ಮೈತ್ರಿ ಮೂವಿ ಮೇಕರ್ಸ್ ಜೊತೆ ಕೈ ಜೋಡಿಸಿದ ರಿಷಬ್ ಶೆಟ್ಟಿ: ನಿರ್ಮಾಪಕಿಯಾಗಿ ಪ್ರಗತಿ ಶೆಟ್ಟಿ
ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜತೆ ಕೈ ಜೋಡಿಸಿದ ರಿಷಬ್ ಶೆಟ್ಟಿ ಫಿಲಂಸ್. ಜೈ ಹನುಮಾನ್ ಸಿನಿಮಾ ನಿರ್ಮಾಣಕ್ಕೆ ರಿಷಬ್ ದಂಪತಿ ಸಾಥ್. ಚಿತ್ರದ ನಿರ್ಮಾಪಕಿಯಾಗಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಮುಂದಾಳತ್ವ.

ನಿರ್ಮಾಪಕಿಯಾಗಿ ರಿಷಬ್ ಪತ್ನಿ
ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೇಕರ್ಸ್ ಜೊತೆ ರಿಷಬ್ ಶೆಟ್ಟಿ ಫಿಲಂಸ್ ಕೈಜೋಡಿಸಿದೆ ಎನ್ನಲಾಗಿದೆ. ನಿರ್ಮಾಪಕಿಯಾಗಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಇದರ ಮುಂದಾಳತ್ವ ವಹಿಸಲಿದ್ದು, ಜೈ ಹನುಮಾನ್ ಸಿನಿಮಾದ ನಿರ್ಮಾಣದಲ್ಲಿ ಕೈಜೋಡಿಸುತ್ತಿರುವುದು ಬಹುತೇಕ ಖಚಿತವಾಗಿದೆ.
ದೊಡ್ಡ ಹೆಜ್ಜೆ
ಈ ಮೂಲಕ ರಿಷಬ್ ಹೋಂ ಪ್ರೊಡಕ್ಷನ್ ಬ್ಯಾನರ್ ದೊಡ್ಡ ಹೆಜ್ಜೆ ಇಟ್ಟಿದ್ದು, ಮೊದಲ ಹೆಜ್ಜೆಯಾಗಿ ‘ಜೈ ಹನುಮಾನ್’ ಸಿನಿಮಾ ಮೂಡಿಬರಲಿದೆ. ಈ ಬಗ್ಗೆ ರಿಷಬ್ ಶೆಟ್ಟಿ, ಈವರೆಗಿನ ಸಿನಿಮಾ ಜರ್ನಿಯಲ್ಲಿ ಪ್ರಗತಿ ಶೆಟ್ಟಿ ಪ್ರೊಡಕ್ಷನ್ ಜವಾಬ್ದಾರಿ ನಿಭಾಯಿಸುವ ಸೂಕ್ಷ್ಮ ಅರ್ಥಮಾಡಿಕೊಂಡಿದ್ದಾಳೆ.
ದೊಡ್ಡ ಬೆಂಬಲ
ಅದನ್ನು ಸುಲಭವಾಗಿ ನಿರ್ವಹಿಸುವ ಛಾತಿ ಆಕೆಯಲ್ಲಿದೆ. ನನಗೆ ದೊಡ್ಡ ಬೆಂಬಲವಾಗಿ ನಿಂತಿರುವ ಅವಳು ಇನ್ನುಮುಂದೆ ರಿಷಬ್ ಶೆಟ್ಟಿ ಫಿಲಂಸ್‌ನಲ್ಲಿ ಹೆಚ್ಚಿನ ಜವಾಬ್ದಾರಿಯೊಂದಿಗೆ ಮುಂದಡಿ ಇಡಲಿದ್ದಾಳೆ ಎಂದಿದ್ದಾರೆ.
ಪತ್ನಿ ಬಿಟ್ಟು ಮತ್ತೆಲ್ಲರನ್ನೂ ಅನ್‌ಫಾಲೋ ಮಾಡಿದ ರಿಷಬ್
ಸೋಷಲ್ ಮೀಡಿಯಾದಲ್ಲಿ ತನ್ನ ಪತ್ನಿ ಪ್ರಗತಿ ಶೆಟ್ಟಿ ಹಾಗೂ ತನ್ನ ನಿರ್ಮಾಣ ಸಂಸ್ಥೆಯ ಪೇಜ್ ಬಿಟ್ಟು ಉಳಿದೆಲ್ಲರನ್ನೂ ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ. ಈ ಹಿಂದೆ ಅವರು ಹೊಂಬಾಳೆ ಫಿಲಂಸ್, ರುಕ್ಮಿಣಿ ವಸಂತ್ ಮೊದಲಾದವರನ್ನು ಅನ್‌ಫಾಲೋ ಮಾಡಿದ್ದು ಚರ್ಚೆಯಾಗಿತ್ತು.
ಅಮೆರಿಕದ ಅಕ್ಕ ರಜತ ಉತ್ಸವಕ್ಕೆ ನಟ ರಿಷಬ್ ಶೆಟ್ಟಿ ರಾಯಭಾರಿ
ಅಮೆರಿಕದಲ್ಲಿ ಇಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಂಭ್ರಮವಾದ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲ್ಫಿಯಾ 2026’ ಇದೀಗ ಮತ್ತಷ್ಟು ವೈಭವ ಪಡೆದುಕೊಂಡಿದೆ. ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಈ ಐತಿಹಾಸಿಕ ಮಹೋತ್ಸವಕ್ಕೆ, ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ಹೆಮ್ಮೆ ಮತ್ತು ಸಂತೋಷ
‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲ್ಫಿಯಾ 2026’ ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲಿನ ಅಪಾರ ಪ್ರೀತಿ, ವಿಶಿಷ್ಟ ಕಲಾತ್ಮಕ ದೃಷ್ಟಿಕೋನ ಹೊಂದಿರುವ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಿರುವುದು ಉತ್ತರ ಅಮೆರಿಕದ ಕನ್ನಡ ಸಮುದಾಯಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷ ತಂದಿದೆ ಎಂದು ಅಕ್ಕ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

