NCERT 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ಕೆ SIR ಸೇರ್ಪಡೆ!
ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(SIR) ವಿಷಯದ ಇದೀಗ ಎನ್‌ಸಿಇಆರ್‌ಟಿ(NCERT)ಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ.

SIR ಈಗ NCERT 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಭಾಗ!
ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(SIR) ವಿಷಯದ ಇದೀಗ ಎನ್‌ಸಿಇಆರ್‌ಟಿ(NCERT)ಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ.
ದೇಶದ ಯಾವುದೇ ಅರ್ಹ ನಾಗರಿಕ ವೋಟರ್ ಲಿಸ್ಟ್‌ನಿಂದ ಹೊರಗುಳಿಯಬಾರದು ಮತ್ತು ಅನರ್ಹನ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಲು ಈ ವಿಶೇಷ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ಪಠ್ಯದಲ್ಲಿ ಹೇಳಲಾಗಿದೆ. ಸುಳ್ಳು ಸುದ್ದಿಗಳು, ತಪ್ಪು ಮಾಹಿತಿ ಮತ್ತು ಬೆದರಿಕೆಗಳ ನಡುವೆಯೂ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸಿದೆ ಎಂದು ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ.
SIR: NCERT? ವಿದ್ಯಾರ್ಥಿಗಳು ಏನು ಕಲಿಯುತ್ತಾರೆ
ಹೊಸದಾಗಿ ಸೇರಿಸಲಾದ ಎಸ್‌ಐಆರ್ ಕುರಿತು ಪಾಠದಿಂದಾಗಿ ವಿದ್ಯಾರ್ಥಿಗಳು ಮತದಾರರ ಪಟ್ಟಿಗಳನ್ನು ನವೀಕರಿಸುವ, ಪರಿಶೀಲಿಸುವ ಮತ್ತು ಸರಿಪಡಿಸುವ ಪ್ರಕ್ರಿಯೆಗಳ ಬಗ್ಗೆ ತಿಳಿಯುತ್ತಾರೆ.
NCERT SIR
ಈ ಪರಿಷ್ಕರಣೆಯು ಇತ್ತೀಚೆಗೆ 18 ವರ್ಷ ತುಂಬಿದ ಯುವಕರನ್ನು ನಾಗರಿಕರಾಗಿ ಸೇರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಸಾವು, ವಿಳಾಸ ಅಥವಾ ಮನೆ ಬದಲಾವಣೆ, ನಕಲು ದಾಖಲಾತಿ ಅಥವಾ ಇತರ ವ್ಯತ್ಯಾಸಗಳಿಂದಾಗಿ ಹೆಸರುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಅಧ್ಯಾಯನದಲ್ಲಿ ತಿಳಿಸಲಾಗಿದೆ.

