ನೇಣಿಗೆ ಕೊರಳೊಡ್ಡಿದ ಉಡುಪಿಯ ಖ್ಯಾತ ಮಾಡೆಲ್: ಜೀವ ಕೊನೆಗಾಣಿಸಿದ್ಯಾಕೆ ಕೃತಿ ಬಂಗೇರಾ
ಉಡುಪಿಯ ಮಾಡೆಲ್ ಕೃತಿ ಬಂಗೇರಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮಾಡೆಲ್ ಆತ್ಮಹತ್ಯೆ
ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಾಗೂ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿದ್ದ ಉಡುಪಿಯ ಕಲ್ಮಾಡಿಯ ಕೃತಿ ಬಂಗೇರಾ ಇಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್ ಘಟನೆ ನಡೆದಿದೆ.
ಕಾರಣ ನಿಗೂಢ
27 ವರ್ಷದ ಕೃತಿ ಅವರು ತಮ್ಮ ಬೆಡ್‌ರೂಮ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು ಬರದಿದ್ದರೂ, ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ.
ಹೋಟೆಲ್ ಉದ್ಯೋಗಿ
ಕೃತಿ ಬಂಗೇರಾ (Kurthi Bangera) ಅವರು, ಕಡಿಯಾಳಿಯಲ್ಲಿರುವ ಹೋಟೆಲೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ಐದು ತಿಂಗಳುಗಳಿಂದ ಕೆಲಸಕ್ಕೆ ಅವರು ಹೋಗುತ್ತಿರಲಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಸರಿಯಾಗಿ ತಿಳಿದಿಲ್ಲ. ಮನೆಯಲ್ಲಿಯೇ ಇದ್ದ ಅವರು, ನಿನ್ನೆ ಅರ್ಥಾತ್ ಆಗಸ್ಟ್ 6ರಂದು ತಾಯಿ ಹೊರಗೆ ಹೋದ ಸಂದರ್ಭದಲ್ಲಿ ಸಾವಿಗೆ ಶರಣಾಗಿದ್ದಾರೆ.
ನೇಣು ಬಿಗಿದು ಸಾವಿಗೆ ಶರಣು
ಅಮ್ಮ ರತ್ನಾ ಅವರು ಮನೆಗೆ ಹಿಂತಿರುಗಿದಾಗ ವಿಷಯ ಬೆಳಕಿಗೆ ಬಂದಿದೆ. ಮಗಳ ಕೋಣೆಯಿಂದ ಎಷ್ಟು ಹೊತ್ತಾದರೂ ರೆಸ್ಪಾನ್ಸ್ ಬರದಾಗ ಗಾಬರಿಗೊಂಡಿರುವ ರತ್ನಾ ಅವರು, ತಕ್ಷಣವೇ ತಮ್ಮ ಸಹೋದರನಿಗೆ ಕಾಲ್ ಮಾಡಿದ್ದಾರೆ. ಬಳಿಕ ಬಾಗಿಲನ್ನು ಒಡೆದು ಪ್ರವೇಶಿಸುವ ಹೊತ್ತಿನಲ್ಲಿಯೇ ಕೃತಿ ಕೊನೆಯುಸಿರು ಎಳೆದು ಆಗಿತ್ತು.
ದೂರು ದಾಖಲು
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

