ಐಪಿಎಲ್‌ನಲ್ಲಿ ಮಿಂಚಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಂಭಾವ್ಯ ಪಾದಾರ್ಪಣೆಯು ಇಂಗ್ಲೆಂಡ್ ತಂಡಕ್ಕೆ ಚಿಂತೆಗೀಡುಮಾಡಿದೆ. ಆದರೆ ಡ್ರೆಸ್ಸಿಂಗ್‌ ರೂಂನಲ್ಲಿ ನಡೆದಿದ್ದೇನು ಗೊತ್ತಾ?

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ 15ರ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದಲ್ಲಿ ಆಡುವ ಬಗ್ಗೆ ಪ್ರಸ್ತುತ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಐಪಿಎಲ್ 2026 ರಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ನಂತರ, ಅವರು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಭಾರತಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗುವ ಕೀರ್ತಿಗೆ ವೈಭವ ಪಾತ್ರರಾಗಲಿದ್ದಾರೆ. ಅವರ ಚೊಚ್ಚಲ ಪ್ರವೇಶವು ಇಡೀ ಇಂಗ್ಲೆಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತಾ? ಅಷ್ಟಕ್ಕೂ ಡ್ರೆಸ್ಸಿಂಗ್‌ ರೂಂನಿಂದ ಹೊರ ಬಂದ ಸುದ್ದಿ ಆದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಮಾಡ್ತಾರಾ ವೈಭವ್ ಪಾದಾರ್ಪಣೆ!

ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಇಂಗ್ಲೆಂಡ್‌ನ ಟಾಮ್ ಬ್ಯಾಂಟನ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಐರ್ಲೆಂಡ್ ವಿರುದ್ಧದ ಸೋಲಿನ ನಂತರ ಭಾರತ ತಂಡ ಹೆಚ್ಚು ಚುರುಕಿನಿಂದ ಕೂಡಿದೆ ಎಂದು ಟಾಮ್ ಹೇಳಿದ್ದಾರೆ. ವೈಭವ್ ಇಂದು ಆಡಿದ್ದೆ ನಿಜವಾದರೆ, ಭಾರತೀಯ ತಂಡ ಖಂಡಿತವಾಗಿಯೂ ಹೆಚ್ಚು ಪರಿಣಾಮಕಾರಿ ಆಟವನ್ನು ವೀಕ್ಷಿಸಬಹುದಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಐದು ಪಂದ್ಯಗಳನ್ನು ಗೆಲ್ಲಲು ವಿವಿಧ ಆಟಗಾರರು ಮುಂದೆ ಬಂದು ಯಶ ಗಳಿಸಬಹುದು ಎಂದು ಟಾಮ್ ಬ್ಯಾಂಟನ್ ಕೂಡ ಹೇಳಿದ್ದಾರೆ.

ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್‌ಗೆ ಆದ್ಯತೆ!

ವೈಭವ್ ಹೆಸರು ಕೇಳಿ ಇತ್ತ ಇಂಗ್ಲೆಂಡ್ ನಡುಗುತ್ತಿದ್ದರೆ, ಈಗ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ಕೋಣೆಯಲ್ಲಿ ಮೌನ ಚರ್ಚೆಗಳು ನಡೆಯುತ್ತಿವೆ. ಇಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಚೊಚ್ಚಲ ಪ್ರವೇಶ ಸಿಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಾಯಕ ಶ್ರೇಯಸ್ ಅಯ್ಯರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ವೈಭವ್ ಅವರ ಚೊಚ್ಚಲ ಪಂದ್ಯದ ಬಗ್ಗೆ ಎಚ್ಚರಿಕೆ ನಿಲುವು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಅವರ ಪ್ರವೇಶದ ಕುರಿತು ಕೆಲ ಸವಾಲು ಎದ್ದಿರವುದಂತು ನಿಜ ಎನ್ನಲಾಗಿದೆ.

ಟೀಮ್ ಇಂಡಿಯಾ ಪರ ಲಾಂಗ್‌ ಟೈಂ ಆಡ್ತಾರಾ ವೈಭವ್?

ಇದರ ನಡುವೆ, ಐಪಿಎಲ್ ಮತ್ತು ಶ್ರೀಲಂಕಾ 'ಎ' ವಿರುದ್ಧದ ಸರಣಿಯಲ್ಲಿ ಅವರ ಬ್ಯಾಟಿಂಗ್ ಮತ್ತು ಹೈಲೈಟ್‌ಗಳನ್ನು ನಾನು ವೀಕ್ಷಿಸಿದೆ. ವೈಭವ್‌ ತುಂಬಾ ಪ್ರತಿಭಾವಂತರು, ಈ ವಯಸ್ಸಿನಲ್ಲಿ ಅವರ ಸ್ಥಿರ ಪ್ರದರ್ಶನ ನೀಡುತ್ತಿರುವ ರೀತಿ ನೋಡುವುದೇ ಅದ್ಭುತ. ಅವರು ಟೀಮ್ ಇಂಡಿಯಾ ಪರ ಲಾಂಗ್‌ ಟೈಂ ಆಡುತ್ತಾರೆ ಎಂದು ನಾನು ಖಂಡಿತವಾಗಿಯೂ ಭಾವಿಸುತ್ತೇನೆ, ಎಂದು ಟಾಮ್ ಬ್ಯಾಟನ್ ಹೇಳಿದ್ದಾರೆ.