ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯವು ಶೇ.86.48ರಷ್ಟು ದಾಖಲೆಯ ಫಲಿತಾಂಶವನ್ನು ಕಂಡಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ ಹಾಗೂ ಡಿಜಿಲಾಕರ್ ಮೂಲಕ ಪಡೆಯಬಹುದು.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ 3 ಗಂಟೆಗೆ ಪ್ರಕಟಣೆಯಾಗಿದ್ದು ರಾಜ್ಯಕ್ಕೆ ದಾಖಲೆಯ ಶೇ.86.48 ರಿಸಲ್ಟ್ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 13.03% ಏರಿಕೆ ಕಂಡಿದೆ. ಈ ಬಗ್ಗೆ ಸಂಜೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಐತಿಹಾಸಿಕ ಸಾಧನೆ ಖುಷಿ ವ್ಯಕ್ತಪಡಿಸಿದ್ದು, ಈ ಬಾರಿ ಡಿಜಿಟಲ್ ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಅದರಂತೆ ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ನಲ್ಲಿ ಫಲಿತಾಂಶ ಪ್ರಕಟವಾಗಿತ್ತು.

ಕಲಾ ವಿಭಾಗ 72.86 %

ವಾಣಿಜ್ಯ ವಿಭಾಗ 88.04%

ವಿಜ್ಞಾನ ವಿಭಾಗ 91.69 %

ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್‌

ಈ ಬಾರಿ ರಾಜ್ಯದಲ್ಲಿ ಉಡುಪಿ ಮೊದಲ ಸ್ಥಾನ 96.39%, ಎರಡನೇ ಸ್ಥಾನ ದಕ್ಷಿಣ ಕನ್ನಡ 96.35% ಮತ್ತು ಯಾದಗಿರಿ ಕೊನೆಯ ಸ್ಥಾನ‌ - 71.21% ಫಲಿತಾಂಶ ಬಂದಿದೆ.

ಜಿಲ್ಲಾವಾರು ಫಲಿತಾಂಶ

  1. ಉಡುಪಿ – 96.39%
  2. ದಕ್ಷಿಣ ಕನ್ನಡ – 96.35%
  3. ಕೊಡಗು – 92.34%
  4. ವಿಜಯಪುರ – 92%
  5. ಉತ್ತರ ಕನ್ನಡ – 91.78%
  6. ಬೆಂಗಳೂರು ಗ್ರಾಮಾಂತರ – 91.00%
  7. ಚಿಕ್ಕಮಗಳೂರು – 90.80%
  8. ಬೆಂಗಳೂರು ದಕ್ಷಿಣ – 90.55%
  9. ಚಿಕ್ಕಬಳ್ಳಾಪುರ – 90.24%
  10. ಬೆಂಗಳೂರು ಉತ್ತರ – 90.05%
  11. ಹಾಸನ – 89.71%
  12. ಮಂಡ್ಯ – 88.85%
  13. ರಾಮನಗರ – 87.90%
  14. ಕೋಲಾರ – 87.38%
  15. ಶಿವಮೊಗ್ಗ – 87.62%
  16. ತುಮಕೂರು – 86.89%
  17. ಕೊಪ್ಪಳ – 86.80%
  18. ಚಾಮರಾಜನಗರ – 84.68%
  19. ಮೈಸೂರು – 84.80%
  20. ಬೀದರ್ – 84.61%
  21. ಬಾಗಲಕೋಟೆ – 84.12%
  22. ಹಾವೇರಿ – 84.11%
  23. ಧಾರವಾಡ – 83.31%
  24. ಚಿಕ್ಕೋಡಿ – 83.10%
  25. ದಾವಣಗೆರೆ – 81.99%
  26. ಬೆಳಗಾವಿ – 80.32%
  27. ಚಿತ್ರದುರ್ಗ – 79.12%
  28. ಬಳ್ಳಾರಿ – 78.69%
  29. ಕಲಬುರಗಿ – 76.97%
  30. ಗದಗ – 76.65%
  31. ರಾಯಚೂರು – 74.09%
  32. ಯಾದಗಿರಿ – 71.21%

ಬಾಲಕಿಯರೇ ಮೇಲುಗೈ

ಒಟ್ಟು 6,48,853 ಪರೀಕ್ಷೆಗೆ ನೋಂದಾವಣೆ ಮಾಡಿಕೊಂಡಿದ್ದರು. 16,653 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇಕಾಡ 88.70% ಬಾಲಕಿಯರು ಉತ್ತೀರ್ಣರಾಗಿದ್ದು, ಶೇಕಾಡ 83.65% ಬಾಲಕರು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇಕಾಡ 85% ವಿಧ್ಯಾರ್ಥಿಗಳು ಉತ್ತೀರ್ಣರಾದರೆ ಗ್ರಾಮೀಣ ಪ್ರದೇಶದಲ್ಲಿ ಶೇಕಾಡ 87.62% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in ವೆಬ್‌ಸೈಟ್ ಮತ್ತು ‘ಕರ್ನಾಟಕ ಒನ್‌’ ಮೊಬೈಲ್‌ ಆ್ಯಪ್‌ , ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ವಾಟ್ಸಪ್‌/ಎಸ್‌ಎಂಎಸ್ ಮೂಲಕ ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆಯ ಸಮಯದಲ್ಲೇ ಅವರ ಅಂಕಪಟ್ಟಿಗಳನ್ನೂ ಡಿಜಿಲಾಕರ್‌ ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. https://www.digilocker.gov.in ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.