MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಅಚಾನಕ್‌ ಆಗಿ ತುಟಿಗೆ ತುಟಿ ತಾಗಿದ್ದಕ್ಕೆ ಹೀಗೆ ಮಾಡಿಬಿಟ್ರಾ ಕೆಜಿಎಫ್‌ ನಟಿ!

ಅಚಾನಕ್‌ ಆಗಿ ತುಟಿಗೆ ತುಟಿ ತಾಗಿದ್ದಕ್ಕೆ ಹೀಗೆ ಮಾಡಿಬಿಟ್ರಾ ಕೆಜಿಎಫ್‌ ನಟಿ!

ಸ್ಕ್ರೀನ್‌ ಮೇಲೆ ನೋ ಕಿಸ್‌ ಪಾಲಿಸಿಯನ್ನು ಪಾಲನೆ ಮಾಡಿಕೊಂಡು ಬಂದ ಕೆಲವೇ ಕೆಲವು ನಟಿಯರಲ್ಲಿ ಇವರು ಒಬ್ಬರು. ಆದರೆ, ಹಿಂದೊಮ್ಮೆ ಆಗಿದ್ದ ಘಟನೆಯೊಂದನ್ನು ಕೆಜಿಎಫ್‌ ನಟಿ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

2 Min read
Santosh Naik
Published : Sep 28 2023, 07:35 PM IST
Share this Photo Gallery
  • FB
  • TW
  • Linkdin
  • Whatsapp
117

ಬಾಲಿವುಡ್‌ನಲ್ಲಿ ನೋ ಕಿಸ್‌ ಪಾಲಿಸಿಯನ್ನು ಇಂದಿಗೂ ನಡೆಸಿಕೊಂಡು ಬಂದಿರುವ ಕೆಲವೇ ಕೆಲವು ನಟಿಯರಲ್ಲಿ ಹಿರಿಯ ನಟಿ ರವೀನಾ ಟಂಡನ್‌ ಕೂಡ ಒಬ್ಬರು.

217

ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ರವೀನಾ ಟಂಡನ್‌ ಅವರಿಗೆ ಇತ್ತೀಚೆಗೆ ಕನ್ನಡದ ಕೆಜಿಎಫ್‌ ಚಿತ್ರದಲ್ಲಿ ನಟಿಸಿದ ಪಾತ್ರ ದೊಡ್ಡ ಮಟ್ಟದ ಮನ್ನಣೆ ತಂದುಕೊಟ್ಟಿತು.

317

ಇತ್ತೀಚೆಗೆ ಸಂದರ್ಶನವೊಂದರಲ್ಲಿ ರವೀನಾ ಟಂಡನ್‌ ತಮ್ಮ ಚಿತ್ರ ಜೀವನದ ಆರಂಭದಲ್ಲಿ ಆದ ಅಹಿತಕರ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

417

ಸಿನಿಮಾವೊಂದರಲ್ಲಿ ನಟಿಸುವ ವೇಳೆ ಅಚಾನಕ್‌ ಆಗಿ ಹೀರೋನ ತುಟಿ ನನ್ನ ತುಟಿಗೆ ತಾಕಿತ್ತು. ಅಚಾನಕ್‌ ಆಗಿದ್ದ ಕಿಸ್‌ ಅದಾಗಿತ್ತು ಎಂದು ರವೀನಾ ಹೇಳಿದ್ದಾರೆ.

517

ಆದರೆ, ಆ ಕಿಸ್‌ ಎಷ್ಟು ಕೆಟ್ಟದಾಗಿತ್ತೆಂದರೆ ಅದನ್ನೇ ಪದೇ ಪದೇ ನೆನಪಿಸಿಕೊಂಡು ವಾಂತಿ ಕೂಡ ಮಾಡಿಕೊಂಡಿದ್ದೆ ಎಂದು ರವೀನಾ ಹೇಳಿದ್ದಾರೆ.

617

ಆದರೆ, ಅದು ಯಾವ ಸಿನಿಮಾ, ಹೀರೋ ಯಾರು ಎನ್ನುವ ಯಾವ ಮಾಹಿತಿಯನ್ನೂ ರವೀನಾ ಬಿಟ್ಟುಕೊಟ್ಟಿಲ್ಲ. ಅದು ಅಚಾನಕ್‌ ಆಗಿರುವ ಘಟನೆ ಎಂದು ತಿಳಿಸಿದ್ದಾರೆ.

717

ನಟಿಯಾಗಿ ಆರಂಭಿಕ ದಿನಗಳಿಂದಲೂ ನೋ ಕಿಸ್ಸಿಂಗ್‌ ಪಾಲಿಸಿಯನ್ನು ರವೀನಾ ಪಾಲಿಸಿಕೊಂಡು ಬಂದಿದ್ದಾರೆ. ಆ ದಿನಗಳಲ್ಲಿ ಸ್ಕ್ರೀನ್‌ ಮೇಲೆ ಕಿಸ್‌ ಮಾಡುವ ಒಪ್ಪಂದಗಳು ಇರುತ್ತಿರಲಿಲ್ಲ. ನಾನು ಎಂದೂ ಮಾಡಿಲ್ಲ. ನನಗೆ ಅದು ಕಂಫರ್ಟಬಲ್‌ ಆಗಿರುತ್ತಿರಲಿಲ್ಲ ಎಂದಿದ್ದಾರೆ.

817

ಈಗ ರವೀನಾ ಟಂಡನ್‌ ಅವರ ಪುತ್ರಿ ರಾಶಾ ಥಾಡಾನಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ. ಇನ್ನು ಮಗಳು ಆನ್‌ಸ್ಕ್ರೀನ್‌ನಲ್ಲಿ ಕಿಸ್‌ ಸೀನ್‌ ಮಾಡಲು ಕಂಫರ್ಟಬಲ್‌ ಅನಿಸದರೆ ನನಗೆನೂ ತೊಂದರೆ ಇಲ್ಲ ಎಂದಿದ್ದಾರೆ.

917

ಅದು ಆಕೆಯ ನಿರ್ಧಾರ. ಹೀರೋ ಜೊತೆ ಕಿಸ್ಸಿಂಗ್‌ ಸೀನ್‌ ಮಾಡಲು ಆಕೆಗೆ ಕಂಫರ್ಟಬಲ್‌ ಅನಿಸಿದರೆ, ನಾನೇಕೆ ತಡೆಯಲಿ. ಅವಳು ಮಾಡಲು ಬಯಸದ ಯಾವುದನ್ನಾದರೂ ಮಾಡಲು ಅವಳನ್ನು ಒತ್ತಾಯಿಸುವ ಅಧಿಕಾರ ಯಾರಿಗೂ ಇರಬಾರದು ಎಂದು ತಿಳಿಸಿದ್ದಾರೆ.

1017

ತಮ್ಮ ಸಿನಿ ಜೀವನದ ಕಹಿ ಘಟನೆಯ ಬಗ್ಗೆ ವಿವರಿಸಿದ ರವೀನಾ, ಇದು ಕೆಲ ವರ್ಷಗಳ ಹಿಂದಿನ ಮಾತು, ಹೀರೋ ಜೊತೆ ಕಷ್ಟದ ಸೀನ್‌ನಲ್ಲಿ ಭಾಗಿಯಾಗಿದ್ದೆ. ನಮ್ಮಿಬ್ಬರ ಮುಖಗಳು ಬಹಳ ಹತ್ತಿರ ಇದ್ದವು.

1117

ಸುಮ್ಮನೆ ಆಕೆ ಕಡೆ ತಿರುಗಿ ನೋಡುವಾಗ, ಆತನ ತುಟಿ ನನ್ನ ತುಟಿಗೆ ತಾಕಿ ಬಿಟ್ಟಿತು. ನನಗೆ ಒಂದು ರೀತಿ ಅಲ್ಲಿಯೇ ಕಸಿವಿಸಿ ಆಗಿತ್ತು ಎಂದು ರವೀನಾ ಹೇಳಿದ್ದಾರೆ.

1217

ಇದು ಅಚಾನಕ್‌ ಆಗಿದ್ದ ಘಟನೆ. ಸಿನಿಮಾಗೂ ಕೂಡ ಇದು ಅಗತ್ಯವಿರಲಿಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ಕಿಸ್‌ ಆಗಿ ಹೋಗಿತ್ತು ಎಂದು 48 ವರ್ಷದ ನಟಿ ಹೆಳಿದ್ದಾರೆ.

1317

ಸೀದಾ ನನ್ನ ರೂಮ್‌ಗೆ ಓಡಿ ಹೋಗಿದ್ದೆ. ಎಲ್ಲವನ್ನೂ ಎಸೆದುಬಿಟ್ಟಿದ್ದೆ. ನನಗೆ ಅದು ಕಂಫರ್ಟಬಲ್‌ ಅನಿಸಿರಲಿಲ್ಲ. ಶೂಟಿಂಗ್‌ ಮುಗಿದ ಬಳಿಕ ಮತ್ತೊಮ್ಮೆ ನನಗೆ ವಾಕರಿಕೆ ಬರುವಂತೆ ಆಗುತ್ತಿತ್ತು ಎಂದಿದ್ದಾರೆ.

1417

ಆ ಸೀನ್‌ ನೆನೆಸಿಕೊಳ್ಳಲು ಕಷ್ಟವಾಗುತ್ತಿತ್ತು. 'ಎಷ್ಟು ಉಗಿದರೂ ಕಿಸ್‌ ನೆನಪಾಗುತ್ತಲೇ ಇತ್ತು' ಎಂದು ರವೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

1517

ಅದರಲ್ಲೂ ನನ್ನ ಮನಸ್ಸು, ನಿನ್ನ ಹಲ್ಲುಗಳನ್ನು ಉಜ್ಜು, ನಿನ್ನ ಬಾಯನ್ನು ನೂರು ಸಾರಿ ವಾಶ್‌ ಮಾಡು ಎಂದಂತೆ ಕೇಳುತ್ತಿತ್ತು ಎಂದು ರವೀನಾ ನೆನಪಿಸಿಕೊಂಡಿದ್ದಾರೆ.

1617

2004ರಲ್ಲಿ ನಿರ್ಮಾಪಕ ಅನಿಲ್‌ ಥಡಾನಿಯ ವಿವಾಹವಾಗಿರುವ ರವೀನಾ ಟಂಡನ್‌ಗೆ ಇಬ್ಬರು ಮಕ್ಕಳು. 18 ವರ್ಷದ ರಾಶಾ ಥಡಾನಿ ಹಾಗೂ ರಣಬೀರ್‌ ಥಡಾನಿ.

ತಮಿಳು ನಟನಿಂದ ಶೂಟಿಂಗ್‌ ಸೆಟ್‌ನಲ್ಲಿ ದೌರ್ಜನ್ಯ? ನಟಿ ನಿತ್ಯಾ ಮೆನನ್‌ ಹೇಳಿದ್ದೇನು..

1717

ಇನ್ನು ರವೀನಾ ಟಂಡನ್‌ ಕೊನೆಯ ಬಾರಿಗೆ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಿದ್ದು, ಒನ್‌ ಫ್ರೈಡೇ ನೈಟ್‌ ಚಿತ್ರದಲ್ಲಿ. ಗುಡ್‌ಚಡಿ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಕರ್ನಾಟಕದ ಪ್ರಖ್ಯಾತ ನಟಿಯ ಮದುವೆ?

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved