ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಆರಂಭದಲ್ಲೇ ಭಾರತಕ್ಕೆ ಸಿಕ್ತು ಗೆಲುವಿನ ಸುಳಿವು, ಅಹಮ್ಮಬಾದ್‌ ಕ್ರೀಡಾಂಗಣದಲ್ಲಿ ಅಭಿಮಾನಿಗಳು ತುಂಬಿದ್ದಾರೆ. ನ್ಯೂಜಿಲೆಂಡ್ ಟಾಸ್ ಗೆದ್ದುಕೊಂಡಿದೆ. ಇದು ಭಾರತಕ್ಕೆ ವರವೋ, ಶಾಪವೋ?

ಅಹಮ್ಮದಾಬಾದ್ (ಮಾ.08) ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯ ಆರಂಭಗೊಂಡಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿನ್ನಿಂಗ್ ಕಾಂಬಿನೇಷನ್ ಉಳಿಸಿಕೊಂಡಿದೆ. ಯಾವಾಗೆಲ್ಲ ಟೀಂ ಇಂಡಿಯಾ ವಿನ್ನಿಂಗ್ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿದಿದೆಯೋ, ಬಹುತೇಕ ಸಂದರ್ಭದಲ್ಲಿ ಭಾರತ ಗೆಲುವು ಸಾಧಿಸಿದೆ.

Add Asianetnews Kannada as a Preferred SourcegooglePreferred

ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ

ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ

ಟಿಮ್ ಸೈಫರ್ಟ್, ಫಿನ್ ಅಲೆನ್, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಂಪನ್, ಡರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ನಿ, ಲೂಕಿ ಫರ್ಗ್ಯೂಸನ್, ಜೇಕಬ್ ಡಫಿ

ಆಫ್ ಸ್ಪಿನ್‌ಗೆ ತಿಣುಕಾಡುತ್ತಿದ್ದ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್‌ಗೆ ಗುಡ್ ನ್ಯೂಸ್ ಇದೆ. ನ್ಯೂಜಿಲೆಂಡ್ ಫೈನಲ್ ಪಂದ್ಯಕ್ಕೆ ಆಪ್ ಸಿಪನ್ನರ್ ಕಣಕ್ಕಿಳಿಸಿಲ್ಲ. ನ್ಯೂಜಿಲೆಂಡ್ ತಂಡದ ಬದಲಾವಣೆ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್‌ಗೆ ವರವಾಗುವ ಸಾಧ್ಯತೆ ಇದೆ.

ರೆಡ್ ಆ್ಯಂಡ್ ಬ್ಲಾಕ್ ಪಿಚ್

ಭಾರತ ಕೆಂಪು ಮಣ್ಣಿನ ಪಿಚ್‌ನಲ್ಲಿ ಹೆಚ್ಚು ಯಶಸ್ಸು ಸಾಧಿಸಿದೆ. ವಾಂಖೆಡೆಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ರೋಚಕ ಗೆಲುವು ಸಾಧಿಸಿತ್ತು. ಇದು ರೆಡ್ ಪಿಚ್ ಆಗಿತ್ತು. ಆದರೆ ಇದೇ ಅಹಮ್ಮದಾಬಾದ್‌ನಲ್ಲಿ ಸೂಪರ್ 8 ಹಂತದ ಪಂದ್ಯದಲ್ಲಿ ಭಾರತ ಸೌತ್ ಆಫ್ರಿಕಾ ವಿರುದ್ಧ ಮುಗ್ಗರಿಸಿತ್ತು. ಈ ವೇಳೆ ಬ್ಲಾಕ್ ಪಿಚ್‌ನಲ್ಲಿ ಆಡಲಾಗಿತ್ತು. ಇದೀಗ ಫೈನಲ್ ಪಂದ್ಯಕ್ಕೆ ರೆಡ್ ಹಾಗೂ ಪ್ಲಾಕ್ ಮಿಶ್ರಣದ ಪಿಚ್‌ನಲ್ಲಿ ಫೈನಲ್ ಆಡಲಾಗುತ್ತಿದೆ. ಹೀಗಾಗಿ ಇದು ಭಾರತಕ್ಕೆ ಹೇಗೆ ನೆರವಾಗಲಿದೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕಿಂತ ಅಹಮ್ಮದಬಾದ್ ಕ್ರೀಡಾಂಗಣ ಭಾರತಕ್ಕೆ ಹೆಚ್ಚಿನನ ಯಶಸ್ಸು ಹಾಗೂ ಸಿಹಿ ನೀಡಿಲ್ಲ. 2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲೇ ಇದೇ ಕ್ರೀಡಾಂಗಣದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿತ್ತು. 1.2 ಲಕ್ಷ ಅಭಿಮಾನಿಗಳ ಮುಂದೆ ಭಾರತ ತಂಡವನ್ನು ಆಸ್ಟ್ರೇಲಿಯಾ ಸ್ಥಬ್ಧ ಮಾಡಿತ್ತು. ಇದೀಗ ಇದೇ ಮೈದಾನದಲ್ಲಿ ಭಾರತ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.