MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಸೈಡ್‌ಗೆ ಹೋಗೋದ್ಯಾರು ? ಸಂಜು ಸ್ಯಾಮ್ಸನ್ Or ಅಭಿಷೇಕ್ ಶರ್ಮಾ ಲೆಕ್ಕಾಚಾರ ಇಲ್ಲಿದೆ!

ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಸೈಡ್‌ಗೆ ಹೋಗೋದ್ಯಾರು ? ಸಂಜು ಸ್ಯಾಮ್ಸನ್ Or ಅಭಿಷೇಕ್ ಶರ್ಮಾ ಲೆಕ್ಕಾಚಾರ ಇಲ್ಲಿದೆ!

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav suryavanshi), ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಅವರ ಅದ್ಭುತ ಪ್ರದರ್ಶನವು ಟೀಮ್ ಇಂಡಿಯಾದಲ್ಲಿರುವ ಅನುಭವಿ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಸ್ಥಾನಕ್ಕೆ ನೇರ ಸವಾಲೊಡ್ಡಿದೆ.

2 Min read
Author : Sathish Kumar KH
Published : Jun 22 2026, 09:19 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : X

ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿ ವರ್ಷವೂ ಒಬ್ಬೊಬ್ಬ ಹೊಸ ಆಟಗಾರರು ಬಂದು ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುತ್ತಾರೆ. ಈಗ ಅಂತಹದ್ದೇ ಒಂದು ಬಿರುಗಾಳಿ ಎದ್ದಿದೆ, ಅದುವೇ 15 ವರ್ಷದ ಪೋರ ವೈಭವ್ ಸೂರ್ಯವಂಶಿ (Vaibhav Suryavanshi). ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಟ್ರೈ-ನೇಶನ್ ಏಕದಿನ ಸರಣಿಯಲ್ಲಿ ವೈಭವ್ ತೋರಿದ ಸ್ಫೋಟಕ ಪ್ರದರ್ಶನವು ಭಾರತೀಯ ಕ್ರಿಕೆಟ್ ಆಯ್ಕೆದಾರರ ಮುಂದೆ ವೈಭವ್‌ನನ್ನು ಆಯ್ಕೆ ಮಾಡಲೇಬೇಕಾದ ಒತ್ತಡವನ್ನು ತಂದಿತ್ತು. ಇದೀಗ ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಭಾರತ ಸೀನಿಯರ್ಸ್ ತಂಡಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : X/@WG_RumblePants

ಈಗ ಪ್ರಶ್ನೆ ವೈಭವ್ ತಂಡಕ್ಕೆ ಬರುತ್ತಾರಾ? ಎಂಬುದಲ್ಲ. ಬದಲಾಗಿ ಅವರು ತಂಡಕ್ಕೆ ಸೇರಿಕೊಂಡಿದ್ದರಿಂದ ಯಾರನ್ನು ಕೈಬಿಡಲಾಗುತ್ತದೆ? ಎಂಬುದು. ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರು ಪ್ರಮುಖ ಆಟಗಾರರಾದ ಅಭಿಷೇಕ್ ಶರ್ಮಾ (Abhishek Sharma) ಮತ್ತು ಸಂಜು ಸ್ಯಾಮ್ಸನ್ (Sanju Samson) ಅವರ ಸ್ಥಾನಕ್ಕೆ ವೈಭವ್ ನೇರ ಸವಾಲಾಗಿದ್ದಾರೆ.

Related Articles

Related image1
ಗೊತ್ತಲ್ಲ ಸಚಿನ್ ಕರಿಯರ್ ಖತಂ ಆಗುವಂತಿತ್ತು, ವೈಭವ್ ಸೂರ್ಯವಂಶಿಗೆ ಬಗ್ಗೆ ಸೌತ್ ಆಫ್ರಿಕಾ ದಿಗ್ಗಜನ ಆತಂಕ
Related image2
ಇದು ಐಪಿಎಲ್ ಅಲ್ಲ, ವರ್ಲ್ಡ್ ರೆಕಾರ್ಡ್ ಬರೆದ ವೈಭವ್ ಸೂರ್ಯವಂಶಿಗೆ ಆರ್‌ಸಿಬಿ ಹೇಳಿದ್ದೇನು?
36
Image Credit : ANI

ಅಂಕಿ-ಅಂಶಗಳಲ್ಲಿ ವೈಭವ್ ಮೇಲುಗೈ?

ಜನವರಿ 2025 ರಿಂದ ಜೂನ್ 2026 ರವರೆಗಿನ ಟಿ20 ಕ್ರಿಕೆಟ್ ಅಂಕಿ-ಅಂಶಗಳನ್ನು ಗಮನಿಸಿದರೆ, ವೈಭವ್ ಸೂರ್ಯವಂಶಿ ಅವರ ವೇಗ ಬೆರಗುಗೊಳಿಸುವಂತಿದೆ.

ಅಭಿಷೇಕ್ ಶರ್ಮಾ: 69 ಪಂದ್ಯ, 2488 ರನ್

ವೈಭವ್ ಸೂರ್ಯವಂಶಿ: 33 ಪಂದ್ಯ, 1464 ರನ್

ಸಂಜು ಸ್ಯಾಮ್ಸನ್: 43 ಪಂದ್ಯ, 1389 ರನ್

ಕೇವಲ 33 ಪಂದ್ಯಗಳಲ್ಲಿ ವೈಭವ್ ಅವರು ಸಂಜು ಸ್ಯಾಮ್ಸನ್ ಅವರಿಗಿಂತ ಹೆಚ್ಚಿನ ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಮತ್ತು ಪವರ್‌ಪ್ಲೇನಲ್ಲಿ ರನ್ ಗಳಿಸುವ ವೇಗವು ಆಧುನಿಕ ಟಿ20 ಕ್ರಿಕೆಟ್‌ಗೆ ಹೇಳಿಮಾಡಿಸಿದಂತಿದೆ. ಐಪಿಎಲ್‌ನಲ್ಲಿಯೂ ಅವರು ದಾಖಲೆ ಮಟ್ಟದ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

46
Image Credit : Getty

ಅಭಿಷೇಕ್ ಶರ್ಮಾ ಮತ್ತು ವೈಭವ್ ನಡುವೆ ನೇರ ಹಣಾಹಣಿ:

ವೈಭವ್ ಸೂರ್ಯವಂಶಿ ಅವರ ಆಟದ ಶೈಲಿಯನ್ನು ನೋಡಿದರೆ ಅವರು ಅಭಿಷೇಕ್ ಶರ್ಮಾಗೆ ನೇರ ಪೈಪೋಟಿ ನೀಡುತ್ತಾರೆ. ಇಬ್ಬರೂ ಎಡಗೈ ಆರಂಭಿಕ ಬ್ಯಾಟರ್‌ಗಳು (Left-hand Openers). ಇಬ್ಬರೂ ಮೊದಲ ಓವರ್‌ನಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುವ ಗುಣ ಹೊಂದಿದ್ದಾರೆ. ಅಭಿಷೇಕ್ ಶರ್ಮಾ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಮತ್ತು ಭಾರತದ ಆಕ್ರಮಣಕಾರಿ ಟಿ20 ಮಾಡೆಲ್‌ನ ಪ್ರಮುಖ ಭಾಗವಾಗಿದ್ದಾರೆ. ಆದರೆ, ವೈಭವ್ ಕಿರಿಯ ವಯಸ್ಸಿನಲ್ಲೇ ತೋರುತ್ತಿರುವ ಪಕ್ವತೆ ಮತ್ತು ಸ್ಥಿರ ಪ್ರದರ್ಶನವು ತಂಡದ ಮ್ಯಾನೇಜ್‌ಮೆಂಟ್ ಭವಿಷ್ಯದ ದೃಷ್ಟಿಯಿಂದ ವೈಭವ್‌ಗೆ ಆದ್ಯತೆ ನೀಡುವಂತೆ ಮಾಡಬಹುದು.

56
Image Credit : X

ಸಂಜು ಸ್ಯಾಮ್ಸನ್ ಸ್ಥಾನಕ್ಕೂ ಅಪಾಯವಿದೆಯೇ?

ಸಂಜು ಸ್ಯಾಮ್ಸನ್ ಅವರ ವಿಷಯಕ್ಕೆ ಬಂದರೆ, ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಸಂಜು ಬಲಗೈ ಬ್ಯಾಟರ್ ಆಗಿರುವುದರಿಂದ ತಂಡದಲ್ಲಿ 'ಲೆಫ್ಟ್-ರೈಟ್' ಕಾಂಬಿನೇಶನ್‌ಗೆ ಅವರು ಸಹಕಾರಿ. ಅಲ್ಲದೆ, ಅವರು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊರುತ್ತಾರೆ. ಆದರೆ, ವೈಭವ್ ಆರಂಭಿಕನಾಗಿ ಬಂದರೆ, ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಅನಿವಾರ್ಯವಾಗುತ್ತದೆ. ಸಂಜು ಸ್ಯಾಮ್ಸನ್ ಅವರಿಗೆ ಇರುವ ಅಂತರಾಷ್ಟ್ರೀಯ ಅನುಭವ ಮತ್ತು ಫಿನಿಶರ್ ಪಾತ್ರವು ಅವರಿಗೆ ರಕ್ಷಾಕವಚದಂತಿದೆ. ಆದರೂ, ವೈಭವ್ ಅವರ ರನ್ ಮಳೆ ನಿರಂತರವಾಗಿದ್ದರೆ, ಸಂಜು ಅವರ ಸ್ಥಾನದ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುವುದು ಖಚಿತ.

66
Image Credit : Getty

ತಂಡದ ಸಮತೋಲನ ಮತ್ತು ಅಂತಿಮ ತೀರ್ಮಾನ:

ಯುವ ಪ್ರತಿಭೆಯನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಕೇವಲ ಅವರ ರನ್‌ಗಳನ್ನು ನೋಡಿ ಮಾಡುವ ನಿರ್ಧಾರವಲ್ಲ. ಅನುಭವ, ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಕಲೆ ಮತ್ತು ತಂಡದ ಸಮತೋಲನ ಇಲ್ಲಿ ಮುಖ್ಯವಾಗುತ್ತದೆ. ಅಭಿಷೇಕ್ ಮತ್ತು ಸಂಜು ಇಬ್ಬರೂ ಅನುಭವಿಗಳಾಗಿದ್ದು, ವೈಭವ್ ಇನ್ನು ಆರಂಭಿಕ ಹಂತದಲ್ಲಿದ್ದಾರೆ. ಆದರೆ, 15 ವರ್ಷದ ಹುಡುಗ ಅಂತರಾಷ್ಟ್ರೀಯ ಮಟ್ಟದ ದಿಗ್ಗಜರ ಹೆಸರಿನೊಂದಿಗೆ ಚರ್ಚೆಯಾಗುತ್ತಿದ್ದಾನೆ. ಈಗ ಭಾರತದ ಸೀನಿಯರ್ಸ್ ತಂಡಕ್ಕೂ ಆಯ್ಕೆಯಾಗಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.

ಅಭಿಷೇಕ್ ಶರ್ಮಾ ಅವರ ಆಕ್ರಮಣಶೀಲತೆ ಅಥವಾ ಸಂಜು ಸ್ಯಾಮ್ಸನ್ ಅವರ ಸ್ಥಿರತೆ ಮತ್ತು ಕೀಪಿಂಗ್ ಕೌಶಲ್ಯ - ಈ ಎರಡರಲ್ಲಿ ಭಾರತ ಏನನ್ನು ಬಿಟ್ಟುಕೊಡಲು ಸಿದ್ಧವಿದೆ ಎಂಬುದು ಸದ್ಯದ ಕುತೂಹಲ. ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾಗೆ ಬಂದಿದ್ದು, ಯಾರಿಗೆ ಬೀಳ್ಕೊಡುಗೆ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ವೈಭವ್ ಸೂರ್ಯವಂಶಿ
ಸಂಜು ಸ್ಯಾಮ್ಸನ್
ಕ್ರಿಕೆಟ್
ಟೀಮ್ ಇಂಡಿಯಾ

Latest Videos
Recommended Stories
Recommended image1
ಇಬ್ಬರು ಟೀಂ ಇಂಡಿಯಾ ಸೇರಿ ಜೈಲು ಶಿಕ್ಷೆ ಅನುಭವಿಸಿದ ಟಾಪ್ 10 ಕ್ರಿಕೆಟಿಗರು, ಲಿಸ್ಟ್‌ನಲ್ಲಿ ಪಾಕಿಗಳೇ ಹೆಚ್ಚು
Recommended image2
ವೈಭವ್‌ ಸೂರ್ಯವಂಶಿ ಆಟ ಹೊಗಳಿದ ಕ್ರಿಕೆಟ್‌ ದಿಗ್ಗಜ, ಬಿಸಿಸಿಐಗೆ ಕ್ಲೈವ್ ಲಾಯ್ಡ್ ವಾರ್ನಿಂಗ್
Recommended image3
ಗೊತ್ತಲ್ಲ ಸಚಿನ್ ಕರಿಯರ್ ಖತಂ ಆಗುವಂತಿತ್ತು, ವೈಭವ್ ಸೂರ್ಯವಂಶಿಗೆ ಬಗ್ಗೆ ಸೌತ್ ಆಫ್ರಿಕಾ ದಿಗ್ಗಜನ ಆತಂಕ
Related Stories
Recommended image1
ಗೊತ್ತಲ್ಲ ಸಚಿನ್ ಕರಿಯರ್ ಖತಂ ಆಗುವಂತಿತ್ತು, ವೈಭವ್ ಸೂರ್ಯವಂಶಿಗೆ ಬಗ್ಗೆ ಸೌತ್ ಆಫ್ರಿಕಾ ದಿಗ್ಗಜನ ಆತಂಕ
Recommended image2
ಇದು ಐಪಿಎಲ್ ಅಲ್ಲ, ವರ್ಲ್ಡ್ ರೆಕಾರ್ಡ್ ಬರೆದ ವೈಭವ್ ಸೂರ್ಯವಂಶಿಗೆ ಆರ್‌ಸಿಬಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved