Photo: 'ವಾತ್ಸಲ್ಯ' ಥೀಮ್‌ನಡಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡ ನಟಿ ಹರ್ಷಿಕಾ ಪೂಣಚ್ಚ
ನಟಿ ಹರ್ಷಿಕಾ ಪೂಣಚ್ಚ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, 'ವಾತ್ಸಲ್ಯ' ಥೀಮ್‌ನಡಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಯಶೋದೆ-ಕೃಷ್ಣನ ಪ್ರೀತಿಯನ್ನು ಸಾರುವ ಈ ಫೋಟೋಗಳಲ್ಲಿ, ಅವರು ಕಡುಗೆಂಪು ಕಾಂಚೀಪುರಂ ಸೀರೆಯುಟ್ಟು ಕಂಗೊಳಿಸಿದ್ದು, ಈ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ವಾತ್ಯಲ್ಯ ಥೀಮ್‌ನಡಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನೊಳಗಿನ ಪುಟ್ಟ ಕೃಷ್ಣನನ್ನು ಹೊತ್ತು… ಈ ಕ್ಷಣ ನನ್ನ ಪಾಲಿಗೆ ದೇವಲೋಕವೇ ಸರಿ ಎಂಬ ಸಾಲುಗಳನ್ನು ಹರ್ಷಿಕಾ ಬರೆದುಕೊಂಡಿದ್ದಾರೆ.
ವಾತ್ಸಲ್ಯ ಥೀಮ್
ವಾತ್ಸಲ್ಯ ಎಂಬುದು ಸಂಸ್ಕೃತ/ಕನ್ನಡ ಪದವಾಗಿದ್ದು, ತಾಯಿಯ ಅಪರಿಮಿತ, ಕೋಮಲ ಪ್ರೀತಿಯನ್ನು ಸೂಚಿಸುತ್ತದೆ. ಇದನ್ನು ಹೆಚ್ಚಾಗಿ ಯಶೋದೆಯ ಮಗು ಕೃಷ್ಣನ ಮೇಲಿನ ಪ್ರೀತಿಗೆ ನಿರ್ದಿಷ್ಟವಾಗಿ ಬಳಸಲಾಗುತ್ತದೆ ಎಂಬ ವಿವರಣೆಯನ್ನು ಹರ್ಷಿಕಾ ನೀಡಿದ್ದಾರೆ.
ಅದ್ಭುತವಾದ ಪೇಂಟಿಂಗ್
ಫೋಟೋ ಹಿಂಬದಿಯಲ್ಲಿ ಬಾಲಕೃಷ್ಣದ ಮುದ್ದಾದ ಪೇಟಿಂಗ್ ಕಾಣಬಹುದು. ಶ್ರೀಕೃಷ್ಣ ಜೊತೆ ಎರಡು ನವಿಲು ಮತ್ತು ಕರುವಿನ ಜೊತೆ ಹಸು ಕಾಣಬಹುದಾಗಿದೆ. ಸುಂದರ ಮತ್ತು ಸರಳವಾದ ಈ ಪೇಂಟ್ ಫೋಟೋಗೆ ಪುರಾತನ ಕಾಲದ ರಾಯಲ್ ಟಚ್ ನೀಡುತ್ತಿದೆ. ವಿವಿಧ ಪೋಸ್‌ಗಳಲ್ಲಿ ಹರ್ಷಿಕಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಕಡುಗೆಂಪು ಸೀರೆ
ಹರ್ಷಿಕಾ ಪೂಣಚ್ಚ ಕಾಂಚೀಪುರಂ ಶೈಲಿಯ ವಿಶಿಷ್ಟವಾದ ರೇಷ್ಮೆ ಸೀರೆಯನ್ನು ಧರಿಸಿದ್ದಾರೆ. ಕಡುಗೆಂಪು ಸೀರೆಯು ಸಿಲ್ವರ್ ಮಾದರಿ ಅಥವಾ ಗೋಲ್ಡನ್ ಲೈನ್ ಎಳೆಯ ಬಿಗ್ ಬಾರ್ಡರ್ ಹೊಂದಿದೆ. ಕಡುಗೆಂಪು - ಹಸಿರು ಕಾಂಬಿನೇಷನ್ ಸೀರೆಯಲ್ಲಿ ಹರ್ಷಿಕಾ ಮುದ್ದಾಗಿ ಕಾಣಿಸಿದ್ದಾರೆ.
ಕೃಷ್ಣನ ಆಗಮನದ ನಿರೀಕ್ಷೆಯಲ್ಲಿರುವ ರಾಧೆ
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚ ಮಾತುಗಳಿವು. ಸೆ.17ರ ಆಸುಪಾಸಿನಲ್ಲಿ ಹರ್ಷಿಕಾ ಭುವನ್ ದಂಪತಿ ಎರಡನೇ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಈ ಮೊದಲು ಹರ್ಷಿಕಾ ‘ಕೃಷ್ಣನ ಆಗಮನದ ನಿರೀಕ್ಷೆಯಲ್ಲಿರುವ ರಾಧೆ’ ಎಂಬ ಕಾನ್ಸೆಪ್ಟ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೀಗ ವಾತ್ಸಲ್ಯ ಕಾನ್ಸೆಪ್ಟ್ ಅಡಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

