- Home
- Sports
- Cricket
- ಅಹಮದಾಬಾದಲ್ಲಿ ಟೀಂ ಇಂಡಿಯಾ ಅದೃಷ್ಟ ಚೇಂಜ್ ಆಗಿದ್ದು ಹೇಗೆ? ತನ್ನ ಲಕ್ ತಾನೇ ಬದಲಾಯಿಸಿಕೊಂಡ ಕ್ಷಣ ಯಾವುದು?
ಅಹಮದಾಬಾದಲ್ಲಿ ಟೀಂ ಇಂಡಿಯಾ ಅದೃಷ್ಟ ಚೇಂಜ್ ಆಗಿದ್ದು ಹೇಗೆ? ತನ್ನ ಲಕ್ ತಾನೇ ಬದಲಾಯಿಸಿಕೊಂಡ ಕ್ಷಣ ಯಾವುದು?
2023ರ ವಿಶ್ವಕಪ್ ಫೈನಲ್ ಸೋಲಿನ ಕಹಿ ನೆನಪುಗಳಿದ್ದ ಅಹಮದಾಬಾದ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಅದೃಷ್ಟವನ್ನು ಬದಲಿಸಿಕೊಂಡಿದೆ. ಈ ಗೆಲುವಿನೊಂದಿಗೆ, ಭಾರತವು ಇದೀಗ ಏಕಕಾಲಕ್ಕೆ ಐದು ಪ್ರಮುಖ ಐಸಿಸಿ ಟ್ರೋಫಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಹಮದಾಬಾದ್ ಮೈದಾನ
ಅಹಮದಾಬಾದ್‌ನಲ್ಲಿ ಭಾರತದ ಅದೃಷ್ಟ ಕೊನೆಗೂ ಬದಲಾಗಿದೆ. ಭಾರತದಲ್ಲೇ ನಡೆದಿದ್ದ 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿತ್ತು. ಟೂರ್ನಿಯುದ್ದಕ್ಕೂ ಭಾರತ ಅಬ್ಬರಿಸಿದ್ದರೂ ಅಹಮದಾಬಾದ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಭಾರತ ಪರಾಭವಗೊಂಡಿತ್ತು. ಇತ್ತೀಚೆಗೆ ಅಲ್ಲೇ ನಡೆದಿದ್ದ ಸೂಪರ್-8 ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧವೂ ಭಾರತ ಸೋತಿತ್ತು.
ಅದೃಷ್ಟ ಬದಲಿಸಿಕೊಂಡ ಟೀಂ ಇಂಡಿಯಾ
ಈ ಕಾರಣದಿಂದ ಅಹಮದಾಬಾದ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟ ತಾಣವಲ್ಲ ಎಂಬ ಆಪಾದನೆಗೆ ಗುರಿಯಾಗಿತ್ತು. ಈ ನಡುವೆ, ಲಕ್ ಬದಲಾಗಲಿ ಎಂಬ ಕಾರಣಕ್ಕೆ 2023ರ ಏಕದಿನ ಫೈನಲ್ ವೇಳೆ ಉಳಿದುಕೊಂಡಿದ್ದ ಹೋಟೆಲ್ ಬದಲಿಸಿ ಈ ಬಾರಿ ಬೇರೊಂದು ಹೋಟೆಲ್‌ನಲ್ಲಿ ಭಾರತೀಯ ಆಟಗಾರರು ತಂಗಿದ್ದರು. ಸದ್ಯ ಭಾರತ ಚಾಂಪಿಯನ್ ಆಗಿ ತನ್ನ ಅದೃಷ್ಟವನ್ನು ತಾನೇ ಬದಲಾಯಿಸಿದೆ.
ಭಾರತ ಈಗ ಐಸಿಸಿಯ 5 ಟೂರ್ನೀಲಿ ಹಾಲಿ ಚಾಂಪಿಯನ್!
ಭಾರತ ಈಗ ಏಕಕಾಲಕ್ಕೆ ಐಸಿಸಿಯ 5 ಟ್ರೋಫಿಗಳನ್ನು ತನ್ನಲ್ಲಿಟ್ಟುಕೊಂಡಿದೆ. ಸದ್ಯ ಭಾರತದ ಬಳಿ ಮಹಿಳಾ ಅಂಡರ್-19 ವಿಶ್ವಕಪ್, ಪುರುಷರ ಅಂಡರ್ -19 ವಿಶ್ವಕಪ್, ಮಹಿಳಾ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಪುರುಷರ ಟಿ20 ವಿಶ್ವಕಪ್ ಟ್ರೋಫಿಗಳಿವೆ.
ಇದನ್ನೂ ಓದಿ: ‘ಪ್ರೇಕ್ಷಕರ ಸದ್ದಡಗಿಸುತ್ತೇವೆ’: ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಕಿವೀಸ್ ಕ್ಯಾಪ್ಟನ್!
ವಿಜಯೋತ್ಸವ ಆಚರಣೆ
ಭಾರತ ಕ್ರಿಕೆಟ್ ತಂಡ ಟಿ20 ವಿಶ್ವ ಕಪ್ ನಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ನಗರದ ನಾನಾ ಕಡೆಗಳಲ್ಲಿ ವಿಜಯೋತ್ಸವ ಆಚರಣೆ ಮಾಡಿದರು. ಎದುರಾಳಿ ನ್ಯೂಜಿಲೆಂಡ್ ತಂಡದ ವಿಕೇಟ್ ಹೋಗುತ್ತಿದ್ದಂತೆ ಕೆಲ ಬಡಾವಣೆಯ ಯುವಕರು ಪಟಾಕಿ ಹಚ್ಚಿ ಸಂಭ್ರಮಿಸುತ್ತದರು. ಹೀಗಾಗಿ ಮ್ಯಾಚ್ ಮುಕ್ತಾಯದವರೆಗೂ ನಗರದಲ್ಲಿ ಪಟಾಕಿ ಸದ್ದು ಕೇಳಿಸುತ್ತಲೇ ಇತ್ತು. ಬಳಿಕ ನಗರದ ಚನ್ನಮ್ಮ ಸರ್ಕಲ್, ಆರ್ ಪಿಡಿ ವೃತ್ತ ಸೇರಿದಂತೆ ಇತರೆಡೆ ಜಮಾಯಿಸಿದ ಕ್ರಿಕೆಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಪರವಾಗಿ ಘೋಷಣೆ ಹಾಕಿದೆ. ಜತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: 5 ಎಸೆತಕ್ಕೆ 5 ವಿಕೆಟ್ ಕಿತ್ತ ನ್ಯೂಜಿಲೆಂಡ್‌ನ ರಾಂಡೆಲ್: ಪ್ರಥಮ ದರ್ಜೆಯ 254 ವರ್ಷದಲ್ಲಿ ಇದೇ ಮೊದಲು!
ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಎಲ್ ಇಡಿ ವ್ಯವಸ್ಥೆ
ಇನ್ನೂ ಕೆಲವಡೆ ಸಾರ್ವಜನಿಕ ಸ್ಥಳದಲ್ಲೇ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಎಲ್ ಇಡಿ ವ್ಯವಸ್ಥೆ ಮಾಡಲಾಗಿತ್ತು. ಆದ್ದರಿಂದ ಸಾಮೂಹಿಕ ಸೇರಿದ್ದ ಯುವಕರು ಭಾರತ ತಂಡ ಗೆಲವು ಸಾಧಿಸುತ್ತಿದ್ದಂತೆ ಹತ್ತಿರದ ಸರ್ಕಲ್ ಗಳಲ್ಲಿ ಪಟಾಕಿ ಹೊಡೆದು ತಡರಾತ್ರಿವರೆಗೂ ಸಂಭ್ರಮಿಸಿದ್ದು ಕಂಡುಬಂತು. ಚನ್ನಮ್ಮ ವೃತ್ತ, ಆರ್ ಪಿಡಿ ಸರ್ಕಲ್ ಹಾಗೂ ಕಾಲೇಜು ರಸ್ತೆಯಲ್ಲಿ ಕೆಲ ಹೊತ್ತು ಹೆಚ್ಚಿನ ಯುವಕರು ಸೇರಿದ್ದರಿಂದ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

