- Home
- Sports
- Cricket
- ‘ಪ್ರೇಕ್ಷಕರ ಸದ್ದಡಗಿಸುತ್ತೇವೆ’: ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಕಿವೀಸ್ ಕ್ಯಾಪ್ಟನ್!
‘ಪ್ರೇಕ್ಷಕರ ಸದ್ದಡಗಿಸುತ್ತೇವೆ’: ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಕಿವೀಸ್ ಕ್ಯಾಪ್ಟನ್!
ಅಹಮದಾಬಾದ್: ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಈ ಫೈನಲ್‌ಗೂ ಮುನ್ನ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನದು?

ಇಂದು ಭಾರತ-ನ್ಯೂಜಿಲೆಂಡ್ ಫೈನಲ್ ಮ್ಯಾಚ್
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲು ರೆಡಿಯಾಗಿವೆ.
ಫೈನಲ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್
ಸುಮಾರು ಒಂದು ಲಕ್ಷದ ಮೂವತ್ತೈದು ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಹೊಂದಿರುವ ಈ ಸ್ಟೇಡಿಯಂನಲ್ಲಿಂದು ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಸ್ಟೇಡಿಯಂನ 99% ಪ್ರತಿಶತ ಅಭಿಮಾನಿಗಳು ಭಾರತ ತಂಡವನ್ನು ಬೆಂಬಲಿಸಲು ರೆಡಿಯಾಗಿದ್ದಾರೆ. ಹೀಗಿರುವಾಗಲೇ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತಕ್ಕೆ ಹಾಗೂ ಟೀಂ ಇಂಡಿಯಾ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ
ಪ್ಯಾಟ್ ಕಮಿನ್ಸ್ ಮಾತು ನೆನಪಿಸಿದ ಸ್ಯಾಂಟ್ನರ್
ಹೌದು, ಅಹಮದಾಬಾದ್‌ನಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್ ಫೈನಲ್‌ಗೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮಾತನಾಡಿ, ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಸದ್ದಡಗಿಸುವುದಾಗಿ ಹೇಳಿದ್ದರು. ಹೇಳಿದಂತೆಯೇ ಆಸೀಸ್ ಚಾಂಪಿಯನ್ ಆಗಿತ್ತು. ಭಾರತೀಯ ಅಭಿಮಾನಿಗಳು ಸೈಲೆಂಟ್ ಆಗಿದ್ದರು.
ಭಾರತಕ್ಕೆ ವಾರ್ನಿಂಗ್ ಕೊಟ್ಟ ಸ್ಯಾಂಟ್ನರ್
ಈ ಬಾರಿ ಅದೇ ಕ್ರೀಡಾಂಗಣದಲ್ಲಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡಾ ಪ್ಯಾಟ್ ಕಮಿನ್ಸ್ ರೀತಿ ಹೇಳಿಕೆ ನೀಡಿದ್ದಾರೆ. ‘ಭಾರತ ತಂಡಕ್ಕೆ ತವರಿನಲ್ಲೇ ಕಪ್ ಗೆಲ್ಲುವ ಒತ್ತಡದಲ್ಲಿ ಆಡಲಿದೆ. ಪ್ರೇಕ್ಷಕರನ್ನು ಸದ್ದಡಗಿಸುವುದು ನಮ್ಮ ಗುರಿ’ ಎಂದು ಅವರು ಹೇಳಿದ್ದಾರೆ.
ಸೆಮೀಸ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ
ಅಂದಹಾಗೆ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರು ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ತವರಿನಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಗೆದ್ದು ಹೊಸ ಮೈಲಿಗಲ್ಲು ಬರೆಯಲು ರೆಡಿಯಾಗಿದೆ.
ಇತಿಹಾಸ ನಿರ್ಮಿಸುತ್ತಾ ಟೀಂ ಇಂಡಿಯಾ?
ಟಿ20 ವಿಶ್ವಕಪ್ ಇತಿಹಾಸದಲ್ಲಿ ಆತಿಥ್ಯ ವಹಿಸಿದ ಯಾವ ದೇಶವೂ ಟ್ರೋಫಿ ಜಯಿಸಿಲ್ಲ. ಭಾರತ ಇದೀಗ ಪ್ರಶಸ್ತಿ ಹೊಸ್ತಿಲಲ್ಲಿದ್ದು, ಈ ಸುವರ್ಣಾವಕಾಶ ಬಳಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

