MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 2026ರ ಅತಿದೊಡ್ಡ ಫ್ಲಾಪ್ ಸಿನಿಮಾ; 1400 ಕೋಟಿ ಬಂಡವಾಳಕ್ಕೆ ಸಿಕ್ಕಿದ್ದು ಕೇವಲ 6 ಕೋಟಿ

2026ರ ಅತಿದೊಡ್ಡ ಫ್ಲಾಪ್ ಸಿನಿಮಾ; 1400 ಕೋಟಿ ಬಂಡವಾಳಕ್ಕೆ ಸಿಕ್ಕಿದ್ದು ಕೇವಲ 6 ಕೋಟಿ

ಇಂಟರ್‌ನ್ಯಾಷನಲ್ ಸ್ಟಾರ್ ಕಲಾವಿದರು ನಟಿಸಿರುವ  ಸಿನಿಮಾ 1400 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಹಾಲಿವುಡ್‌ನ ಖ್ಯಾತನಾಮರ ದಂಡೇ ಇದ್ದರೂ, ಈ ಚಿತ್ರವು ವಿಶ್ವಾದ್ಯಂತ ಕೇವಲ 6 ಕೋಟಿ ಗಳಿಸಿ, ಜಗತ್ತಿನ ಅತಿದೊಡ್ಡ ಫ್ಲಾಪ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

2 Min read
Author : Mahmad Rafik
Published : May 12 2026, 11:53 AM IST
Share this Photo Gallery
  • FB
  • TW
  • Linkdin
  • Whatsapp
16
ಮುಗ್ಗರಿಸಿದ ಸಿನಿಮಾ
Image Credit : X Account

ಮುಗ್ಗರಿಸಿದ ಸಿನಿಮಾ

ಕಳೆದ ಒಂದು ದಶಕದಿಂದ ಸಿನಿಮಾಗಳ ಬಜೆಟ್‌ ಪ್ರಮಾಣ ಏರಿಕೆಯಾಗುತ್ತಿದೆ. 1000 ಕೋಟಿಯ ವಾರಾಣಸಿ, 4 ಸಾವಿರ ಕೋಟಿ ಬಜೆಟ್‌ನಲ್ಲಿ ರಾಮಾಯಣ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ರೀತಿ ಬಿಗ್ ಬಿಜೆಟ್‌ ಹೊಂದಿರುವ ಎರಡು ಸಿನಿಮಾಗಳು ಚೀನಾದಲ್ಲಿ ಸಕ್ಸಸ್ ಆಗಿವೆ. ಹಾಗೆಯೇ ಕೆಲವೊಂದು ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಮುಗ್ಗರಿಸಿದ ಉದಾಹರಣೆಗಳಿವೆ

Add Asianetnews Kannada as a Preferred SourcegooglePreferred
26
 1400 ಕೋಟಿ ಹೂಡಿಕೆ
Image Credit : X Account

1400 ಕೋಟಿ ಹೂಡಿಕೆ

ಸೌದಿ ಅರೇಬಿಯಾದ ಸಿನಿಮಮಾವೊಂದರ ನಿರ್ಮಾಣಕ್ಕಾಗಿ 1400 ಕೋಟಿ ಹೂಡಿಕೆ ಮಾಡಿತ್ತು. ಈ ಸಿನಿಮಾದಲ್ಲಿ ಹಾಲಿವುಡ್ ಅಂಗಳದ ಸ್ಟಾರ್ ಕಲಾವಿದರು ನಟಿಸಿದ್ರೂ, ವೀಕ್ಷಕರನ್ನು ಸೆಳೆಯಲು ಸಂಪೂರ್ಣ ವಿಫಲವಾಯ್ತು. ಈ ಚಿತ್ರದ ನಿರ್ಮಾಣ ಸಂಸ್ಥೆ ಶೇ.99.6ರಷ್ಟು ನಷ್ಟವನ್ನು ಅನುಭವಿಸಿದೆ. ಈ ಸಿನಿಮಾ ಜಗತ್ತಿನ ಅತಿದೊಡ್ಡ ಫ್ಲಾಪ್ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.

Related Articles

Related image1
131 ಕೋಟಿಯ ಈ ಸಿನಿಮಾ ಆಯ್ತು ಬಾಕ್ಸ್‌ ಆಫಿಸ್‌ನ ಮಹಾಫ್ಲಾಪ್; 29 ಹಾಡುಗಳಿದ್ರೂ ಸೋಲು
Related image2
ಈ ಸಿನಿಮಾ ಥಿಯೇಟರ್‌ಗಾಗಿ ಕಾದಿದ್ದು ಬರೋಬ್ಬರಿ 12 ವರ್ಷ; ಬಿಡುಗಡೆಯಾಗುತ್ತಲೇ ಬಾಕ್ಸ್‌ ಆಫಿಸ್ ಧೂಳಿಪಟ, 3 ಪಟ್ಟು ಗಳಿಕೆ
36
ಡಿಸರ್ಟ್ ವಾರಿಯರ್
Image Credit : X Account

ಡಿಸರ್ಟ್ ವಾರಿಯರ್

ನವೆಂಬರ್ 2021ರಂದು ಸೌದಿ ಮೀಡಿಯಾ ಗ್ರೂಪ್ MBC Group ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. "ಡಿಸರ್ಟ್ ವಾರಿಯರ್" ಹೆಸರಿನ ನಿರ್ಮಾಣದ ಘೋಷಣೆ ಮಾಡಿದ್ದ MBC Studios, ಈ ಸಿನಿಮಾದಿಂದ ಸೌದಿ ಅರೇಬಿಯಾದ ಚಿತ್ರೋದ್ಯಮದ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. JB Pictures, AGC Studios ಮತ್ತು Studio Mechanica ಮೂವರು ಸೇರಿಕೊಂಡು ಸಿನಿಮಾ ನಿರ್ಮಾಣ ಮಾಡಿದ್ದರು.

46
ನಿರೀಕ್ಷೆ ಮೂಡಿಸಿದ್ದ ಸ್ಟಾರ್ ಕಲಾವಿದರ ಸಿನಿಮಾ
Image Credit : X Account

ನಿರೀಕ್ಷೆ ಮೂಡಿಸಿದ್ದ ಸ್ಟಾರ್ ಕಲಾವಿದರ ಸಿನಿಮಾ

ಈ ಚಿತ್ರಕ್ಕೆ ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್‌ ಖ್ಯಾತಿಯ ರೂಪರ್ಟ್ ವ್ಯಾಟ್ ಆಕ್ಷನ್ ಕಟ್ ಹೇಳಿದ್ದರು. ಮಾರ್ವೆಲ್‌ನ ಹೊಸ ಕ್ಯಾಪ್ಟನ್ ಅಮೇರಿಕಾ, ಆಂಟನಿ ಮ್ಯಾಕಿ, ಹಂಜಾಲಾ ಪಾತ್ರದಲ್ಲಿ ಮತ್ತು ಆಸ್ಕರ್ ವಿಜೇತ ಬೆನ್ ಕಿಂಗ್ಸ್ಲಿ, ಚಕ್ರವರ್ತಿ ಕಿಸ್ರಾ, ದಕ್ಷಿಣ ಆಫ್ರಿಕಾದ ನಟ ಶಾರ್ಲ್ಟೊ ಕೊಪ್ಲಿ, ಬ್ರಿಟಿಷ್-ಸೌದಿ ನಟಿ ಆಯೇಷಾ ಹಾರ್ಟ್ ಪ್ರಿನ್ಸೆಸ್ ಸೇರಿದಂತೆ ವಿಶ್ವದ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರಿಂದ, ಬಿಡುಗಡೆಗೂ ಮುನ್ನವೇ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.

56
ಎಷ್ಟು ಕಲೆಕ್ಷನ್?
Image Credit : X Account

ಎಷ್ಟು ಕಲೆಕ್ಷನ್?

ಸೌದಿ ಅರೇಬಿಯಾ, ಅಮೆರಿಕಾ ಸೇರಿದಂತೆ ಯಾವುದೇ ದೇಶದಲ್ಲಿಯೂ ಈ ಸಿನಿಮಾಗೆ ಒತ್ತಮ ಓಪನಿಂಗ್ ಸಿಗಲಿಲ್ಲ. ಉತ್ತರ ಅಮೆರಿಕಾದ 1010 ಸ್ಕ್ರೀನ್‌ಗಳಲ್ಲಿ ತೆರೆಕಂಡರೂ ಕೇವಲ $472K ಕಲೆಕ್ಷನ್ ಮಾಡಿತ್ತು. ಸೌದಿ ಅರೇಬಿಯಾದಲ್ಲಿ $87K, ಮಧ್ಯಪ್ರಾಚ್ಯದಲ್ಲಿ $140K ನೀರಸ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಕೇವಲ 6 ಕೋಟಿ ಕಲೆಕ್ಷನ್ ಮಾಡುವಲ್ಲಿ ಮಾತ್ರ ಡಿಸರ್ಟ್ ವಾರಿಯರ್ ಸಕ್ಸಸ್ ಆಗಿದೆ ಎಂದು ವರದಿಗಳು ಪ್ರಕಟವಾಗಿವೆ.

ಇದನ್ನೂ ಓದಿ: Box Office Disaster : ವಿವಾದಗಳ ಜೊತೆಯಲ್ಲಿಯೇ ಬಿಡುಗಡೆಯಾದ ಸಿನಿಮಾಗೆ ಟೀ ಖರ್ಚಿಗೂ ಬರಲಿಲ್ಲ ದುಡ್ಡು?

66
ಇಂಟರ್‌ನ್ಯಾಷನಲ್ ಸ್ಟಾರ್‌
Image Credit : X Account

ಇಂಟರ್‌ನ್ಯಾಷನಲ್ ಸ್ಟಾರ್‌

ಇಂಟರ್‌ನ್ಯಾಷನಲ್ ಸ್ಟಾರ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಸಿನಿಮಾ ಬಜೆಟ್ 1400 ಕೋಟಿಗೆ ಏರಿಕೆಯಾಗಿತ್ತು. 2025ರಲ್ಲಿ Zurich ಫಿಲಂ ಫೆಸ್ಟಿವಲ್‌ನಲ್ಲಿ ರಿಲೀಸ್ ಆಗುವ ಮುನ್ನ ಎರಡು ವರ್ಷ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿತ್ತು. ಅಂತಿಮವಾಗಿ 2026 ಏಪ್ರಿಲ್‌ನಲ್ಲಿ ಅಂತರಾಷ್ಟ್ರೀಯಮಟ್ಟದಲ್ಲಿ ಬಿಡುಗಡೆಯಾದ್ರೂ, ಥಿಯೇಟರ್‌ಗೆ ಪ್ರೇಕ್ಷಕರನ್ನು ಸೆಳೆಯಲು ಸಂಪೂರ್ಣವಾಗಿ ವಿಫಲವಾಯ್ತು.

ಇದನ್ನೂ ಓದಿ: 16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಿನಿಮಾ
ಹಾಲಿವುಡ್
ಬಾಕ್ಸ್ ಆಫೀಸ್ ಕಲೆಕ್ಷನ್

Latest Videos
Recommended Stories
Recommended image1
BREAKING: ಸಿಎಂ ಆಗ್ತಿದ್ದಂತೆ ಹೊಸ ರೂಲ್ಸ್ ತಂದ Thalapathy Vijay; ಸೈಲೆಂಟ್‌ ಆದ ವಿರೋಧಿಗಳು!
Recommended image2
ಕೆಡಿ ಜೈದೇವ್‌ನಿಂದ ದೂರವಾಗಿ ತಣ್ಣಗಿದ್ದ ದಿಯಾ ಬೇಬಿಗೆ ಭಯಂಕರವಾದ ಸಲಹೆ ನೀಡಿದ ಗೆಳತಿ
Recommended image3
ಮದುವೆಯಾಗಿ 4 ವರ್ಷ, ಬೆಂಗಳೂರಿನ ಗಂಡನಿಂದ ದೂರವಾಗ್ತಿದ್ದಾರಾ Naagin Serial ನಟಿ? ಸಿಕ್ಕೇಬಿಡ್ತು ಸುಳಿವು!
Related Stories
Recommended image1
131 ಕೋಟಿಯ ಈ ಸಿನಿಮಾ ಆಯ್ತು ಬಾಕ್ಸ್‌ ಆಫಿಸ್‌ನ ಮಹಾಫ್ಲಾಪ್; 29 ಹಾಡುಗಳಿದ್ರೂ ಸೋಲು
Recommended image2
ಈ ಸಿನಿಮಾ ಥಿಯೇಟರ್‌ಗಾಗಿ ಕಾದಿದ್ದು ಬರೋಬ್ಬರಿ 12 ವರ್ಷ; ಬಿಡುಗಡೆಯಾಗುತ್ತಲೇ ಬಾಕ್ಸ್‌ ಆಫಿಸ್ ಧೂಳಿಪಟ, 3 ಪಟ್ಟು ಗಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved