ICC ಟಿ20 ವಿಶ್ವಕಪ್ ಟ್ರೋಫಿಯನ್ನು ತಯಾರಿಸುವ ರಾಜಸ್ಥಾನದ ಜೈಪುರದ ವ್ಯಕ್ತಿ ಯಾರು?
ಟಿ20 ವಿಶ್ವಕಪ್ ಟ್ರೋಫಿಯನ್ನು ರಾಜಸ್ಥಾನದ ಜೈಪುರದಲ್ಲಿ ತಯಾರಿಸಲಾಗುತ್ತದೆ. ಬೆಳ್ಳಿಯಿಂದ ಮಾಡಿದ ಈ 6 ಕೆ.ಜಿ ತೂಕದ ಟ್ರೋಫಿಯ ವಿನ್ಯಾಸ, ತಯಾರಕರ ವಿವರ ಹಾಗೂ ಕಳೆದ ಕೆಲವು ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರಬಲ ಪ್ರದರ್ಶನದ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.

ರಾಜಸ್ಥಾನದ ಜೈಪುರ
ಟಿ20 ವಿಶ್ವಕಪ್ ಟ್ರೋಫಿಯನ್ನು ರಾಜಸ್ಥಾನದ ಜೈಪುರದಲ್ಲಿ ತಯಾರಿಸಲಾಗುತ್ತದೆ. ಟ್ರೋಫಿಯ ಮೂಲ ವಿನ್ಯಾಸ 2007ರಲ್ಲಿ ಚೊಚ್ಚಲ ವಿಶ್ವಕಪ್‌ಗೂ ಮುನ್ನ ಸಿದ್ಧಗೊಂಡಿತ್ತು.
ಅಮಿತ್ ಪಬುವಾಲ್
ಆಸ್ಟ್ರೇಲಿಯಾದ ಮಿನಲ್ ಬ್ರೈಸ್ ಎನ್ನುವವರು ಟ್ರೋಫಿಯ ವಿನ್ಯಾಸ ರೆಡಿ ಮಾಡಿದ್ದರು. ಆದರೆ ಟ್ರೋಫಿಯನ್ನು ತಯಾರಿಸುವ ಕೆಲಸವನ್ನು ಐಸಿಸಿ, ಜೈಪುರದಲ್ಲಿರುವ ಅಮಿತ್ ಪಬುವಾಲ್‌ಗೆ ವಹಿಸುತ್ತಾ ಬಂದಿದೆ. ಟ್ರೋಫಿಯನ್ನು ಬೆಳ್ಳಿಯಿಂದ ಮಾಡಲಾಗಿದ್ದು, ಅದರ ಮೇಲೆ ಪ್ಲಾಟಿನಂ ಲೇಪನವಿದೆ.
6 ಕೆ.ಜಿ.ಯಷ್ಟು ತೂಕ
ಟ್ರೋಫಿ ಸುಮಾರು 6 ಕೆ.ಜಿ.ಯಷ್ಟು ತೂಕ ಇದೆ. ಚಾಂಪಿಯನ್ ಆಗುವ ತಂಡಕ್ಕೆ ಮೂಲ ಟ್ರೋಫಿಯನ್ನು ಹಸ್ತಾಂತರಿಸಲಾಗುತ್ತದೆ. ಸಂಭ್ರಮಾಚರಣೆ ಬಳಿಕ ಅದನ್ನು ವಾಪಸ್ ಪಡೆಯಲಿರುವ ಐಸಿಸಿ, ಮೂಲ ಟ್ರೋಫಿಯನ್ನು ಹೋಲುವ ಮತ್ತೊಂದು ಟ್ರೋಫಿಯನ್ನು ತಂಡಗಳಿಗೆ ನೀಡಲಿದೆ. ಮೂಲ ಟ್ರೋಫಿಯನ್ನು ದುಬೈನಲ್ಲಿರುವ ಐಸಿಸಿಯ ಕೇಂದ್ರ ಕಚೇರಿಯಲ್ಲಿ ಇಡಲಾಗುತ್ತದೆ.
ಕೊನೆಯ 4 ಐಸಿಸಿ ಟೂರ್ನಿ: 34ರಲ್ಲಿ 31 ಗೆದ್ದಿದೆ ಭಾರತ
ಭಾರತ ಕಳೆದ 4 ವರ್ಷಗಳಲ್ಲಿ ನಡೆದ 4 ಐಸಿಸಿ ಟೂರ್ನಿಗಳಲ್ಲಿ ಒಟ್ಟು 34 ಪಂದ್ಯಗಳನ್ನಾಡಿದೆ. 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್‌ಗಳಲ್ಲಿ ಆಡಿದ ಪಂದ್ಯಗಳ ಪೈಕಿ 31ರಲ್ಲಿ ಗೆದ್ದಿದ್ದು, 1 ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋತಿದೆ. 2023ರ ಏಕದಿನ ವಿಶ್ವಕಪ್ ಫೈನಲ್, ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್-8ರಲ್ಲಿ ಭಾರತಕ್ಕೆ ಸೋಲು ಎದುರಾಗಿದೆ.
ಇದನ್ನೂ ಓದಿ: ಭಾರತದ ಪರಾಕ್ರಮಕ್ಕೆ ನ್ಯೂಜಿಲೆಂಡ್ ಪತನ! ನಿನ್ನೆ ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಅಬ್ಬರ ಹೇಗಿತ್ತು?
ಕಳೆದ 3 ಏಕದಿನ ವಿಶ್ವಕಪ್ ಫೈನಲ್ ಸ್ಕೋರ್‌ಗಿಂತ ಹೆಚ್ಚು ಮೊತ್ತ ದಾಖಲಿಸಿದ ಭಾರತ!
ಕಳೆದ 3 ಏಕದಿನ ವಿಶ್ವಕಪ್ ಫೈನಲ್‌ಗಳ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಾದ ಮೊತ್ತಕ್ಕಿಂತ ಈ ಬಾರಿಯ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹೆಚ್ಚು ಮೊತ್ತ ದಾಖಲಿಸಿತು. 2015ರ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ 183, 2019ರ ಫೈನಲ್‌ನಲ್ಲಿ ನ್ಯೂಜಿಲೆಂಡ್ 241 ರನ್ ಗಳಿಸಿತ್ತು. ಅಹಮದಾಬಾದ್‌ನಲ್ಲೇ ನಡೆದಿದ್ದ 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 50 ಓವರಲ್ಲಿ 240ಕ್ಕೆ ಆಲೌಟ್ ಆಗಿತ್ತು.
ಇದನ್ನೂ ಓದಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

