- Home
- News
- Crime
- ಕೂದಲು, ನಿಂಬೆ, ಮೇಕೆ ತಲೆ, ಚಿನ್ನದ ತಾಳಿ..! ತುಮಕೂರಿನ ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಾರಕ್ಕೆ ಬೆಚ್ಚಿಬಿದ್ದ ಸ್ಥಳೀಯರು
ಕೂದಲು, ನಿಂಬೆ, ಮೇಕೆ ತಲೆ, ಚಿನ್ನದ ತಾಳಿ..! ತುಮಕೂರಿನ ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಾರಕ್ಕೆ ಬೆಚ್ಚಿಬಿದ್ದ ಸ್ಥಳೀಯರು
ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ತುಮಕೂರು: ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಅರ!
ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.
ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಾರ
ಬನವಾಸಿ ಆಂಜನೇಯ ದೇವಸ್ಥಾನದ ಬಳಿಯೇ ವಾಮಾಚಾರ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳದಲ್ಲಿ ಮೇಕೆಯ ತಲೆ, ಮಣ್ಣಿನ ಕುಡಿಕೆಯೊಳಗೆ ಬೇವಿನ ಸೊಪ್ಪು, ಕೂದಲು, ನಿಂಬೆ, ಸೇರಿದಂತೆ ವಾಮಾಚಾರಕ್ಕೆ ಬಳಸುವ ಹಲವು ವಸ್ತಗಳು ಕಂಡುಬಂದಿವೆ.
ನಿಧಿ ಆಸೆಯೋ, ಸ್ತ್ರೀ ವಶೀಕರಣವೋ?
ದುಷ್ಕರ್ಮಿಗಳು ನಿಧಿ ಆಸೆಗೆ ವಾಮಾಚಾರ ಮಾಡಿದ್ದಾರಾ? ಅಥವಾ ಶತ್ರು ಸಂಹಾರ ಪೂಜೆಯಾ? ಸ್ಥಳದಲ್ಲಿ ಪತ್ತೆಯಾದ ಕೂದಲು ಯಾರದ್ದು? ಇನ್ನು ಬೆಚ್ಚಿಬಿಳಿಸುವ ವಿಷಯ ಎಂದರೆ ಮೇಕೆ ಬಲಿ ಕೊಡುವ ಮುನ್ನ ಸಿಂಗರಿಸಿ ಚಿನ್ನದ ತಾಳಿ ಕಟ್ಟಿ ಪೂಜೆ ಮಾಡಲಾಗಿದೆ. ಮಹಿಳೆಯರ ಬಟ್ಟೆಗಳು ಸಹ ಚೆಲ್ಲಪಿಲ್ಲಿ ಬಿದ್ದಿದ್ದು ವಾಮಾಚಾರ ಮುಗಿದ ಬಳಿಕ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತೆರಳಿರುವ ದುಷ್ಮರ್ಮಿಗಳು. ಇದೆಲ್ಲ ಗಮನಿಸಿದರೆ ದುಷ್ಕರ್ಮಿಗಳು ಹೆಣ್ಣಿನ ವಶೀಕರಣ ಪೂಜೆ ನಡೆದಿದೆಯೇನೋ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನಗಳಿಗೆ ಇಂಬು ಕೊಡುವಂತೆ ಮಹಿಳೆಯ ಬಟ್ಟೆ, ಚಿನ್ನದ ತಾಳಿ, ಕೂದಲು ಸ್ಥಳದಲ್ಲಿ ಕಂಡು ಬಂದಿವೆ
ತುಮಕೂರು: ವಾಮಚಾರಕ್ಕೆ ಬೆಚ್ಚಿಬಿದ್ದ ವಡ್ಡರಹಳ್ಳಿ ಜನರು!
ಎಂದಿನಂತೆ ಜನ ಇಂದು ದೇವಸ್ಥಾನದ ಬಳಿ ಹೋದಾಗ ಅಲ್ಲಿ ಕಂಡುಬಂದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಜನರು. ಕೆಲವರು ನಿಧಿ ಆಸೆಗಾಗಿ ಕಳ್ಳರ ಕೆಲಸ ಇದು ಎಂದರೆ, ಇನ್ನು ಕೆಲವರು ಸ್ತ್ರೀವಶೀಕರಣ ಪೂಜೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಈ ರೀತಿ ವಾಮಾಚಾರ ಮಾಡುವುದರ ಹಿಂದೆ ಏನು ಉದ್ದೇಶವಿತ್ತು ಅನ್ನೊದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

