ಬೋಲ್ಡ್ ಅವತಾರದಲ್ಲಿ ಅನು ಸಿರಿಮನೆ: ನಮಗೆ ಹಳೇ Megha Shetty ಇಷ್ಟ, ಇದು ತುಂಬ ಗಲೀಜು ಎಂದ ಫ್ಯಾನ್ಸ್!
ಸೋಷಿಯಲ್ ಮೀಡಿಯಾದಲ್ಲಿ ನಟಿ ಮೇಘಾ ಶೆಟ್ಟಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದು, ನೋಡಿದವರು ಹುಬ್ಬೇರಿಸಿದ್ದಾರೆ. ಕರಾವಳಿ ಬೆಡಗಿಯ ಹಾಟ್ ಕ್ಲಿಕ್ಸ್ ಹೀಗಿವೆ ನೋಡಿ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಹೆಸರು ಮಾಡಿದ್ದ ನಟಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾಗಿರೋ ಮೇಘಾ ಶೆಟ್ಟಿ ಇಲ್ಲಿ ತುಂಬಾನೇ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದು, ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲ ಎಂಬಂತೆ ಪೋಸ್ ಕೊಟ್ಟಿದ್ದಾರೆ.
ಈ ಪೋಸ್ಟ್‌ಗೆ ನೆಟ್ಟಗರು ತುಂಬ ಓವರ್ ಆಯ್ತು ಎಂದರೆ, ಇನ್ನು ಕೆಲವರು ನಮಗೆ ಹಳೇ ಮೇಘಾ ಶೆಟ್ಟಿ ಇಷ್ಟ, ಇದು ತುಂಬ ಗಲೀಜು ಎಂದು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ ಮತ್ತಷ್ಟು ನೆಟ್ಟಿಗರು ಹೃದಯದ ಸಿಂಬಲ್ ಮತ್ತು ಫೈರ್ ಸಿಂಬಲ್ ಹಾಕಿದ್ದಾರೆ.
ಇತ್ತೀಚೆಗಷ್ಟೇ ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಸಿನಿಮಾಕ್ಕೂ ನಾಯಕಿಯಾಗಿ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಜೊತೆಗೆ ಈ ಸಿನಿಮಾ ಸಲುವಾಗಿ ಮೂಗಿಗೆ ಮೂಗುತಿಯನ್ನೂ ಚುಚ್ಚಿಸಿಕೊಂಡು ಸುದ್ದಿಯಾಗಿದ್ದರು.
ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಮೇಘಾ ಶೆಟ್ಟಿ ಈ ಹಿಂದೆ ಥ್ರಿಬಲ್ ರೈಡಿಂಗ್ ಅನ್ನೋ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದಾದ್ಮೇಲೆ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಸಿನಿಮಾದಲ್ಲೂ ಮೇಘಾ ಶೆಟ್ಟಿ ಮಿಂಚಿದ್ದರು.
ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದು, ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಅಲ್ಲದೇ ವಿಭಿನ್ನ ರೂಪದಲ್ಲಿ ಪಡ್ಡೆ ಹುಡುಗರ ಹೃದಯ ಕೂಡಾ ಕದಿಯುತ್ತಿದ್ದಾರೆ.