ಡಿವೋರ್ಸ್ ಆದರೂ ಹೆಸರಿನಲ್ಲಿ ಪತಿಯ ಹೆಸರು ಉಳಿಸಿಕೊಂಡ ನಟಿ
ಇತ್ತೀಚೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಕಿರಣ್ ರಾವ್, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಆಸ್ಪತ್ರೆಯ ರಿಸ್ಟ್ ಬ್ಯಾಂಡ್‌ನಲ್ಲಿದ್ದ ಅವರ ಹೆಸರು ನೋಡಿ ಅವರ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಒಳಗಾದ ನಟಿ ಕಿರಣ್ ರಾವ್
ಬಾಲಿವುಡ್ ನಟಿ ಕಿರಣ್ ರಾವ್ ಇತ್ತಿಚೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತಮ್ಮ ಅರೋಗ್ಯದ ಬಗ್ಗೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ನೆಟ್ಟಿಗರ ಗಮನ ಸೆಳೆದಿದ್ದು ಮಾತ್ರ ಬೇರೆಯೇ ವಿಚಾರ. ನಟಿ ಹಾಗೂ ಸಿನಿಮಾ ನಿರ್ಮಾಪಕಿ ಆಗಿರುವ ಕಿರಣ್ ರಾವ್ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ನಟಿ ಸುಧಾರಿಸಿಕೊಂಡಿದ್ದಾರೆ. ಆದರೆ ನಟಿ ಕಿರಣ್ ರಾವ್ ಅವರು ಹಂಚಿಕೊಂಡ ಫೋಟೋಗಳಲ್ಲಿ ಜನರಿಗೆ ಕಂಡಿದ್ದು, ಬೇರೆಯೇ ವಿಚಾರ.
ಡಿವೋರ್ಸ್ ಆಗಿದ್ದರೂ ಪತಿ ಹೆಸರು ಕೈ ಬಿಡದ ನಟಿ
ಕಿರಣ್ ರಾವ್ ಹಂಚಿಕೊಂಡ ಪೋಸ್ಟ್‌ನಲ್ಲಿ ಮೊದಲಿಗೆ ಆಸ್ಪತ್ರೆಯ ಹೊರಭಾಗದ ದೃಶ್ಯವನ್ನು ಹಂಚಿಕೊಂಡಿದ್ದಾರೆ ನಂತರ ವಿಕ್ಟರಿ ಸೂಚಿಸುವ ಸಿಂಬಲ್ ಜೊತೆ ತಮ್ಮದೇ ಫೋಟೋ ಹಾಕಿದ್ದು, ನಂತರದ ಫೋಟೋದಲ್ಲಿ ಆಸ್ಪತ್ರೆಯವರು ತಮ್ಮ ಕೈಗೆ ಕಟ್ಟಿದ್ದ ರೋಗಿಯನ್ನು ಗುರುತಿಸಲು ಇರುವ ರಿಸ್ಟ್ ಬ್ಯಾಂಡ್‌ನ ಫೋಟೋ ಹಾಕಿದ್ದಾರೆ. ಆದರಲ್ಲಿ ಅವರ ಹೆಸರು ವಿವರಗಳಿದೆ. ಆದರೆ ನೆಟ್ಟಿಗರ ಗಮನ ಸೆಳೆದಿದ್ದು, ಕಿರಣ್ ರಾವ್ ಅವರ ಹೆಸರು ಹೌದು ವಿಚ್ಛೇದನ ಆಗಿದ್ದರು ನಟಿ ಕಿರಣ್ ರಾವ್ ತಮ್ಮ ವಿಚ್ಛೇದಿತ ಪತಿ ಅಮಿರ್ ಖಾನ್ ಅವರ ಹೆಸರನ್ನು ತಮ್ಮ ಹೆಸರಿನೊಂದಿಗೆ ಉಳಿಸಿಕೊಂಡಿದ್ದು ನೋಡಿ ಅವರು ಅಚ್ಚರಿ ಪಟ್ಟಿದ್ದಾರೆ.
ಆಸ್ಪತ್ರೆಯಿಂದ ಫೋಟೋ ಹಂಚಿಕೊಂಡ ಕಿರಣ್
ಈ ಫೋಟೋ ವೀಡಿಯೋಗಳ ಜೊತೆ ಕಿರಣ್ ರಾವ್ ಅವರು ಉದ್ದನೆಯ ಬರಹ ಬರೆದಿದ್ದಾರೆ. ನಾನು, 2026 ರ ಸಂಭ್ರಮಕ್ಕೆ ಸಿದ್ಧನಾಗಿದ್ದೆ, ಆಗ ನನ್ನ ಅಪೆಂಡಿಕ್ಸ್ ನಿಧಾನವಾಗಲು ಆಳವಾಗಿ ಉಸಿರಾಡಲು ಮತ್ತು ಧನ್ಯವಾದ ಹೇಳಲು ನನಗೆ ನೆನಪು ಮಾಡಿಕೊಟ್ಟಿತು. ಆಧುನಿಕ ಔಷಧಕ್ಕೆ ಅಪಾರ ಕೃತಜ್ಞತೆಗಳು, 10.5mm ಕ್ಯಾತಿಟರ್ ಮೂಲಕ ಆ ಸಂಪೂರ್ಣ 12mm ವ್ಯಾಸದ ಅಪೆಂಡಿಕ್ಸ್ ಹೇಗೆ ಹೊರಬಂದಿತು ಎಂದು ಇನ್ನೂ ಅರ್ಥವಾಗುತ್ತಿಲ್ಲ, ದೇವರಿಗೆ ಧನ್ಯವಾದಗಳು ನಾನು ವೈದ್ಯೆಯಲ್ಲ, ಡಾ. ಕಾಯೋಮರ್ಜ್ ಕಪಾಡಿಯಾ ಮತ್ತು ಇಡೀ ಶಸ್ತ್ರಚಿಕಿತ್ಸಾ ತಂಡ, ಹಾಗೂ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸೂಪರ್ ಕೇರ್‌ಗೆ ಧನ್ಯವಾದಗಳು.
ಕಷ್ಟಕಾಲದಲ್ಲಿ ನೆರವಿಗೆ ಬಂದ ಅನೇಕರಿಗೆ ಧನ್ಯವಾದ ಸಲ್ಲಿಸಿದ ಕಿರಣ್
ಸರಿಯಾದ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದ ಸ್ನೇಹಿತರು ಕುಟುಂಬ ಅಮೀರ್, ಚಾರ್ಲ್ಸ್, ಅಮಿನ್ ಹೀಗೆ ಇತರ ನನ್ನ ಪ್ರೀತಿ ಪಾತ್ರರಿಗೆ ಧನ್ಯವಾದಗಳು, ನಾನು ಡಿಸ್ಚಾರ್ಜ್ ಆಗಿದ್ದೇನೆ ಮತ್ತು ನಾನು ಮನೆಗೆ ಮರಳಿದ್ದೇನೆ, ಹೊಸ ವರ್ಷಕ್ಕೆ ನನ್ನನ್ನು ನಿರಾಳಗೊಳಿಸಲು ಸಿದ್ಧಳಾಗಿದ್ದೇನೆ. 2025ರಲ್ಲಿ ನನಗೆ ಒಳ್ಳೆಯದಾಗಿದೆ, ಮತ್ತು 2026 ಎಲ್ಲರಿಗೂ ದಯೆ, ವಿನೋದ, ಪ್ರೀತಿಯಿಂದ ತುಂಬಿರುತ್ತದೆ ಎಂದು ಆಶಿಸುತ್ತೇನೆ ಕಿರಣ್ ರಾವ್ ಬರೆದುಕೊಂಡಿದ್ದಾರೆ.
2021ರಲ್ಲಿ ವಿಚ್ಚೇದನ ಪಡೆದಿದ್ದ ಕಿರಣ್ -ಆಮೀರ್ ಖಾನ್
ಆಮೀರ್ ಖಾನ್ ಹಾಗೂ ಕಿರಣ್ ರಾವ್ ಅವರು 2005ರ ಡಿಸೆಂಬರ್ 28ರಂದು ಮದುವೆಯಾಗಿದ್ದರು. ಮುಂಬೈನಲ್ಲಿರುವ ಆಮೀರ್ ಖಾನ್ ಅವರ ಖಾಸಗಿ ನಿವಾಸದಲ್ಲಿ ಈ ಮದುವೆ ನಡೆದಿತ್ತು. ಈ ಇಬ್ಬರು ನಟಿಯರು 2001ರ ಲಗಾನ್ ಸಿನಿಮಾದ ಮೂಲಕ ಪರಸ್ಪರ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಕಿರಣ್ ರಾವ್ ಅವರು ಈ ಸಿನಿಮಾದ ಸಹಾಯಕ ನಿರ್ದೇಶಕಿಯಾಗಿದ್ದರು. ಇವರಿಬ್ಬರಿಗೆ ಓರ್ವ ಮಗನೂ ಇದ್ದಾನೆ. ಆದರೆ 2021ರ ಜೂನ್‌ನಲ್ಲಿ ಇವರಿಬ್ಬರು ಡಿವೋರ್ಸ್ ಪಡೆದಿದ್ದರು.
ವಿಚ್ಛೇದನವಾದರೂ ಮುರಿಯದ ಸ್ನೇಹ
ಕಿರಣ್ ರಾವ್ ಅವರನ್ನು ವಿವಾಹವಾಗುವುದಕ್ಕೂ ಮೊದಲು ಆಮೀರ್ ಖಾನ್ 1986ರಲ್ಲಿ ರೀನಾ ದತ್ ಅವರನ್ನು ವಿವಾಹವಾಗಿದ್ದರು. ಆದರೆ 2002ರಲ್ಲಿ ಅವರು ಪರಸ್ಪರ ದೂರಾಗಿದ್ದರು. ಕಿರಣ್ ರಾವ್ ಜೊತೆ ವಿಚ್ಛೇದನ ಆಗಿದ್ದರೂ ಇಬ್ಬರಿಬ್ಬರ ನಡುವಿನ ಸ್ನೇಹ ಮುರಿದು ಬಿದ್ದಿಲ್ಲ. ಬಹುಶಃ ಇದೇ ಕಾರಣದಿಂದಲೋ ಏನೋ ಅವರು ತಮ್ಮ ಹೆಸರಿನಿಂದ ವಿಚ್ಚೇದಿತ ಪತಿಯ ಹೆಸರನ್ನು ತೆಗೆಸುವ ಮನಸ್ಸು ಮಾಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

