MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಪತಿ ನಿಧನರಾಗಿ ಎರಡು ವರ್ಷಕ್ಕೆ ಮತ್ತೊಂದು ಮದುವೆಗೆ ಸಿದ್ಧರಾದ್ರಾ ಈ ನಟಿ!

ಪತಿ ನಿಧನರಾಗಿ ಎರಡು ವರ್ಷಕ್ಕೆ ಮತ್ತೊಂದು ಮದುವೆಗೆ ಸಿದ್ಧರಾದ್ರಾ ಈ ನಟಿ!

ಪತಿ ರಾಜ್‌ ಕೌಶಾಲ್‌ ನಿಧನರಾಗಿ ಕಳೆದ ಜೂನ್‌ 30ಕ್ಕೆ ಎರಡು ವರ್ಷವಾಗಿದೆ. ಇದರ ಬೆನ್ನಲ್ಲಿಯೇ ಅವರ ಪತ್ನಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ, ಹೊಸ ರಿಲೇಶಷನ್‌ಷಿಪ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.

2 Min read
Author : Santosh Naik
Published : Sep 01 2023, 06:10 PM IST
Share this Photo Gallery
  • FB
  • TW
  • Linkdin
  • Whatsapp
114

ನಟಿ, ಫ್ಯಾಶನ್‌ ಡಿಸೈನರ್‌, ಟಿವಿ ನಿರೂಪಕಿ ಬಹುಶಃ ನಟಿ ಮಂದಿರಾ ಬೇಡಿ ಮಾಡದ ಕೆಲಸಗಳೇ ಇಲ್ಲ. ಇಂದಿಗೂ ಯುವ ಜನಾಂಗದ ಮಹಿಳೆಯರಿಗೆ ಸ್ಪೂರ್ತಿಯಾಗುವ ಸಾಕಷ್ಟು ರೋಲ್‌ಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ.

214

51 ವರ್ಷದ ಮಂದಿರಾ ಬೇಡಿ ಜೀವನದಲ್ಲಿ 2021ರ ಜೂನ್‌ 30ರಂದು ಬಹುದೊಡ್ಡ ಆಘಾತ ಎದುರಾಗಿತ್ತು. 21 ವರ್ಷಗಳ ಕಾಲ ಸಂಗಾತಿಯಾಗಿದ್ದ ರಾಜ್‌ ಕೌಶಲ್‌ ಕಾರ್ಡಿಯಾಕ್‌ ಅರೆಸ್ಟ್‌ನಿಂದ ಸಾವು ಕಂಡಿದ್ದರು.

314

ರಾಜ್‌ ಕೌಶಾಲ್‌ ನಿಧನರಾದ ಬಳಿಕ ಮಂದಿರಾ ಬೇಡಿ ಕೆಲವೊಂದು ದಿನ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ, ದಿನಗಳು ಕಳೆದ ಹಾಗೆ ಮಂದಿರಾ ಬೇಡಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.

414

ತಮ್ಮ ಸೋಶಿಯಲ್‌ ಮೀಡಿಯಾ ಪುಟಗಳಲ್ಲಿ ಫಿಟ್‌ನೆಸ್‌ ಕುರಿತಾದ, ಟ್ರಿಪ್‌ಗಳಿಗೆ ಹೋಗಿರುವ ಚಿತ್ರಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

514

ಇತ್ತೀಚೆಗೆ ಅವರು ಮಾಲ್ಡಿವ್ಸ್‌ ವೆಕೇಶನ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮಂದಿರಾ ಬೇಡಿಯ ಜೊತೆ ಮೋಟ್ವಾನೆ ವೆಡ್ಡಿಂಗ್ಸ್‌ನ ನಿರ್ದೇಶಕ ಆದಿತ್ಯ ಮೋಟ್ವಾನೆ ಕಾಣಿಸಿಕೊಂಡಿದ್ದಾರೆ.

614

ಆದಿತ್ಯ ಮೋಟ್ವಾನೆ ಹಾಗೂ ಮಂದಿರಾ ಬೇಡಿ ಚಿಕ್ಕ ವಯಸ್ಸಿನಿಂದಲೇ ಸ್ನೇಹಿತರು. ರಾಜ್‌ ಕೌಶಾಲ್‌ ನಿಧನದ ಬಳಿಕ ಮಂದಿರಾಗೆ ಜೀವನದ ಕುರಿತಾಗಿ ಮತ್ತಷ್ಟು ಭರವಸೆ ನೀಡಿದ್ದು ಆದಿತ್ಯ ಮೋಟ್ವಾನೆ.

714

ಇನ್ನು ಆದಿತ್ಯ ಮೋಟ್ವಾನೆ ಜೊತೆಗಿನ ಚಿತ್ರವನ್ನು ಮಂದಿರಾ ಹಂಚಿಕೊಂಡ ಬಳಿಕ, ಇಬ್ಬರದು ಬರೀ ಸ್ನೇಹ ಮಾತ್ರವಲ್ಲ. ಅದಕ್ಕಿಂತ ಮಿಗಿಲಾಗಿದ್ದು ಇನ್ನೇನೋ ಇದೆ ಎಂದು ಪ್ರತಿಕ್ರಿಯೆಗಳು ಬರುತ್ತಿವೆ.

814

ಆದಿತ್ಯ ಮೋಟ್ವಾನೆ ಜೊತೆಗಿನ ಸಾಕಷ್ಟು ಚಿತ್ರಗಳನ್ನು ಮಂದಿರಾ ಬೇಡಿ ಹಂಚಿಕೊಂಡಿದ್ದರೂ, ಕೆಲವೊಂದು ಚಿತ್ರಗಳನ್ನು ಅವರು ಡಿಲೀಟ್‌ ಮಾಡಿದ್ದಾರೆ.

 

914

ಪೋಸ್ಟ್‌ ಮಾಡಿರುವ ಒಂದು ಚಿತ್ರದಲ್ಲಿ ಮಂದಿರಾ ಬೇಡಿ, ಆದಿತ್ಯ ಮೋಟ್ವಾನೆಯ ಮೂಗಿಗೆ ಬೆರಳು ಇಟ್ಟಿದ್ದರೆ, ಇನ್ನೊಂದು ಚಿತ್ರದಲ್ಲಿ ಮೋಟ್ವಾನೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮಂದಿರಾರನ್ನು ಆಪ್ತವಾಗಿ ತಬ್ಬಿಕೊಂಡಿದ್ದಾರೆ.

1014

ಇನ್ನು ಮಂದಿರಾ ಬೇಡಿ ಹಂಚಿಕೊಂಡ ಚಿತ್ರಗಳಿಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಅದರ ಬೆನ್ನಲ್ಲಿಯೇ ಮಂದಿರಾ ಬೇಡಿ ಆ ಪೋಸ್ಟ್‌ಗೆ ಕಾಮೆಂಟ್‌ ಸೆಕ್ಷನ್‌ಅನ್ನು ಬಂದ್‌ ಮಾಡಿದ್ದಾರೆ.

1114

ಇದು ಆಕೆಯ ಆಯ್ಕೆ. ಒಬ್ಬಂಟಿಯಾಗಿ ಜೀವನಪೂರ್ತಿ ಬದುಕೋದು ಸಾಧ್ಯವಿಲ್ಲ. ನೋವನ್ನು ಮರೆತು ಆಕೆ ಹೊಸ ಸಂಗಾತಿಯನ್ನು ಹುಡುಕಿಕೊಂಡಿದ್ದರಲ್ಲಿ ತಪ್ಪೇನಿದೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

1214

ಮಂದಿರಾ ಬೇಡಿಗೆ ಇಬ್ಬರು ಮಕ್ಕಳಿದ್ದಾರೆ. 2011ರ ಜೂನ್‌ 19ಕ್ಕೆ ವೀರ್‌ ಎನ್ನುವ ಪುತ್ರನಿಗೆ ಮಂದಿರಾ ಬೇಡಿ ಮುಂಬೈನಲ್ಲಿ ಜನ್ಮ ನೀಡಿದ್ದರು.

1314

ಅದಾದ ಬಳಿಕ ಒಂದು ಹೆಣ್ಣು ಮಗುವನ್ನು ಮಂದಿರಾ ಬೇಡಿ ಹಾಗೂ ರಾಜ್‌ ಕೌಶಲ್‌ ದತ್ತು ಪಡೆದುಕೊಳ್ಳಲು 2013ರಲ್ಲಿ ಅರ್ಜಿ ಸಲ್ಲಿಸಿದ್ದರು. 

1414

ಅದರಂತೆ 2020ರ ಜುಲೈ 28 ರಂದು ಮಂದಿರಾ ಬೇಡಿ ಹಾಗೂ ರಾಜ್‌ ಕೌಶಾಲ್‌ 4 ವರ್ಷದ ಹೆಣ್ಣುಮಗುವನ್ನು ದತ್ತು ತೆಗೆದುಕೊಂಡು, ತಾರಾ ಬೇಡಿ ಕೌಶಾಲ್‌ ಎಂದು ಹೆಸರಿಟ್ಟಿದ್ದರು. ಅದಾದ ಒಂದು ವರ್ಷಕ್ಕೆ ರಾಜ್‌ ಕೌಶಾಲ್‌ ನಿಧನರಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ

Latest Videos
Recommended Stories
Recommended image1
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image2
ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview
Recommended image3
ಸ್ಟಾರ್‌ ಹೀರೋಗಳ ಜೊತೆ ನಟಿಸಿ, UK ಕಂಪೆನಿಗೆ ಡೈರೆಕ್ಟರ್‌ ಆದ ನಟ ದರ್ಶನ್‌ ಸಿನಿಮಾ ಹೀರೋಯಿನ್!‌ ಯಾರದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved