- Home
- Entertainment
- ಕಾಳು ಹಾಕಿ 'ಕ್ಯೂ'ನಲ್ಲಿ ನಿಂತಿದ್ದವರಿಗೆ ನಿರಾಸೆ.. ಅನುಶ್ರೀ ಅಂದ-ಚೆಂದದ ಫೋಟೋನಾದ್ರೂ ನೋಡಿ ಕಣ್ತುಂಬಿಕೊಳ್ಳಿ!
ಕಾಳು ಹಾಕಿ 'ಕ್ಯೂ'ನಲ್ಲಿ ನಿಂತಿದ್ದವರಿಗೆ ನಿರಾಸೆ.. ಅನುಶ್ರೀ ಅಂದ-ಚೆಂದದ ಫೋಟೋನಾದ್ರೂ ನೋಡಿ ಕಣ್ತುಂಬಿಕೊಳ್ಳಿ!
ನಟಿ, ನಿರೂಪಕಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಕೊಡಗು. ಕೂರ್ಗ್ ಮೂಲದ ಉದ್ಯಮಿ ರೋಷನ್ ಅವರೊಂದಿಗೆ ಅನುಶ್ರೀ ಮದುವೆ ನಿಶ್ಚಯ ಆಗಿದ್ದು ಆಗಸ್ಟ್ 28ಕ್ಕೆ ಮದುವೆ ಮುಹೂರ್ತ ಇಡಲಾಗಿದೆ.

ನಟಿ, ನಿರೂಪಕಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಈ ಸುದ್ದಿಯೀಗ ಕರ್ನಾಟಕದ ಬ್ರೇಕಿಂಗ್ ನ್ಯೂಸ್ ಆಗಿದೆ. ಆಗಸ್ಟ್ 28ಕ್ಕೆ ಮದುವೆ ನಿಶ್ಚಯವಾಗಿದ್ದು, ಕೊಡಗು ಮೂಲದ ಹುಡುಗ ರೋಶನ್ ವರನಾಗಿದ್ದಾನೆ.
ಕನ್ನಡದ ನಂಬರ್ ಒನ್ ಆಂಕರ್ ಆಗಿರೋ ಅನುಶ್ರೀ ಅವರು ಈ ವರ್ಷ ತಾವು ಮದುವೆ ಆಗುತ್ತಿರುವುದಾಗಿ ಅದಾಗಲೇ ಹೇಳಿದ್ದರು.
ಕೆಲವು ಶೋ ಹೋಸ್ಟ್ ಮಾಡುತ್ತಿರುವಾಗ ಆಂಕರ್ ಅನುಶ್ರೀ ಅವರು ತಾವು ಇದೇ ವರ್ಷ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಆದರೆ ಆ ಮಾತನ್ನು ಯಾರೂ ಅಷ್ಟಾಗಿ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ.
ಆದರೆ, ಇದೀಗ ತಾವು ಹೇಳಿದಂತೆ, ಆಂಕರ್ ಅನುಶ್ರೀ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆಗಸ್ಟ್ 28ರಂದು ಮದುವೆ ನಿಶ್ಚಯವಾಗಿದೆ.
ಅನುಶ್ರೀ ಅವರು ನಿರೂಪಕಿ ಮಾತ್ರವಲ್ಲ, ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಬೆಂಕಿಪೊಟ್ಣ, ಉಪ್ಪು ಹುಳಿ ಖಾರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅನುಶ್ರೀ ನಟಿಸಿದ್ದಾರೆ.
ಅನುಶ್ರೀ ಅವರು ಸೋಷಿಯಲ್ ಮೀಡಿಯಾಗಲ್ಲಿ ಕೂಡ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಅಂದಚೆಂದದ ಫೋಟೋಗಳನ್ನು ಪೋಸ್ಟ್ ಮಾಡಿ ಬಹಳಷ್ಟು ಲೈಕ್ಸ್ ಗಿಟ್ಟಿಸಿಕೊಳ್ಳುತ್ತಾರೆ.
ಅನುಶ್ರೀ ಮದುವೆ ನಿಶ್ಚಯ ಆಗಿದ್ದು ಗೊತ್ತಾಗಿ ಅನೇಕರ ಹಾರ್ಟ್ ಹಾಳಾಗುವುದು ಖಂಡಿತ ಎನ್ನಬಹುದು. ಅನುಶ್ರೀ ಒಪ್ಪಿದರೆ ಮಾತ್ರ ಒಬ್ಬರೊಡನೆ ಮದುವೆ ಎಂಬುದು ಸತ್ಯವಾದರೂ ಹಲವರು ಕಾಳು ಹಾಕಲು ಕ್ಯೂದಲ್ಲಿ ನಿಂತಿದ್ದರು.
ಕೊನೆಗೂ ಅನುಶ್ರೀ ಕಾಳು ಹಾಕಿದವರಿಗೆ ಸಿಗದೇ ಮನೆಯ ಹಿರಿಯರು ನೋಡಿದ ಹುಡುಗನ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ಇನ್ನೇನು ಮುಂದಿನ ತಿಂಗಳು ಅನುಶ್ರೀ ಮದುವೆ. ಇನ್ನೇನಿದ್ದರೂ ಆಸೆಕಣ್ಣಿನಿಂದ ನೋಡುತ್ತಿದ್ದ ಹುಡುಗರು ಹಾರೈಸಬೇಕು ಅಷ್ಟೇ..