MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • ಬೆಂಗಳೂರು ಸೂಟ್‌ಕೇಸಿನಲ್ಲಿ ಬಾಲಕಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್; ಅತ್ಯಾ*ಚಾರ ನಡೆಸಿ ಕೊಲೆಗೈದ 7 ಮಂದಿ ಬಂಧನ

ಬೆಂಗಳೂರು ಸೂಟ್‌ಕೇಸಿನಲ್ಲಿ ಬಾಲಕಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್; ಅತ್ಯಾ*ಚಾರ ನಡೆಸಿ ಕೊಲೆಗೈದ 7 ಮಂದಿ ಬಂಧನ

ಬೆಂಗಳೂರಿನ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾ*ಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ.

2 Min read
Author : Sathish Kumar KH
Published : Jun 08 2025, 03:41 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಬೆಂಗಳೂರು (ಜೂ.8): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿಯ ರೈಲು ಹಳಿ ಬಳಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 17 ವರ್ಷದ ಬಾಲಕಿಯನ್ನು ಅತ್ಯಾ*ಚಾರ ಮಾಡಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಹಾರ ಮೂಲದ 7 ಜನ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಆಗಿದ್ದಾರೆ.

27
Image Credit : Asianet News

ಬಂಧಿತ ಆರೋಪಿಗಳು: ಆಶಿಕ್ ಕುಮಾರ್ (22), ಮುಖೇಶ್ ರಾಜಬನ್ಶಿ (35), ಇಂದುದೇವಿ (32), ರಾಜರಾಮ್ ಕುಮಾರ್ (18), ಪಿಂಟು ಕುಮಾರ್ (18), ಕಾಲು ಕುಮಾರ್ (17), ರಾಜು ಕುಮಾರ್ (17) ಎಂಬವರನ್ನು ಬಂಧಿಸಲಾಗಿದೆ.

Related Articles

Related image1
55ರ ಆಂಟಿ ಜೊತೆಗೆ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಕೊಲೆ ಮಾಡಿದ 33ರ ಯುವಕ: 3 ಜನರ ಬಂಧನ
Related image2
ಯಶವಂತಪುರ ರೈಲ್ವೆ ಹಳಿಯಲ್ಲಿ ಕೊಳ್ಳೇಗಾಲದ ಯುವಕನ ಮೃತದೇಹ ಪತ್ತೆ!
37
Image Credit : Asianet News

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ A1 ಆರೋಪಿ ಆಶೀಕ್ ಕುಮಾರ್ ಬೆಂಗಳೂರಿನ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದನು. ಕಳೆದ ಮೇ 13ನೇ ತಾರೀಕು ಬಿಹಾರಕ್ಕೆ ತೆರಳಿದ್ದನು. ಕೇವಲ ಎರಡೇ ದಿನದಲ್ಲಿ ಬಿಹಾರದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನ ಪ್ರೀತಿಸುವ ನಾಟಕವಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದನು. ಆಶಿಕ್ ಕುಮಾರನ ಪ್ರೀತಿಯ ಬಲೆಗೆ ಬಿದ್ದ ಬೆಲಾರು ಗ್ರಾಮದ ನಿವಾಸಿ ರೀಮಾ ಕುಮಾರಿ (17) ತಾನು ನಿನ್ನೊಂದಿಗೆ ಜೀವನ ಮಾಡಲು ಸಿದ್ಧ ಎಂದು ಹೇಳಿದ್ದಾಳೆ. ಆಗ ಯುವತಿ ಇನ್ನೂ ಅಪ್ರಾಪ್ತೆ ಆಗಿದ್ದರೂ ಆಕೆಯನ್ನು ಕರೆದುಕೊಂಡು ಬೆಂಗಳೂರಿಗೆ ಓಡಿ ಹೋಗಲು ಸಿದ್ಧತೆ ನಡೆಸಿದ್ದಾನೆ.

47
Image Credit : Asianet News

ಅದರಂತೆ ಯುವತಿ ರೀಮಾ ಕುಮಾರಿಯನ್ನು ಕರೆದುಕೊಂಡು ಮೇ 15ರಂದು ಬಿಹಾರದಿಂದ ಬೆಂಗಳೂರಿಗೆ ಹೊರಟಿದ್ದಾನೆ. ಯುವತಿಯ ಜೊತೆಗೆ ಬೆಂಗಳೂರಿಗೆ ಮೇ 18ರಂದು ಆಗಮಿಸಿದ್ದಾರೆ. ಅಂದು ರಾತ್ರಿಯವರೆಗೂ ಬೆಂಗಳೂರು ನಗರವನ್ನು ತೋರಿಸಿದ್ದಾನೆ. ನಗರವನ್ನು ಸುತ್ತಾಡುವಾಗ ಆಕೆ ಕೇಳಿದ್ದ ತಿಂಡಿ, ಊಟವನ್ನು ಕೊಡಿಸಿ ಚೆನ್ನಾಗಿ ನೋಡಿಕೊಳ್ಳುವ ನಾಟಕ ಮಾಡಿದ್ದಾನೆ. ಇದಾದ ನಂತರ ರಾತ್ರಿ ವೇಳೆಗೆ ಆಶೀಕ್ ಕುಮಾರ್ ತನ್ನ ಸಂಬಂಧಿ ಮುಖೇಶ್ ಮನೆಗೆ ಯುವತಿ ಕರೆದುಕೊಂಡು ಬಂದಿದ್ದಾನೆ.

57
Image Credit : Asianet News

ಮುಖೇಶನ ಮನೆಯಲ್ಲಿ 3 ದಿನಗಳನ್ನು ಕಳೆದ ಯುವತಿ ರೀಮಾ ಕುಮಾರಿಯನ್ನು ಆಶೀಕ್ ಕುಮಾರ್ ಲೈಂಗಿಕವಾಗಿ ಮುಕ್ಕಿರಿದಿದ್ದಾನೆ. ಆದರೆ, ಮದುವೆಗೂ ಮುಂಚಿತವಾಗಿ ತನ್ನನ್ನು ಹೆಂಡತಿಗಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದ ಆಶೀಕ್‌ಗೆ ಲೈಂಗಿಕ ಕ್ರಿಯೆಗೆ ಸಹಕರಿಸದೇ ಗಲಾಟೆ ಮಾಡಿದ್ದಾಳೆ. ಈ ವೇಳೆ ಆಶೀಕ್ ಬಾಲಕಿಯ ಖಾಸಗಿ ಬಾಗಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ನಂತರ, ಕಬ್ಬಿಣದ ರಾಡ್‌ನಿಂದಲೂ ಬಾಲಕಿಗೆ ಹಲ್ಲೆ ನಡೆಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಬಾಲಕಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

67
Image Credit : Asianet News

ಇದಾದ ನಂತರ ತಾನು ಬಿಹಾರದಿಂದ ಕರೆದುಕೊಂಡು ಬಂದ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಸಂಬಂಧಿಕರಿಗೆ ತಿಳಿಸಿದ್ದಾನೆ. ಆಗ ಎಲ್ಲರೂ ಪ್ಲಾನ್ ಮಾಡಿ ಬಾಲಕಿ ಶವವನ್ನು ಸಾಗಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಕ್ಯಾಬ್ ಮೂಲಕ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ತೆಗೆದುಕೊಂಡು ಹೋಗಿ, ರೈಲು ಹಳಿಯಿಂದ ಕೆಳಕ್ಕೆ ಸೂಟ್ ಕೇಸ್ ಎಸೆದು ಎಸ್ಕೇಪ್ ಆಗಿದ್ದಾನೆ. ಚಲಿಸುವ ರೈಲಿನಿಂದ ಯುವತಿ ಶವ ಎಸೆದಿರುವಂತೆ ಬಿಂಬಿಸಲು ಯತ್ನ ಮಾಡಿದ್ದಾರೆ. ಈ ಘಟನೆಯ ಬಳಿಕ ಎಲ್ಲ ಆರೋಪಿಗಳು ಬಿಹಾರ ರಾಜ್ಯಕ್ಕೆ ಹೋಗಿದ್ದಾರೆ.

77
Image Credit : Asianet News

ಬೆಂಗಳೂರಿನಲ್ಲಿ ಆರೋಪಿಗಳ ಚಲನವಲನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಆರೋಪಿಗಳು ಸೂಟ್ ಕೇಸ್‌ನಲ್ಲಿ ಶವ ಸಾಗಿಸುವ ದೃಶ್ಯಗಳು ಸೆರೆಯಾಗಿವೆ. ಸಿಸಿ ಕ್ಯಾಮರಾಗಳ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ ಬೆಂಗಳೂರಿನ ಸೂರ್ಯ ನಗರ ಠಾಣೆ ಪೊಲೀಸರು, 7 ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಕೊಲೆ
ಭಾರತ ಸುದ್ದಿ
ಬಿಹಾರ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಎಸ್‌ಬಿಐ ಎಟಿಎಂ ಮುಂದೆಯೇ ಉದ್ಯಮಿಯ ಕಾಲಿಗೆ ಗುಂಡಿಕ್ಕಿ 6 ಲಕ್ಷ ದರೋಡೆ
Recommended image2
ದಾವಣಗೆರೆ ಪೊಲೀಸರ ಮೇಲೆ ಕೈ ಹಾಕಿದ ಪೈಲ್ವಾನ್ ಪುತ್ರರು! ಮಹಿಳಾ ಆಯೋಗ ಮೌನಕ್ಕೆ ವ್ಯಾಪಕ ಆಕ್ರೋಶ
Recommended image3
ಅಕ್ರಮ ಸಂಬಂಧ ನೋಡಿದ ಮಾವ; ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ!
Related Stories
Recommended image1
55ರ ಆಂಟಿ ಜೊತೆಗೆ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಕೊಲೆ ಮಾಡಿದ 33ರ ಯುವಕ: 3 ಜನರ ಬಂಧನ
Recommended image2
ಯಶವಂತಪುರ ರೈಲ್ವೆ ಹಳಿಯಲ್ಲಿ ಕೊಳ್ಳೇಗಾಲದ ಯುವಕನ ಮೃತದೇಹ ಪತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved