- Home
- Entertainment
- Mouni Roy :ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಿಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?
Mouni Roy :ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಿಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?
ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.

ಟಿವಿ ಲೋಕದ ಜನಪ್ರಿಯ ನಟ ಅರ್ಜುನ್ ಬಿಜ್ಲಾನಿ, ಕೊನೆಗೂ ನಟಿ ಮೌನಿ ರಾಯ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಇತ್ತೀಚೆಗೆ ಕೆಲವು ಗಾಸಿಪ್ ಪೇಜ್‌ಗಳು, ಮೌನಿ ರಾಯ್ ತಮ್ಮ ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಂದ ನಂತರ, ಅರ್ಜುನ್ ಮತ್ತು ಮೌನಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವು. ಈ ಬಗ್ಗೆ ಈಗ ಅರ್ಜುನ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ಇವೆಲ್ಲಾ ಸುಳ್ಳು ಸುದ್ದಿ ಎಂದು ಗಾಸಿಪ್ ಪೇಜ್‌ಗಳು ಮತ್ತು ಟ್ರೋಲ್‌ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಏನಿದು ಪೂರ್ತಿ ಗಲಾಟೆ?
ಮೌನಿ ರಾಯ್ ಮತ್ತು ಅರ್ಜುನ್ ಬಿಜ್ಲಾನಿ ಕಳೆದ 15 ವರ್ಷಗಳಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರೂ ಏಕ್ತಾ ಕಪೂರ್ ಅವರ ಸೂಪರ್‌ಹಿಟ್ ಶೋ 'ನಾಗಿನ್' ಮೊದಲ ಸೀಸನ್‌ನಲ್ಲಿ ಒಟ್ಟಿಗೆ ನಟಿಸಿದ್ದರು.
ಇತ್ತೀಚೆಗೆ ಮೌನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗಳು ಜೋರಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಬಗೆಬಗೆಯ ಕಥೆಗಳು ಹುಟ್ಟಿಕೊಂಡವು. ಆದರೆ, ಈ ಸುದ್ದಿಗೆ ಯಾವುದೇ ಅಧಿಕೃತ ಪುರಾವೆ ಇರಲಿಲ್ಲ.
ಮೌನ ಮುರಿದ ಅರ್ಜುನ್ ಬಿಜ್ಲಾನಿ
ಸತತವಾಗಿ ವೈರಲ್ ಆಗುತ್ತಿದ್ದ ಈ ಸುದ್ದಿಗಳ ಬಗ್ಗೆ ಅರ್ಜುನ್ ಬಿಜ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದೀರ್ಘ ಪೋಸ್ಟ್ ಹಾಕಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. '15 ವರ್ಷಗಳಿಂದ ಸ್ನೇಹಿತರಾಗಿರುವ ಇಬ್ಬರು, ಯಾವುದೋ ಗಾಸಿಪ್ ಪೇಜ್‌ಗೆ ಹೆಡ್‌ಲೈನ್ ಬೇಕು ಅಂತಾ ಜೋಡಿಯಾಗಲ್ಲ. ಕೆಲವೊಮ್ಮೆ ಕಷ್ಟದ ಸಮಯದಲ್ಲಿ ಸ್ನೇಹಿತರು ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುತ್ತಾರೆ ಅಷ್ಟೇ. ಪ್ರತಿಯೊಂದು ಸ್ನೇಹಕ್ಕೂ ಪ್ರೀತಿಯ ಬಣ್ಣ ಬಳಿಯುವ ಅಗತ್ಯವಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ. ಕೇವಲ ವೀವ್ಸ್ ಮತ್ತು ಕ್ಲಿಕ್ಸ್‌ಗಾಗಿ ಒಬ್ಬ ಗಂಡು ಮತ್ತು ಹೆಣ್ಣಿನ ಸ್ನೇಹಕ್ಕೆ ಲವ್ ಸ್ಟೋರಿ ಪಟ್ಟ ಕಟ್ಟುವುದು ತಪ್ಪು ಎಂದು ಅರ್ಜುನ್ ಹೇಳಿದ್ದಾರೆ.
'ಪ್ರತಿ ಸ್ನೇಹವನ್ನೂ ಲವ್ ಸ್ಟೋರಿ ಮಾಡಬೇಡಿ'
ಅರ್ಜುನ್ ತಮ್ಮ ಪೋಸ್ಟ್‌ನಲ್ಲಿ, 'ಪ್ರತಿ ಬಾರಿ ಒಬ್ಬ ಗಂಡು ಮತ್ತು ಹೆಣ್ಣು ಒಟ್ಟಿಗೆ ಕಾಣಿಸಿಕೊಂಡಾಗ, ಅದಕ್ಕೆ ಪ್ರೇಮ ಸಂಬಂಧದ ಹೆಸರು ಕೊಡುವುದು ಸರಿಯಲ್ಲ' ಎಂದು ಹೇಳಿದ್ದಾರೆ. ಯಾವುದೇ ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸುವಂತೆ ಅವರು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಪೇಜ್‌ಗಳಿಗೆ ಮನವಿ ಮಾಡಿದ್ದಾರೆ. ಖಚಿತಪಡಿಸಿಕೊಳ್ಳದೆ ವದಂತಿಗಳನ್ನು ಹಬ್ಬಿಸುವುದರಿಂದ ಜನರ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಅರ್ಜುನ್ ಬಿಜ್ಲಾನಿ ಅವರ ಈ ನಿಲುವಿಗೆ ನಟಿ ಕ್ರಿಸ್ಟಲ್ ಡಿಸೋಜಾ ಕೂಡ ಬೆಂಬಲ ಸೂಚಿಸಿದ್ದಾರೆ. ವೈರಲ್ ವಿಡಿಯೋವೊಂದಕ್ಕೆ ಕಾಮೆಂಟ್ ಮಾಡಿದ ಅವರು, 'ಇದೇನಿದು ಅಸಂಬದ್ಧ? ಕೇವಲ ವೀವ್ಸ್‌ಗಾಗಿ ಏನನ್ನಾದರೂ ಪೋಸ್ಟ್ ಮಾಡುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ನಂತರ, ಅನೇಕ ಅಭಿಮಾನಿಗಳು ಸಹ ವದಂತಿ ಹಬ್ಬಿಸುವ ಪೇಜ್‌ಗಳನ್ನು ಟೀಕಿಸಿದ್ದಾರೆ.
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಬೇರೆ ಬೇರೆ
ಈ ವರ್ಷದ ಮೇ ತಿಂಗಳಲ್ಲಿ, ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರೆಯಾಗುವುದಾಗಿ ಘೋಷಿಸಿದ್ದರು. 'ನಾವು ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಬೇರೆ ಬೇರೆ ದಾರಿ ಹಿಡಿಯಲು ನಿರ್ಧರಿಸಿದ್ದೇವೆ' ಎಂದು ಇಬ್ಬರೂ ಜಂಟಿ ಹೇಳಿಕೆ ನೀಡಿದ್ದರು.
ಈ ಕಷ್ಟದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರು ಮನವಿ ಮಾಡಿದ್ದರು. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಸುಳ್ಳು ಮತ್ತು ಕಟ್ಟುಕಥೆಗಳನ್ನು ಹಬ್ಬಿಸಲಾಗುತ್ತಿದೆ, ಅವುಗಳಿಗೆ ಮತ್ತು ವಾಸ್ತವಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

