- Home
- Entertainment
- ಅಲ್ಲು ಅರ್ಜುನ್ ಜೊತೆ ನಟಿಸುವ ಆಸೆ, 3 ಸಿನಿಮಾಗಳಿಗೇ ಸಿಕ್ಕಾಪಟ್ಟೆ ಕ್ರೇಜ್: ಆಶಿಕಾ ಕನಸು ನನಸಾಗುತ್ತಾ?
ಅಲ್ಲು ಅರ್ಜುನ್ ಜೊತೆ ನಟಿಸುವ ಆಸೆ, 3 ಸಿನಿಮಾಗಳಿಗೇ ಸಿಕ್ಕಾಪಟ್ಟೆ ಕ್ರೇಜ್: ಆಶಿಕಾ ಕನಸು ನನಸಾಗುತ್ತಾ?
ಅಲ್ಲು ಅರ್ಜುನ್ ಜೊತೆ ಜಾಹೀರಾತೊಂದರಲ್ಲಿ ನಟಿಸಿರುವ ಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್, ಮುಂದಿನ ದಿನಗಳಲ್ಲಿ ಅವರ ಜೊತೆ ಸಿನಿಮಾ ಸೆಟ್ನಲ್ಲಿ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

ಇಬ್ಬರು ಜೊತೆಯಾಗಿ ಪೋಸ್
ಕನ್ನಡದ ನಟಿ ಆಶಿಕಾ ರಂಗನಾಥ್ ಈಗ ತೆಲುಗು ಸಿನಿಮಾಗಳಲ್ಲೂ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಿದ ಅನುಭವವನ್ನು ಆಶಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಿಲ್ಲ, ಬದಲಾಗಿ ಒಂದು ಜಾಹೀರಾತು ಶೂಟಿಂಗ್ಗಾಗಿ ಆಶಿಕಾಗೆ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಶೂಟಿಂಗ್ ಮುಗಿದ ನಂತರ ಅವರ ಜೊತೆಗಿನ ಎರಡು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಸೆಲ್ಫಿ ಆಗಿದ್ದು, ಮತ್ತೊಂದು ಫೋಟೋದಲ್ಲಿ ಇಬ್ಬರು ಜೊತೆಯಾಗಿ ಪೋಸ್ ನೀಡಿದ್ದಾರೆ.
ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವ ಆಸೆ
ಈ ಫೋಟೋಗಳನ್ನು ಶೇರ್ ಮಾಡಿರುವ ಆಶಿಕಾ ರಂಗನಾಥ್ ಒಂದು ಇಂಟರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬ ಖುಷಿಯಾಯ್ತು ಎಎ! ಮತ್ತೆ ಭೇಟಿಯಾಗೋಣ. ಅದು ಕೂಡ ಸಿನಿಮಾ ಸೆಟ್ನಲ್ಲಿ ಆದರೆ ಚೆನ್ನಾಗಿರುತ್ತೆ ಅಂತ ಅಂದುಕೊಂಡಿದ್ದೀನಿ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಲ್ಲು ಅರ್ಜುನ್ ಜೊತೆ ಮತ್ತೆ ತೆರೆ ಹಂಚಿಕೊಳ್ಳುವ, ಅದರಲ್ಲೂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಅವರು ಹೊರಹಾಕಿದ್ದಾರೆ. ಸದ್ಯಕ್ಕಂತೂ ಇವರಿಬ್ಬರು ಒಟ್ಟಿಗೆ ನಟಿಸಿದ್ದು ಕೇವಲ ಜಾಹೀರಾತಿನಲ್ಲಾದರೂ, ಮುಂದೆ ಸಿನಿಮಾ ಅವಕಾಶ ಸಿಗಬಹುದು ಎಂದು ಆಶಿಕಾ ಭರವಸೆ ಇಟ್ಟುಕೊಂಡಿದ್ದಾರೆ.
ತೆಲುಗು ಸಿನಿಮಾಗಳ ಮೂಲಕ ಮಿಂಚುತ್ತಿರುವ ಆಶಿಕಾ
ಕನ್ನಡ ಚಿತ್ರರಂಗದ ನಟಿ ಆಶಿಕಾ ರಂಗನಾಥ್ ತೆಲುಗು ಸಿನಿಮಾಗಳಲ್ಲೂ ಸಾಲು ಸಾಲು ಅವಕಾಶಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವು ತೆಲುಗು ಚಿತ್ರಗಳಲ್ಲಿ ನಟಿಸಿರುವ ಅವರು, ಇತ್ತೀಚೆಗೆ ರವಿತೇಜ ಜೊತೆ ‘ಭರ್ತ ಮಹಾಶಯುಲಕು ವಿಜ್ಞಪ್ತಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಕಲ್ಯಾಣ್ ರಾಮ್ ಅವರ ಅಮಿಗೋಸ್ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ಆಶಿಕಾ, ಆ ಬಳಿಕ ನಾಗಾರ್ಜುನ ಅವರ ನಾ ಸಾಮಿ ರಂಗ ಚಿತ್ರದಲ್ಲಿ ನಟಿಸಿದ್ದರು. ದೊಡ್ಡ ಹಿಟ್ಗಳು ಇಲ್ಲದಿದ್ದರೂ ತಮ್ಮ ಗ್ಲಾಮರ್ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಸಂಪಾದಿಸಿದ್ದಾರೆ.
ಜಾಹೀರಾತಿನಿಂದ ಸಿನಿಮಾ ವರೆಗೂ ಹೋಗುವ ಆಸೆ
ಅಲ್ಲು ಅರ್ಜುನ್ ಜೊತೆ ಜಾಹೀರಾತು ಶೂಟಿಂಗ್ನಲ್ಲಿ ಭಾಗವಹಿಸಿದ ಅನುಭವವನ್ನು ಆಶಿಕಾ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಅಂತ ಹೇಳ್ತಾರೇ, ಮುಂದಿನ ದಿನಗಳಲ್ಲಿ ಸಿನಿಮಾಕ್ಕಾಗಿ ಮತ್ತೆ ಸೇರುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ, ಜಾಹೀರಾತಿನಿಂದ ಶುರುವಾದ ಇವರ ಪರಿಚಯ ಮುಂದೆ ಸಿನಿಮಾ ತನಕ ಹೋಗುತ್ತಾ ಅನ್ನೋ ಕುತೂಹಲ ಮೂಡಿದೆ. ಆದರೆ, ಸದ್ಯಕ್ಕೆ ಆಶಿಕಾ ಅಲ್ಲು ಅರ್ಜುನ್ ಜೊತೆ ನಟಿಸುವ ತಮ್ಮ ಆಸೆಯನ್ನಷ್ಟೇ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













