ವಿಜಯ್-ರಶ್ಮಿಕಾ ನಟನೆಯ 'ರಣಬಾಲಿ' ಮೊದಲ ದಿನದ ಗಳಿಕೆ: ಬಾಕ್ಸ್ ಆಫೀಸ್ ಲೆಕ್ಕ ಇಲ್ಲಿದೆ
Ranabaali day 1 box office collection ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಸಿನಿಮಾ ಬಿಡುಗಡೆಯಾಗಿದ್ದು, 120 ಕೋಟಿ ಬಜೆಟ್ನ ಈ ಚಿತ್ರವು 1870-80ರ ದಶಕದ ನೈಜ ಘಟನೆಗಳನ್ನು ಆಧರಿಸಿದೆ.

ರಣಬಾಲಿ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ 'ರಣಬಾಲಿ' ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನದ ಕಲೆಕ್ಷನ್ ಎಷ್ಟು ಆಗಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ರಣಬಾಲಿ ಚಿತ್ರಕ್ಕೆ ರಾಹುಲ್ ಸಂಕೃತ್ಯನ್ ಆಕ್ಷನ್ ಕಟ್ ಹೇಳಿದ್ದಾರೆ. 1870-80ರ ಕಾಲಘಟ್ಟದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಸಿಂಗನಮಲ ಭಾಗದಲ್ಲಿ ನಡೆದ ನೈಜ ಘಟನೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಮೊದಲ ದಿನ ಕಲೆಕ್ಷನ್
'ರಣಬಾಲಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ವಿಜಯ್ ದೇವರಕೊಂಡ ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದು ತುಂಬಾನೇ ಕಡಿಮೆ ಎಂದು ಹೇಳಲಾಗುತ್ತಿದೆ. ಮೊದಲ ದಿನ ವಿಶ್ವಾದ್ಯಂತ 16.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 10.75 ಕೋಟಿ ಹಾಗೂ ವಿದೇಶಗಳಲ್ಲಿ 5.75 ಕೋಟಿ ರೂಪಾಯಿ ಗಳಿಸಿದೆ.
120 ಕೋಟಿ ರೂಪಾಯಿ ಬಜೆಟ್
'ರಣಬಾಲಿ' ಚಿತ್ರದ ಬಜೆಟ್ 120 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದರಲ್ಲಿ ಥಿಯೇಟರೇತರ ಹಕ್ಕುಗಳಿಂದಲೇ 60 ಕೋಟಿ ರೂಪಾಯಿ ರಿಕವರಿ ಆಗಿದೆಯಂತೆ. ಥಿಯೇಟರ್ಗಳಿಂದ ಇನ್ನು 60 ಕೋಟಿ ರೂಪಾಯಿ ಶೇರ್ ಬರಬೇಕಿದೆ. ಅಂದರೆ 100 ರಿಂದ 120 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಬೇಕು. ಆದರೆ ಸದ್ಯ ಶೇ.15ರಷ್ಟು ಕಲೆಕ್ಷನ್ ಮಾತ್ರ ಆಗಿದೆ. ಅಂದರೆ ಸುಮಾರು 10 ಕೋಟಿ ಶೇರ್ ಸಿಕ್ಕಿದೆ. ಇನ್ನು 100 ಕೋಟಿಗೂ ಅಧಿಕ ಕಲೆಕ್ಷನ್ ಆಗಬೇಕಿದೆ. ಇದು ಸಾಧ್ಯನಾ ಅಂತ ಕಾದು ನೋಡಬೇಕು.
ಜೈಲರ್ 2
ವಿಜಯ್ ಅವರ ಹಿಂದಿನ ಸಿನಿಮಾ 'ಕಿಂಗ್ಡಮ್' ಮೊದಲ ದಿನವೇ 39 ಕೋಟಿ ರೂಪಾಯಿ ಗಳಿಸಿತ್ತು. ಆದರೆ ರಣಬಾಲಿ ಅದರಲ್ಲಿ ಅರ್ಧದಷ್ಟು ಕಲೆಕ್ಷನ್ ಮಾಡದಿರುವುದು ಅಚ್ಚರಿ ಮೂಡಿಸಿದೆ. ಟಿಕೆಟ್ ದರ ಏರಿಕೆ ಮಾಡದಿರುವುದು, 'ಜೈಲರ್ 2' ಸಿನಿಮಾದ ಅಬ್ಬರ ಹಾಗೂ ಅದೇ ದಿನ 'ಕ್ರೇಜಿ ಕಲ್ಯಾಣಂ' ರಿಲೀಸ್ ಆಗಿರುವುದು ಕಲೆಕ್ಷನ್ ಮೇಲೆ ಪೆಟ್ಟು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಪಿಕ್ ಅಪ್ ಆದರೆ ಸಿನಿಮಾ ಗೆಲ್ಲುವ ಚಾನ್ಸ್ ಇದೆ.
ನೈಸರ್ಗಿಕ ಬರಗಾಲ ಹಾಗೂ ಬ್ರಿಟಿಷರು ಸೃಷ್ಟಿಸಿದ ಬರ
'ರಣಬಾಲಿ' ಒಂದು ಪಿರಿಯಡ್ ಆಕ್ಷನ್ ಎಮೋಷನಲ್ ಡ್ರಾಮಾ. 1870-80ರ ದಶಕದಲ್ಲಿ ಬಂದ ನೈಸರ್ಗಿಕ ಬರಗಾಲ ಹಾಗೂ ಬ್ರಿಟಿಷರು ಸೃಷ್ಟಿಸಿದ ಬರಗಾಲ ಜನರನ್ನು ತೀವ್ರವಾಗಿ ಕಾಡಿತ್ತು. ಲಕ್ಷಾಂತರ ಜನ ಪ್ರಾಣ ಬಿಟ್ಟರು. ಜನರ ಧಾನ್ಯಗಳನ್ನು ಲೂಟಿ ಮಾಡಿದ ಬ್ರಿಟಿಷರ ವಿರುದ್ಧ ರಣಬಾಲಿ ಮಾಡಿದ ಹೋರಾಟವೇ ಈ ಸಿನಿಮಾದ ಕಥೆ.
ಮನಕಲುಕುವ ನೈಜ ಕಥೆ
ಮನಕಲುಕುವ ನೈಜ ಕಥೆಯನ್ನು ನಿರ್ದೇಶಕ ರಾಹುಲ್ ಸಂಕೃತ್ಯನ್ ಕಟ್ಟಿಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ನಟನೆ ಅದ್ಭುತವಾಗಿದೆ. ರಶ್ಮಿಕಾ ಮಂದಣ್ಣ ಅವರ ಎಮೋಷನಲ್ ಪಾತ್ರ ಕೂಡ ಚೆನ್ನಾಗಿ ಮೂಡಿಬಂದಿದೆ. ಆದರೆ, ಇಂಥ ಸಬ್ಜೆಕ್ಟ್ ಪ್ರೇಕ್ಷಕರಿಗೆ ತಲುಪುವುದು ಬಹಳ ಮುಖ್ಯ. ಕಮರ್ಷಿಯಲ್ ಆಂಗಲ್ನಲ್ಲಿ ಈ ಸಿನಿಮಾ ನೋಡಲು ಸಾಧ್ಯವಿಲ್ಲ. ಇದೇ ಚಿತ್ರಕ್ಕೆ ಮೈನಸ್ ಆಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

