ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆಯಾದ್ರೂ ಕೊನೆ ಸ್ಥಾನದಲ್ಲಿಯೇ ಉಳಿದ ಕಲಬುರಗಿ
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕಿಂತ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಸರ್ಕಾರವು ಶುಲ್ಕ ರಹಿತ ಮರುಪರೀಕ್ಷೆಯನ್ನು ಘೋಷಿಸಿದೆ.

ಕಲಬುರಗಿ ಕೊನೆ ಸ್ಥಾನ
ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕ್ರಮವಾಗಿ ಮೊದಲ, ಎರಡನೇ ಸ್ಥಾನದಲ್ಲಿವೆ. ಪಿಯು ಫಲಿತಾಂಶದಲ್ಲಿಯೂ ಕಲಬುರಗಿ 29ನೇ ಸ್ಥಾನದಲ್ಲಿತ್ತು. ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ತೆಗೆದುಕೊಂಡಿದ್ದಾರೆ.
ಫಲಿತಾಂಶದಲ್ಲಿ ಸುಧಾರಣೆ
ಉತ್ತರ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚು ಶ್ರಮ ಹಾಕಿದ ಪರಿಣಾಮ ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಜಿಲ್ಲೆಯ ಅಧಿಕಾರಿಗಳು ವಿಶೇಷ ಕ್ಲಾಸ್, ಕೆಲವು ನಿಯಮಗಳನ್ನು ರೂಪಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಕಾರಣವಾಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
34ನೇ ಸ್ಥಾನದಲ್ಲಿ ಮಧುಗಿರಿ
2025ರಲ್ಲಿ ಕಲಬುರಗಿ ಶೇ.56.89 ಫಲಿತಾಂಶ ಪಡೆದುಕೊಂಡು 35ನೇ ಸ್ಥಾನದಲ್ಲಿತ್ತು. ಈ ವರ್ಷ (2026) ಶೇ.85.06 ಫಲಿತಾಂಶವನ್ನು ಕಲಬುರಗಿ ಜಿಲ್ಲೆ ದಾಖಲಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.28.17ರಷ್ಟು ಫಲಿತಾಂಶ ಏರಿಕೆಯಾಗಿದೆ. ಶೇ.90.26 ಫಲಿತಾಂಶದ ಮೂಲಕ ಮಧುಗಿರಿ 34ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Breaking ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ ಪ್ರಕಟ, ಈ ಬಾರಿ ದಾಖಲೆಯ ಶೇ.94.10 ಫಲಿತಾಂಶ!
ಮರುಪರೀಕ್ಷೆಗೆ ಇಲ್ಲ ಶುಲ್ಕ
SSLC ಪರೀಕ್ಷೆಯನ್ನು ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳ ಮರು ಪರೀಕ್ಷೆ ಮೇ.18 ರಿಂದ 25 ವರೆಗೆ ನಡೆಯಲಿದೆ. ಈ ಮರುಪರೀಕ್ಷೆಗೆ ಯಾವುದೇ ಶುಲ್ಕವಿರಲ್ಲ. ಈ ಹಿಂದೆ ಪ್ರತಿ ವಿಷಯಕ್ಕೆ ವಿದ್ಯಾರ್ಥಿಗಳು 250 ರೂಪಾಯಿ ಕಟ್ಟಬೇಕಿತ್ತು. ಈ ಬಾರಿ ಸರ್ಕಾರವನ್ನು ಶುಲ್ಕವನ್ನು ಮನ್ನಾ ಮಾಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್, ಯಾವ ಜಿಲ್ಲೆಗೆ ಎಷ್ಟು ಬಂತು?
ಬಿಜೆಪಿ ಟ್ವೀಟ್
S.S.L.C ಫಲಿತಾಂಶ ಬಂದಿದೆ ಟ್ವೀಟ್ ಎಲ್ಲಿ ಮಹಾಜ್ಞಾನಿ Priyank Kharge ? ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
S.S.L.C ಫಲಿತಾಂಶ ಬಂದಿದೆ ಟ್ವೀಟ್ ಎಲ್ಲಿ ಮಹಾಜ್ಞಾನಿ @PriyankKharge ?#KhargeFailsKalaburgipic.twitter.com/8iM5BJjHym
— BJP Karnataka (@BJP4Karnataka) April 23, 2026

