ಅಂಥ ಬಟ್ಟೆ ಹಾಕಬೇಡ ಅಂದ್ರೆ ನಾನೇನ್ ಮಾಡ್ತೀನಿ ಗೊತ್ತಾ? ಐಶ್ವರ್ಯಾ ರಾಜೇಶ್ ಹೇಳಿದ್ದೇನು?
ನಟಿಯರು ಧರಿಸೋ ಬಟ್ಟೆಗಳ ಬಗ್ಗೆ ಎಷ್ಟು ದೊಡ್ಡ ವಿವಾದ ಆಯ್ತು ಅಂತ ನೋಡಿದ್ದೀವಿ. ಈ ಬಗ್ಗೆ ನಟಿ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ಈ ಲೇಖನದಲ್ಲಿ ನೋಡೋಣ.

ಸುದ್ದಿಯಲ್ಲಿದ್ದಾರೆ ಐಶ್ವರ್ಯ ರಾಜೇಶ್
ಇತ್ತೀಚೆಗೆ ನಟಿಯರು ಧರಿಸೋ ಬಟ್ಟೆ, ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಟಾಲಿವುಡ್‌ನಲ್ಲಿ ಹೆಚ್ಚು ಚರ್ಚೆ ಆಗ್ತಿದೆ. ಶಿವಾಜಿ ಮಾಡಿದ ಕಾಮೆಂಟ್‌ನಿಂದ ಈ ಚರ್ಚೆ ಶುರುವಾಯ್ತು. ಶಿವಾಜಿ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಯ್ತು. ಅನಸೂಯಾ ಈ ವಿವಾದದಲ್ಲಿ ಭಾಗಿಯಾಗಿ ಕೌಂಟರ್ ಕೊಟ್ಟಿದ್ದರಿಂದ ಗಲಾಟೆ ಇನ್ನೂ ದೊಡ್ಡದಾಯ್ತು. ಶಿವಾಜಿ ಮತ್ತು ಅನಸೂಯಾ ನಡುವೆ ಮಾತಿನ ಸಮರ ಮುಂದುವರೆಯಿತು. ಮಹಿಳೆಯರು ತಮಗೆ ಇಷ್ಟವಾದ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ, ಅದರಲ್ಲಿ ತಪ್ಪೇನು ಎಂದು ಅನಸೂಯಾ ಮಾತನಾಡಿದ್ದರು. ಅನಸೂಯಾ ಕಾಮೆಂಟ್ಸ್‌ಗೆ ಕೆಲವರು ಸಪೋರ್ಟ್ ಮಾಡಿದ್ರೆ, ಇನ್ನು ಕೆಲವರು ಟ್ರೋಲ್ ಮಾಡಿದ್ರು.
ಐಶ್ವರ್ಯ ರಾಜೇಶ್ ಕಾಮೆಂಟ್ಸ್
ಇತ್ತೀಚೆಗೆ ಮಹಿಳೆಯರ ಬಟ್ಟೆ ಬಗ್ಗೆ ಮತ್ತೊಬ್ಬ ನಟಿ ಪ್ರತಿಕ್ರಿಯಿಸಿದ್ದಾರೆ. ಆ ನಟಿ ಬೇರಾರೂ ಅಲ್ಲ, 'ಸಂಕ್ರಾಂತಿಕಿ ವಸ್ತುನಂ' ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಐಶ್ವರ್ಯಾ ರಾಜೇಶ್. ಈ ಸಿನಿಮಾದ ನಂತರ ತೆಲುಗಿನಲ್ಲಿ ಐಶ್ವರ್ಯಾ ರಾಜೇಶ್ ಕ್ರೇಜ್ ಹೆಚ್ಚಾಗಿದೆ. ಸದ್ಯ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಐಶ್ವರ್ಯಾ ರಾಜೇಶ್‌ಗೆ ಮಹಿಳೆಯರ ಬಟ್ಟೆ ಬಗ್ಗೆ ಪ್ರಶ್ನೆ ಎದುರಾಯ್ತು.
ಗಂಡನ ಮಾತು ಕೇಳ್ತೇನೆ
ನಿಮ್ಮ ಭಾವಿ ಪತಿ ಅಥವಾ ನಿಮಗೆ ಬೇಕಾದವರು ಇಂಥ ಬಟ್ಟೆ ಹಾಕಬೇಡ, ಈ ಬಟ್ಟೆ ಹಾಕು ಅಂದ್ರೆ ಕೇಳ್ತೀರಾ ಅಂತ ಆ್ಯಂಕರ್ ಕೇಳಿದ್ರು. ಇದಕ್ಕೆ ಐಶ್ವರ್ಯಾ ರಾಜೇಶ್, 'ಖಂಡಿತ ಕೇಳ್ತೀನಿ. ನಮ್ಮ ಒಳ್ಳೆದಕ್ಕೆ ಹೇಳುವಾಗ ಕೇಳಿದ್ರೆ ತಪ್ಪೇನು? ಅವರು ಬೇಡ ಅಂದ್ರೆ ನಾನು ಆ ಡ್ರೆಸ್ ಹಾಕಲ್ಲ. ನನ್ನ ವ್ಯಕ್ತಿತ್ವವೇ ಅಷ್ಟು' ಅಂದ್ರು.
ನಮ್ಮ ಮನೆಯಲ್ಲೂ ನಾನು ಹಾಗೆ ಇದ್ದೇನೆ
ನಮ್ಮನೇಲಿ ನನ್ನ ಸಹೋದರ, 'ಈ ಡ್ರೆಸ್ ಚೆನ್ನಾಗಿಲ್ಲ' ಅಂದ್ರೆ ತಕ್ಷಣ ಅದನ್ನ ಪಕ್ಕಕ್ಕಿಡ್ತೀನಿ. ನಾನು ಫಾರಿನ್‌ಗೆ ಹೋದಾಗ ವೆಸ್ಟರ್ನ್ ಡ್ರೆಸ್ ಹಾಕ್ತೀನಿ. ಆದ್ರೆ ಇಲ್ಲಿರುವಾಗ ಯಾರ ಭಾವನೆಗೂ ಧಕ್ಕೆ ತರಲು ಇಷ್ಟಪಡಲ್ಲ. ಡ್ರೆಸ್ಸಿಂಗ್ ಬಗ್ಗೆ ನನ್ನ ಅಭಿಪ್ರಾಯ ಹೇಳಬೇಕೆಂದರೆ, ಜವಾಬ್ದಾರಿಯಿಂದ ಇರಬೇಕು ಅಂತೀನಿ. ಶಾಪಿಂಗ್ ಮಾಲ್ ಉದ್ಘಾಟನೆಗೆ ಹೋದಾಗ ಅಲ್ಲಿ ಜನ ಹೇಗಿರ್ತಾರೆ ಅಂತ ಗೊತ್ತು. ಹಾಗಾಗಿ ರಿವೀಲಿಂಗ್ ಡ್ರೆಸ್ ಹಾಕೋದು ಒಳ್ಳೇದಲ್ಲ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ.
ಡ್ರೆಸ್ ಹಾಕೋದು ಅವರವರ ಇಷ್ಟ
ಆದರೆ ಯಾರಾದರೂ ರಿವೀಲಿಂಗ್ ಡ್ರೆಸ್ ಹಾಕಬೇಕು ಅಂದ್ರೆ ನಾವು ತಡೆಯೋಕಾಗಲ್ಲ. ಅದು ಅವರ ಇಷ್ಟ. ನನ್ನ ಮಟ್ಟಿಗೆ ಡ್ರೆಸ್ಸಿಂಗ್ ಜವಾಬ್ದಾರಿಯುತವಾಗಿರಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಐಶ್ವರ್ಯಾ ರಾಜೇಶ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

