MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಹೇನಿನ ವಿಷ್ಯ ಮಾತನಾಡಿ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ ನಟಿ ಸಾರಾ ಅಲಿ ಖಾನ್​

ಹೇನಿನ ವಿಷ್ಯ ಮಾತನಾಡಿ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ ನಟಿ ಸಾರಾ ಅಲಿ ಖಾನ್​

ನಟಿ ಸಾರಾ ಅಲಿ ಖಾನ್ ಅವರು ತಮಗೆ ಬಾಲ್ಯದಲ್ಲಿ ಹೇನು ಆಗಿದ್ದರ ಬಗ್ಗೆ ಕಪಿಲ್ ಶರ್ಮಾ ಶೋನಲ್ಲಿ ಬಹಿರಂಗಪಡಿಸಿದ್ದಾರೆ. 'ಮೆಟ್ರೋ ಇನ್ ದಿನೋ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ಸ್ಪಷ್ಟ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

2 Min read
Author : Suchethana D
Published : Jul 17 2026, 03:23 PM IST
Share this Photo Gallery
  • FB
  • TW
  • Linkdin
  • Whatsapp
16
ಹೇನಿನ ಚರ್ಚೆ
Image Credit : mr.rajit841907 Instagram

ಹೇನಿನ ಚರ್ಚೆ

ಸಾಮಾನ್ಯವಾಗಿ ಹಿಂದೆಲ್ಲಾ ಚಿಕ್ಕಮಕ್ಕಳಿಗೆ ತಲೆಯಲ್ಲಿ ಹೇನು ಆಗುವುದು ಸರ್ವೇ ಸಾಮಾನ್ಯವಾಗಿತ್ತು. ಅದರಲ್ಲಿಯೂ ಶಾಲೆಗೆ ಹೋಗುವ ಒಬ್ಬರಿಗೆ ಹೇನು ಆದ್ರೆ, ಅದು ಇಡೀ ಕ್ಲಾಸಿನ ಮಕ್ಕಳಿಗೆ ಬರುವುದು ಸಹಜವೇ ಆಗಿತ್ತು. ತಲೆಯಲ್ಲಿ ಹೇನು ಇದ್ದರೆ ಅದು ಪರಿಶುದ್ಧವಾಗಿರುವ ಆರ್ಗಾನಿಕ್​ ಕೂದಲು ಎಂದೇ ಹಿರಿಯರು ಹೇಳುವುದು ಇದೆ. ಈಗೆಲ್ಲಾ ಕೆಮಿಕಲ್​ಯುಕ್ತ ಶ್ಯಾಂಪ್ಯೂ ಬಳಸುವ ಕಾರಣದಿಂದ ತಲೆಯಲ್ಲಿ ಹೇನು ಇರುವುದಿಲ್ಲ. ಹೇನು ಆಯಿತು ಎಂದರೆ, ಅದು ಉತ್ತಮವಾಗಿರುವ ನೈಸರ್ಗಿಕ ಕೂದಲು ಎಂದೇ ಹೇಳಲಾಗುತ್ತದೆ. ಈಗಲೂ ಕೆಲವರ ತಲೆಯಲ್ಲಿ ಯಾವ್ಯಾವುದೋ ಕಾರಣಕ್ಕೆ ಹೇನು ಆಗುವುದು ಇದ್ದರೂ, ಹಿಂದಿನಷ್ಟು ಅದೇನು ಮಾಮೂಲಾಗಿಲ್ಲ ಇಂದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನವಾಬ್​ ವಂಶದ ಪುತ್ರಿ
Image Credit : instagram

ನವಾಬ್​ ವಂಶದ ಪುತ್ರಿ

ಇದೀಗ ಅದೇ ಹೇನಿನ ಬಗ್ಗೆ ನಟ ಸೈಫ್​ ಅಲಿ ಖಾನ್​ ಪುತ್ರಿ, ನಟಿ ಸಾರಾ ಅಲಿ ಖಾನ್​ ಮಾತನಾಡಿದ್ದಾರೆ. ಕಪಿಲ್​ ಶರ್ಮಾ ಷೋನಲ್ಲಿ ಕಪಿಲ್ ಶರ್ಮಾ ಅವರು, ನೀವು ನವಾಬ್​ ವಂಶದ ಪುತ್ರಿ. ನಿಮ್ಮ ತಲೆಯಲ್ಲಿ ಹೇನು ಆಗಿತ್ತಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾರಾ ಅಲಿ, ಹೌದು ನನಗೂ ಹೇನು ಆಗಿತ್ತು. ಆಗ ಹೇನಿಗಾಗಿಯೇ ಇರುವ ಬಾಚಣಿಕೆಯಿಂದ ದಿನವೂ ಅದನ್ನು ತೆಗೆದುಹಾಕುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ಹೇನುಗಳಿಗೆ ಇವರು ಸೆಲೆಬ್ರಿಟಿ ಮಕ್ಕಳು ಎಂದೇನು ಗೊತ್ತಿರುವುದಿಲ್ಲವಲ್ಲ! ಹಾಗೆಂದು ಕಪಿಲ್​ ಶರ್ಮಾ ಅವರು ಜೋಕ್​ ಮಾಡಿದ್ದಾರೆ.

Related Articles

Related image1
Metro…In Dino: ಕನ್ನಡದಲ್ಲಿಯೇ ಮಾತನಾಡಿ ಬೆರಗುಗೊಳಿಸಿದ ಸೈಫ್​ ಪುತ್ರಿ ನಟಿ ಸಾರಾ ಅಲಿ ಖಾನ್​!
Related image2
Puneeth Rajkumar​ ಪುತ್ರಿಯ ಹೊಸ ಬಿಜಿನೆಸ್​ಗೆ ವಿಶೇಷ ಸತ್ಯನಾರಾಯಣ ಪೂಜೆ: ಫೋಟೋಗಳು ವೈರಲ್​
36
ಸೋಷಿಯಲ್​ ಮೀಡಿಯಾದಲ್ಲಿ ಅನುಭವ
Image Credit : instagram

ಸೋಷಿಯಲ್​ ಮೀಡಿಯಾದಲ್ಲಿ ಅನುಭವ

ಇದೇ ಕಾರಣಕ್ಕೆ ಹೇನನ್ನು ಮರೆತವರು ಈಗ ಸೋಷಿಯಲ್​ ಮೀಡಿಯಾದಲ್ಲಿ ಇದರ ವಿಷಯವಾಗಿ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಹೇನು ಆಗಿ ತಾವು ಅನುಭವಿಸಿದ್ದ ಮುಜುಗರದ ಕುರಿತು ಮಾತನಾಡಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹೇನು ಕೂಡ ಚರ್ಚೆಯ ವಿಷ್ಯವಾಗ್ತಿರೋದು ಕೆಲವರಿಗೆ ಅಚ್ಚರಿಯನ್ನೂ ತಂದಿದೆ.

46
ಬೆಂಗಳೂರಿನಲ್ಲಿ ನಟಿ
Image Credit : instagram

ಬೆಂಗಳೂರಿನಲ್ಲಿ ನಟಿ

ಇನ್ನು ನಟಿಯ ಕುರಿತು ಹೇಳುವುದಾದರೆ, ಸೈಫ್​ ಅಲಿ ಖಾನ್​ ಮೊದಲ ಪತ್ನಿಯ ಪುತ್ರಿ, ಸಾರಾ ಅಲಿ ಖಾನ್​ ಸದಾ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಅವರು, ‘ಮೆಟ್ರೋ ಇನ್ ದಿನೋ’ (Metro in Dino) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಪ್ರಚಾರದಲ್ಲಿ ತೊಡಗಿದ್ದಾರೆ. ಹಲವು ಊರುಗಳಲ್ಲಿ ಇವರು ಪ್ರಚಾರ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಆದಿತ್ಯ ರಾಯ್ ಕಪೂರ್ ಜೊತೆ ಜೋಡಿಯಾಗಿದ್ದಾರೆ ಸಾರಾ ಅಲಿ ಖಾನ್​.

56
ಕನ್ನಡಿಗರ ಮನಗೆದ್ದ ನಟಿ
Image Credit : PT handout

ಕನ್ನಡಿಗರ ಮನಗೆದ್ದ ನಟಿ

ಈಚೆಗೆ ನಟಿ ಪ್ರಚಾರದ ನಿಮಿತ್ತ ಬೆಂಗಳೂರಿಗೂ ಬಂದಿದ್ದರು. ಕನ್ನಡದಲ್ಲಿಯೇ ಮಾತನಾಡಿ ಬೆರಗು ಮೂಡಿಸಿದ್ದರು. ಸಾಮಾನ್ಯವಾಗಿ ಹೀಗೆ ಪ್ರಚಾರಕ್ಕೆ ಬರುವವರು ಒಂದೆರಡು ಲೈನ್​ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿ ಅಲ್ಲಿಯ ಜನರನ್ನು ಅಟ್ರಾಕ್ಟ್​ ಮಾಡುವುದು ಹೊಸ ವಿಷಯವೇನಲ್ಲ. ಈ ಟ್ರಿಕ್ಸ್​ ಅನ್ನು ರಾಜಕಾರಣಿಗಳೂ ಮಾಡುತ್ತಾರೆ. ಆದರೆ ಬೇರೊಂದು ಭಾಷೆಯಲ್ಲಿ ಮಾತನಾಡುವಾಗ ಅದು ಅಷ್ಟು ಸ್ಪಷ್ಟವಾಗಿ ಇರುವುದಿಲ್ಲ, ಆದರೆ, ನಟಿ ಸಾರಾ ಅಲಿ ಖಾನ್​ ಒಂದೆರಡು ಬಾರಿ ಸ್ಲೋ ಆಗಿ ಹೇಳಿ ಬಳಿಕ ಸ್ಪಷ್ಟವಾಗಿ ಮಾತನಾಡಿದ್ದರು.

66
ಹಿಂದೂ ದೇವಾಲಯಗಳಿಗೆ ಭೇಟಿ
Image Credit : fashor.com

ಹಿಂದೂ ದೇವಾಲಯಗಳಿಗೆ ಭೇಟಿ

ಅಷ್ಟಕ್ಕೂ ಸಾರಾ ಅಲಿ ಖಾನ್​ ಸದಾ ಸುದ್ದಿಯಲ್ಲಿ ಇರುವುದು ಹಿಂದೂ ದೇವಾಲಯಗಳಿಗೆ ಭೇಟಿ ಕೊಡುವುದರಿಂದ. ಕೆಲ ತಿಂಗಳ ಹಿಂದೆ ಇವರ ಅಮರನಾಥ ಯಾತ್ರೆ ಕೈಗೊಂಡಿದ್ದರು. ‘ಹರ ಹರ ಮಹದೇವ’ ಎಂದು ಜೈಕಾರ ಕೂಗಿದ್ದರು, ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎಂದಿದ್ದರು. ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದರು, ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದರು. ಸಾರಾ ಅಲಿ ಖಾನ್​ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಾರಾ ಅಲಿ ಖಾನ್
ಸೈಫ್ ಅಲಿ ಖಾನ್
ಮನರಂಜನಾ ಸುದ್ದಿ
ಬಾಲಿವುಡ್
ಆರೋಗ್ಯ

Latest Videos
Recommended Stories
Recommended image1
ಸ್ಟಾರ್‌ಗಳು ಕಿರುತೆರೆ ಬಿಡಿ, ಸಂಭಾವನೆ ಕಡಿಮೆ ಮಾಡಿ: ಸ್ಟಾರ್ ನಿರ್ಮಾಕರೊಬ್ಬರ ಅಳಲುಗಳು
Recommended image2
ಸಿನಿಮಾ ಆಫರ್​ ಇಲ್ಲ, ಕೈಯಿಂದ ಜಾರಿದೆ ಹಲವು ಸಿನಿಮಾ.. ಶ್ರೀಲೀಲಾ ಸಕ್ಸಸ್ ಜರ್ನಿಗೆ ಅಮ್ಮನೇ ಮುಳ್ಳಾ?
Recommended image3
Boss Movie: ಕೊನೆಗೂ ವಿಜಯಲಕ್ಷ್ಮೀ ದರ್ಶನ್‌ಗೆ ಸೋಲು; ಶಾಕ್‌ ಕೊಟ್ಟ ಹೈಕೋರ್ಟ್!‌
Related Stories
Recommended image1
Metro…In Dino: ಕನ್ನಡದಲ್ಲಿಯೇ ಮಾತನಾಡಿ ಬೆರಗುಗೊಳಿಸಿದ ಸೈಫ್​ ಪುತ್ರಿ ನಟಿ ಸಾರಾ ಅಲಿ ಖಾನ್​!
Recommended image2
Puneeth Rajkumar​ ಪುತ್ರಿಯ ಹೊಸ ಬಿಜಿನೆಸ್​ಗೆ ವಿಶೇಷ ಸತ್ಯನಾರಾಯಣ ಪೂಜೆ: ಫೋಟೋಗಳು ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved