- Home
- Entertainment
- DK ಶಿವಕುಮಾರ್ ಫೋನ್ ಮಾಡಿದ್ರು, ಧ್ವನಿ ಕೇಳಿ ಭಯ ಬಿದ್ದೆ; ರಾಜಕೀಯ ನಾಯಕರ ಭೇಟಿ, ಗಿಲ್ಲಿ ನಟ ಹೇಳಿದ್ದೇನು?
DK ಶಿವಕುಮಾರ್ ಫೋನ್ ಮಾಡಿದ್ರು, ಧ್ವನಿ ಕೇಳಿ ಭಯ ಬಿದ್ದೆ; ರಾಜಕೀಯ ನಾಯಕರ ಭೇಟಿ, ಗಿಲ್ಲಿ ನಟ ಹೇಳಿದ್ದೇನು?
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಗಿಲ್ಲಿ ನಟ ಅವರು ಈಗಾಗಲೇ ಕಪ್ ಗೆದ್ದು, ವಿಜಯಯಾತ್ರೆಯೂ ಆಗಿದೆ. ಈ ರಿಯಾಲಿಟಿ ಶೋ ಕ್ರೇಜ್ ನೋಡಿ ರಾಜಕೀಯ ನಾಯಕರು ಕೂಡ ಗಿಲ್ಲಿಗೆ ಅಭಿನಂದನೆ ಹೇಳಿದ್ದಾರಂತೆ.

ಎಂಎಲ್‌ಎ ಮತ ಕೇಳಿದ್ರು
ಮಳವಳ್ಳಿ ಎಂಎಲ್‌ಎ ನರೇಂದ್ರ ಸ್ವಾಮಿ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಮತ ಕೇಳಿದ್ದರು. ಎಂಎಲ್‌ಎ ಫಸ್ಟ್ ಟೈಮ್ ಮತ ಕೇಳಿದ್ದು, ಇದೇ ಫಸ್ಟ್. ಈ ಬಗ್ಗೆ ಗಿಲ್ಲಿ ನಟ ಅವರು ಮಾತನಾಡಿದ್ದು, “ಸಿನಿಮಾ ರಂಗ, ರಾಜಕೀಯ ನಾಯಕಿಯರು, ಸಂದರ್ಶನದಲ್ಲಿ ಎಲ್ಲರೂ ಮಾತನಾಡಿದ್ದು ನೋಡಿ ತಲೆ ಕೆಟ್ಟೋಯ್ತು, ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ” ಎಂದು ಹೇಳಿದ್ದಾರೆ.
ಬೇರೆ ಪ್ಲ್ಯಾನ್ ಇತ್ತು
ಗಿಲ್ಲಿ ನಟ ಅವರು, “ಬಿಗ್ ಬಾಸ್ ಮುಗಿದ ಮೇಲಿನ ಪ್ಲ್ಯಾನ್ ಬಗ್ಗೆ ಅಲ್ಲಿಯೇ ಕುಳಿತು ಆಲೋಚನೆ ಮಾಡಿದ್ದೆ. ಆಟ ಮುಗಿದ ನಂತರ ಎಲ್ಲಾದರೂ ಹೋಗಿ ಆಟ ಅಡಿಕೊಂಡು, ಸುತ್ತಾಡಿಕೊಂಡು ಇರೋಣ ಎಂದುಕೊಂಡಿದ್ದೆ. ಈಗ ಸಿಗುತ್ತಿರುವ ಪ್ರೀತಿ ನೋಡಿ ಏನೂ ಮಾಡೋಕೆ ಮನಸ್ಸು ಬರುತ್ತಿಲ್ಲ, ಅದನ್ನು ಹೇಳೋಕೆ ಆಗುತ್ತಿಲ್ಲ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿರುವ ಗಿಲ್ಲಿ ನಟ ಅವರು, “ಸಿದ್ದರಾಮಯ್ಯ ಅವರನ್ನು ನೋಡಿ ಭಯ ಆಯ್ತು. ನನ್ನ ಅವರು ಯಾಕೆ ಹಾಗೆ ನೋಡಿದರು ಎಂದು ಭಯ ಆಯ್ತು. ನಿನ್ನ ತಂದೆ ಏನು ಮಾಡುತ್ತಿದ್ದಾರೆ? ಈ ಸೀಸನ್ ತುಂಬ ಪಾಪುಲರ್ ಆಗಿದೆ. ಎಷ್ಟು ವೋಟ್ ಬಂದಿದೆ ಅಂತೆಲ್ಲ ಕೇಳಿದ್ದರು. ಚೆನ್ನಾಗಿ ಬೆಳಿ ಎಂದು ಆಶೀರ್ವಾದ ಮಾಡಿದರು. ಅಲ್ಲಿದ್ದವರೆಲ್ಲ ನನ್ನ ಬಳಿ ಬಂದು, ಸಿದ್ದರಾಮಯ್ಯ ಅವರು ನಿನ್ನ ನೋಡಿ ಮಾತನಾಡಿಸಿದ್ದಾರೆ, ಅವರು ಯಾವಾಗಲೂ ಹಾಗೆ ಹೇಳಲಿಲ್ಲ” ಎಂದು ಹೇಳಿದ್ದಾರೆ.
ಯಾರು ಯಾರು ಫೋನ್ ಮಾಡಿದ್ರು?
ಸಿಪಿ ಯೋಗೇಶ್ವರ್, ಎಚ್‌ಡಿ ಕುಮಾರಸ್ವಾಮಿ, ರೇಣುಕಾಚಾರ್ಯ ಅವರು ಫೋನ್ ಮಾಡಿ ಮಾತನಾಡಿದ್ದಾರೆ. ನನಗೆ ಹೇಳೋಕೆ ಆಗದಷ್ಟು ಖುಷಿ ಆಗಿದೆ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಏನಂದ್ರು?
ಡಿಕೆ ಶಿವಕುಮಾರ್ ಕೂಡ ಗಿಲ್ಲಿ ನಟನಿಗೆ ಫೋನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಗಿಲ್ಲಿ ನಟ ಅವರು, “ಡಿಕೆ ಶಿವಕುಮಾರ್ ಅವರ ಧ್ವನಿ ಕೇಳಿ ಭಯ ಆಯ್ತು. ಏನಪ್ಪಾ, ಗಿಲ್ಲಿ, ಅಭಿನಂದನೆಗಳು. ಚೆನ್ನಾಗಿ ಆಟ ಆಡಿದ್ಯಾ ಅಂತ ಹೇಳಿದ್ದರು. ಸಿಕ್ಕಾಪಟ್ಟೆ ಖುಷಿ ಆಯ್ತು” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

