಿಬಿ ಅವರು ಸಾಹಿತ್ಯವನ್ನು ಮೆಚ್ಚಿ ಕೆ.ಕಲ್ಯಾಣ್ ಅವರನ್ನು ಅಪ್ಪಿಕೊಂಡಿದರಂತೆ. ಪದಗಳ ಜೋಡಣೆ, ಅಲ್ಲಿರುವ ಅಲಂಕಾರಿಕ ಜೋಡಣೆಯನ್ನು ಎಸ್ಪಿಬಿ ಕೊಂಡಾಡಿದ್ದರಂತೆ.
ಹಾಡಿನ ಶೂಟಿಂಗ್
ಸಾಗರಿಯೇ ಹಾಡಿನ ಚಿತ್ರೀಕರಣ ಮಲೇಶಿಯಾದಲ್ಲಿ ನಡೆದಿತ್ತು. ಈ ಹಾಡಿನ ಶೂಟಿಂಗ್ ಆರಂಭಿಸುತ್ತಿದ್ದಂತೆ ಮಳೆ ಬರುತ್ತಿತ್ತಂತೆ. ಮಳೆಯಿಂದ ಸ್ಥಳ ಬದಲಾವಣೆ ಮಾಡಿಕೊಂಡ್ರೂ ಮಳೆ ಬರುತ್ತಿತ್ತಂತೆ. ಮಳೆ ಇಲ್ಲದ ಸ್ಥಳದಲ್ಲಿ ಕಲ್ಯಾಣ್ ಅವರಿಂದ ಹಾಡು ಬರೆಸಿದ್ರೆ ಮಳೆ ಬರುತ್ತೆ ಎಂಬ ಮಾತು ಸಹ ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















