ವಿಜಯ್ ‘ಜನ ನಾಯಗನ್’ ಬಿಡುಗಡೆಯಾಗದೇ 5 ತಿಂಗಳು: ಕೊನೆಗೂ ಹೊರಬಿತ್ತು ಅಸಲಿ ಕಾರಣ!
ಸಿಎಂ ವಿಜಯ್ ಮಾತಿನಂತೆ ನಿರ್ಮಾಣಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್‌ಗೆ ಇರುವ ಅಡಚಣೆಗಳು ಕೊನೆಗೊಂಡ ಬಳಿಕ ಕೆವಿಎನ್ ಪ್ರೊಡಕ್ಷನ್ ಸ್ವತಂತ್ರವಾಗಿ ಚಿತ್ರದ ವಿತರಣೆ ಮಾಡಲಿದೆ.

ಮುಂಗಡ ಹಣ
ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ. ಸೆನ್ಸಾರ್ ಸಮಸ್ಯೆ ಬಗೆಹರಿದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿತರಕರು ನೀಡಿದ್ದ ಮುಂಗಡ ಹಣವನ್ನು ವಾಪಸ್ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಮುಂದಾಗಿದೆ.
ಅಡಚಣೆಗಳು ಕೊನೆ
ಸಿಎಂ ವಿಜಯ್ ಮಾತಿನಂತೆ ನಿರ್ಮಾಣಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್‌ಗೆ ಇರುವ ಅಡಚಣೆಗಳು ಕೊನೆಗೊಂಡ ಬಳಿಕ ಕೆವಿಎನ್ ಪ್ರೊಡಕ್ಷನ್ ಸ್ವತಂತ್ರವಾಗಿ ಚಿತ್ರದ ವಿತರಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮಾತುಕತೆ ಹಂತದಲ್ಲಿದೆ
‘ಸಿನಿಮಾ ನಾವು ಅಂದುಕೊಂಡ ಸಮಯಕ್ಕಿಂತ ಮುಂದೆ ಹೋಗಿದೆ. ಬಹಳ ಕಾಲ ವಿತರಕರನ್ನು ಗೊಂದಲದಲ್ಲಿಡುವುದು ಸರಿ ಹೋಗುವುದಿಲ್ಲ. ಹೀಗಾಗಿ ವಿತರಕರು ನೀಡಿದ್ದ ಮುಂಗಡ ಹಣವನ್ನು ಅವರಿಗೆ ಮರಳಿ ನೀಡಲು ನಿರ್ಧರಿಸಿದೆವು. ಆ ಪ್ರಕ್ರಿಯೆ ಮಾತುಕತೆ ಹಂತದಲ್ಲಿದೆ. ನಾವೂ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇವೆ’ ಎಂದು ಕೆವಿಎನ್ ಸಂಸ್ಥೆ ಪ್ರತಿನಿಧಿ ತಿಳಿಸಿದ್ದಾರೆ.
ಬಹಳ ಸಮಸ್ಯೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಜನನಾಯಗನ್’ ಜನವರಿ 9ಕ್ಕೆ ಬಿಡುಗಡೆಯಾಗಬೇಕಿತ್ತು. ಸೆನ್ಸಾರ್ ಸರ್ಟಿಫಿಕೇಟ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿ 5 ತಿಂಗಳಾಗಿದೆ. ಇದರಿಂದ ಮುಂಗಡ ನೀಡಿದ್ದ ವಿತರಕರಿಗೆ ಬಹಳ ಸಮಸ್ಯೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

