ಬಿಹಾರದ ಸೀತಾಮರ್ಹಿಯಲ್ಲಿ, 'ಜಸ್ಟ್ ಮ್ಯಾರೀಡ್' ಎಂದು ಶೃಂಗರಿಸಿದ ಕಾರಿನಲ್ಲಿ ನಕಲಿ ವಧು-ವರರು ಡ್ರಗ್ಸ್ ಸಾಗಿಸುತ್ತಿದ್ದರು. ಪೊಲೀಸರು ಅನುಮಾನದ ಮೇಲೆ ಕಾರನ್ನು ತಡೆದು ಪರಿಶೀಲಿಸಿದಾಗ, ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಜಸ್ಟ್​ ಮ್ಯಾರೀಡ್​ ಎನ್ನುವ ಕಾರೊಂದು ಹೋಗುತ್ತಿತ್ತು. ಅದನ್ನು ಹೊಸದಾಗಿ ಮದುವೆಯಾದ ಜೋಡಿ ಇರುವ ಕಾರಿನಂತೆ ಶೃಂಗಾರ ಮಾಡಲಾಗಿತ್ತು. ಒಳಗಡೆ ಹೊಸದಾಗಿ ಮದುವೆಯಾಗಿರುವಂತೆ ವಧು-ವರರೂ ಕುಳಿತಿದಿದ್ದರು. Just Married ಕಾರನ್ನು ಯಾರೂ ಹಿಡಿಯಲು ಸಾಧ್ಯವೇ ಇಲ್ಲ ಎಂದು ನಿರಾತಂಕವಾಗಿ ಇವರು ಹೊರಟಿದ್ದರು. ಆದರೆ ರಸ್ತೆ ಮಧ್ಯೆಯೇ ಪೊಲೀಸರು ಹಿಡಿದುಬಿಟ್ಟರು. ಹಾಗೆಂದು ಪೊಲೀಸರು ಸುಖಾಸುಮ್ಮನೇ ಈ ಕಾರನ್ನು ಹಿಡಿಯಲಿಲ್ಲ. ಅದರಲ್ಲಿ ಏನಿದೆ ಎನ್ನುವುದನ್ನು ಮೊದಲೇ ಅರಿತಿದ್ದ ಪೊಲೀಸರು ಚೆಕಿಂಗ್​ ನೆಪದಲ್ಲಿ ಅದನ್ನು ಹಿಡಿದಾಗ ಕಾರಿನಿಂದ ವರ ಮಹಾಶಯ ಹೊರಕ್ಕೆ ಬಂದು, ಜಗಳ ಮಾಡಲು ಆರಂಭಿಸಿದ. ನಾವು ಹೊಸದಾಗಿ ಮದುವೆಯಾಗಿರುವ ಜೋಡಿ. ಇದು ನಮ್ಮ ಕಾರು. ಈ ಶುಭ ಗಳಿಗೆಯಲ್ಲಿ ಇದೇನಿದು ಚೆಕಿಂಗ್​ ಎಂದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆಕ್​ ಮಾಡಿದ ಪೊಲೀಸರು

ಆದರೆ ಪೊಲೀಸ್ರು ಬಿಟ್ಟಾರೆಯೇ? ಚೆಕ್​ ಮಾಡಿಯೇ ಬಿಟ್ಟರು. ಅಲ್ಲಿಗೆ ಪೊಲೀಸರು ಅಂದುಕೊಂಡಿದ್ದು ನಿಜವಾಗಿತ್ತು. ಅದು ಮದುವೆಯ ಕಾರೂ ಆಗಿರಲಿಲ್ಲ. ಅಲ್ಲಿ ಇರುವವರು ನೂತನ ದಂಪತಿಯೂ ಆಗಿರಲಿಲ್ಲ. ಬದಲಿಗೆ ಆಗಿದ್ದೇ ಬೇರೆ. ಅಲ್ಲಿ ಸಿಕಿದ್ದು ಅಪಾರ ಪ್ರಮಾಣದ ಡ್ರಗ್ಸ್​!

ಎಲ್ಲಿ ಈ ಕೇಸ್​?

ಬಿಹಾರದ ಸೀತಾಮರ್ಹಿಯಲ್ಲಿ ನಕಲಿ ವಿವಾಹ ಮೆರವಣಿಗೆಯಲ್ಲಿ ತೊಡಗಿದ್ದ ಮಾದಕವಸ್ತು ಕಳ್ಳಸಾಗಣೆ ಕಾರ್ಯಾಚರಣೆಯನ್ನು ಪೊಲೀಸರು ಭೇದಿಸಿ, ಅಲಂಕರಿಸಿದ ವರನ ಕಾರಿನಿಂದ ಅಪಾರ ಪ್ರಮಾಣದ ಗುಂಜಾ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಇವುಗಳನ್ನು ಸಾಗಿಸುವಾಗ ಅನುಮಾನ ಬರದಂತೆ ಆರೋಪಿಗಳು ವಾಹನವನ್ನು ನಿಜವಾದ ಮದುವೆಯ ಕಾರಿನ ರೀತಿಯಲ್ಲಿ ಸಿಂಗರಿಸಿದ್ದರು.

ಗಾಂಜಾ ಪತ್ತೆ

ತಪಾಸಣಾ ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಅನುಮಾನಾಸ್ಪದ ವಾಹನವನ್ನು ತಡೆದು ಶೋಧ ನಡೆಸಿದರು, ಇದರಿಂದಾಗಿ ಕಾರಿನೊಳಗೆ ಅಡಗಿಸಿಟ್ಟಿದ್ದ ದೊಡ್ಡ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಮದುವೆ ಆಚರಣೆಗಳ ನೆಪದಲ್ಲಿ ಕಳ್ಳಸಾಗಣೆದಾರರು ಸರಕನ್ನು ಸಾಗಿಸಲು ಪ್ರಯತ್ನಿಸುತ್ತಿದ್ದರು ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ವಶಪಡಿಸಿಕೊಂಡ ನಂತರ ಹಲವಾರು ಶಂಕಿತರನ್ನು ಬಂಧಿಸಲಾಯಿತು, ಆದರೆ ಅಧಿಕಾರಿಗಳು ಜಾಲಕ್ಕೆ ಸಂಬಂಧಿಸಿದ ಇತರರನ್ನು ಗುರುತಿಸಲು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.