ಬಾತ್‌ಟಬ್‌ನಲ್ಲಿ ಹಾಟ್ ಬ್ಯೂಟಿ Sangeetha Sringeri: ವೈರಲ್ ಆಯ್ತು Sixpack ಬೆಡಗಿ ಹೊಸ ಫೋಟೋಶೂಟ್!
ಕಳೆದ ಕೆಲವು ದಿನಗಳ ಹಿಂದೆ ಸಿಕ್ಸ್ ಪ್ಯಾಕ್‌ನಲ್ಲಿ ಮಿಂಚಿದ್ದ ನಟಿ ಸಂಗೀತಾ ಶೃಂಗೇರಿ ಇದೀಗ ಸೀರೆಯುಟ್ಟು ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಹಾಟ್ ಪೋಸ್ ನೀಡಿರುವ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.
ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯರಲ್ಲಿ ಸಂಗೀತಾ ಶೃಂಗೇರಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸುಂದರಿ ಆಗಾಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ.
ಕಳೆದ ಕೆಲವು ದಿನಗಳ ಹಿಂದೆ ಸಿಕ್ಸ್ ಪ್ಯಾಕ್‌ನಲ್ಲಿ ಮಿಂಚಿದ್ದ ನಟಿ ಸಂಗೀತಾ ಶೃಂಗೇರಿ ಇದೀಗ ಸೀರೆಯುಟ್ಟು ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಹಾಟ್ ಪೋಸ್ ನೀಡಿರುವ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.
ಹೌದು! ಸಂಗೀತಾ ಶೃಂಗೇರಿ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಬಾತ್ ಟಬ್‌ನಲ್ಲಿ ಮಲಗಿಕೊಂಡೇ ಪೋಸ್ ಕೊಟ್ಟಿದ್ದಾರೆ. ಆದರೆ ಇಲ್ಲಿ ಸೀರೆ ಉಟ್ಟಕೊಂಡಿರೋದು ಅತಿ ಹೆಚ್ಚು ಗಮನ ಸೆಳೆಯುತ್ತದೆ.
ಸಂಗೀತಾ ಶೃಂಗೇರಿ ಇಲ್ಲಿ ಅತಿ ಹೆಚ್ಚು ಗಮನ ಸೆಳೆಯೋಕೆ ಇನ್ನೂ ಒಂದು ಕಾರಣವೂ ಇದೆ. ಸ್ನಾನ ಮಾಡೋ ಬಾತ್ ಟಬ್ ನಲ್ಲಿ ಮಲಗಿ ಸಂಗೀತಾ ಶೃಂಗೇರಿ ವಿವಿಧ ಪೋಸ್ ಕೊಟ್ಟಿದ್ದು, ವೈರಲ್ ಆಗಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ 777' ಸಿನಿಮಾ ಮೂಲಕ ಸಂಗೀತಾ ಶೃಂಗೇರಿ ಕನ್ನಡ ಜನತೆಯನ್ನು ವಿಶೇಷವಾಗಿ ಸೆಳೆದರು. ತಮ್ಮ ಅದ್ಭುತ ನಟನೆಯಿಂದಲೇ ಫೇಮಸ್ ಆದರು.
ಈ ಚೆಲುವೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ' ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸೀರಿಯಲ್ನಲ್ಲಿ ಎಲ್ಲರ ನೆಚ್ಚಿನ ನಟಿಯಾಗಿದ್ದ ಸಂಗೀತಾ, ಚಾರ್ಲಿ 777 ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಸನಿಹವಾದರು.
ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಸಿನಿಮಾದಲ್ಲೂ ಅಭಿನಯಿಸಿದರು. ಸುರತ್ಕಲ್ 2 ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.