MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ? ಫ್ಯಾನ್ಸ್ ಶಾಕ್!

ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ? ಫ್ಯಾನ್ಸ್ ಶಾಕ್!

ಟಿ20 ವಿಶ್ವಕಪ್ 2026ರ ಫೈನಲ್‌ಗೆ ಭಾರತ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಆದರೆ, ಇದೇ ಹೊತ್ತಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿವೃತ್ತಿ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂರ್ಯ ನಿಜವಾಗಿಯೂ ನಿವೃತ್ತಿ ಘೋಷಿಸುತ್ತಾರಾ?

2 Min read
Author : Naveen Kodase
Published : Mar 08 2026, 10:40 AM IST
Share this Photo Gallery
  • FB
  • TW
  • Linkdin
  • Whatsapp
16
ಟಿ20 ವಿಶ್ವಕಪ್ ಫೈನಲ್‌ಗೆ ಕೌಂಟ್‌ಡೌನ್
Image Credit : ANI

ಟಿ20 ವಿಶ್ವಕಪ್ ಫೈನಲ್‌ಗೆ ಕೌಂಟ್‌ಡೌನ್

ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಂತಿಮ ಪಂದ್ಯವನ್ನಾಡಲಿದೆ. ಈ ಮೂಲಕ ಮೂರನೇ ಬಾರಿಗೆ ಚಾಂಪಿಯನ್ ಆಗಲು ಭಾರತ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಸೂರ್ಯ ಅವರ ನಾಯಕತ್ವದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

26
 ನಿರೀಕ್ಷಿತ ಪ್ರದರ್ಶನ ತೋರಲು ಕ್ಯಾಪ್ಟನ್ ಸೂರ್ಯ ವಿಫಲ
Image Credit : Getty

ನಿರೀಕ್ಷಿತ ಪ್ರದರ್ಶನ ತೋರಲು ಕ್ಯಾಪ್ಟನ್ ಸೂರ್ಯ ವಿಫಲ

ತಂಡ ಗೆಲುವಿನ ಹಾದಿಯಲ್ಲಿದ್ದರೂ, ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ಈ ಟೂರ್ನಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಿಂಚಿಲ್ಲ. ಅಮೆರಿಕ ವಿರುದ್ಧ 84* ರನ್ ಗಳಿಸಿದ್ದನ್ನು ಬಿಟ್ಟರೆ, ಆ ನಂತರದ 7 ಪಂದ್ಯಗಳಲ್ಲಿ ಅವರು 40 ರನ್‌ಗಳ ಗಡಿ ದಾಟಿಲ್ಲ. ಒಟ್ಟು 8 ಪಂದ್ಯಗಳಲ್ಲಿ 34.37ರ ಸರಾಸರಿಯಲ್ಲಿ ಕೇವಲ 242 ರನ್ ಗಳಿಸಿರುವ ಸೂರ್ಯ, ತಮ್ಮ ಎಂದಿನ ಆಕ್ರಮಣಕಾರಿ ಆಟವನ್ನು ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಸೆಮಿಫೈನಲ್‌ನಂತಹ ಮಹತ್ವದ ಪಂದ್ಯದಲ್ಲೂ ಕಡಿಮೆ ಸ್ಕೋರ್‌ಗೆ ಔಟಾಗಿದ್ದು ಟೀಕೆಗೆ ಕಾರಣವಾಗಿದೆ.

Related Articles

Related image1
ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ!
Related image2
ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್!
36
ಸೂರ್ಯಕುಮಾರ್ ಯಾದವ್ ಫಾರ್ಮ್‌ನಲ್ಲಿ ಏರಿಳಿತ
Image Credit : ANI

ಸೂರ್ಯಕುಮಾರ್ ಯಾದವ್ ಫಾರ್ಮ್‌ನಲ್ಲಿ ಏರಿಳಿತ

ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಇತ್ತೀಚೆಗೆ ಏರಿಳಿತ ಕಾಣುತ್ತಿದೆ. 2025ರಲ್ಲಿ ಅವರು 21 ಪಂದ್ಯಗಳಲ್ಲಿ 13.62ರ ಸರಾಸರಿಯಲ್ಲಿ ಕೇವಲ 218 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದ್ದರು. ಆದರೆ, 2026ರ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದರು. ಈ ವರ್ಷ ಇದುವರೆಗೆ 13 ಪಂದ್ಯಗಳಲ್ಲಿ 48.40ರ ಸರಾಸರಿಯಲ್ಲಿ 4 ಅರ್ಧಶತಕ ಸಹಿತ 484 ರನ್ ಗಳಿಸಿದ್ದಾರೆ. ಆದರೆ, ಐಸಿಸಿ ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ.
46
ಪ್ರಶ್ನೆಗೆ ಗ್ರಾಸವಾದ ಸೂರ್ಯ ಫಾರಂ
Image Credit : ANI

ಪ್ರಶ್ನೆಗೆ ಗ್ರಾಸವಾದ ಸೂರ್ಯ ಫಾರಂ

ಸದ್ಯ 35 ವರ್ಷದ ಸೂರ್ಯಕುಮಾರ್ ಕೇವಲ ಟಿ20 ಮಾದರಿಗೆ ಸೀಮಿತವಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದು, ಏಕದಿನ ತಂಡಕ್ಕೆ ಮರಳುವ ಸಾಧ್ಯತೆಗಳು ಕಡಿಮೆ. ಹೀಗಿರುವಾಗ ಒಂದೇ ಮಾದರಿಯಲ್ಲಿ ಆಡುತ್ತಾ ಫಾರ್ಮ್ ಕಳೆದುಕೊಂಡರೆ ವೃತ್ತಿಜೀವನವೇ ಪ್ರಶ್ನಾರ್ಹವಾಗುತ್ತದೆ.

56
ನಿವೃತ್ತಿ ಗಾಸಿಪ್
Image Credit : ANI

ನಿವೃತ್ತಿ ಗಾಸಿಪ್

ಇದೇ ಕಾರಣಕ್ಕೆ ವಿಶ್ವಕಪ್ ಬಳಿಕ ಅವರು ನಿವೃತ್ತಿ ಘೋಷಿಸಬಹುದು ಎಂಬ ಊಹಾಪೋಹಗಳು ಶುರುವಾಗಿವೆ. ಶ್ರೇಯಸ್ ಅಯ್ಯರ್ ಅವರಂತಹ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವುದು ಸೂರ್ಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

66
ನಾಯಕನಾಗಿ ಸೂರ್ಯ ಉತ್ತಮ ಟ್ರ್ಯಾಕ್ ರೆಕಾರ್ಡ್
Image Credit : Getty

ನಾಯಕನಾಗಿ ಸೂರ್ಯ ಉತ್ತಮ ಟ್ರ್ಯಾಕ್ ರೆಕಾರ್ಡ್

2024ರ ಜುಲೈನಿಂದ ಟಿ20 ನಾಯಕನಾಗಿ ಸೂರ್ಯ ಅವರ ದಾಖಲೆ ಅದ್ಭುತವಾಗಿದೆ. ಅವರ ನಾಯಕತ್ವದಲ್ಲಿ ಭಾರತ ಒಂದೂ ಟಿ20 ಸರಣಿ ಸೋತಿಲ್ಲ. ಆದರೆ, ಬಿಸಿಸಿಐ ನಿಯಮಗಳ ಪ್ರಕಾರ, ಕೇವಲ ನಾಯಕತ್ವದ ಆಧಾರದ ಮೇಲೆ ಯಾರನ್ನೂ ತಂಡದಲ್ಲಿ ಉಳಿಸಿಕೊಳ್ಳುವುದಿಲ್ಲ. ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುವುದು ಕಡ್ಡಾಯ. ವಿಶ್ವಕಪ್ ಮುಗಿದ ತಕ್ಷಣ ಆಯ್ಕೆ ಸಮಿತಿ ಸೂರ್ಯ ಅವರ ಪ್ರದರ್ಶನವನ್ನು ಪರಿಶೀಲಿಸುವ ಸಾಧ್ಯತೆಯಿದೆ. ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ, ಚಾಂಪಿಯನ್ ಆಗಿ ಸೂರ್ಯ ವಿದಾಯ ಹೇಳಬಹುದು ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸೂರ್ಯ ಇನ್ನೂ ಕೆಲವು ವರ್ಷ ಆಡುತ್ತಾರೆ ಎನ್ನುವವರೂ ಇದ್ದಾರೆ. ಈ ಬಗ್ಗೆ ಸೂರ್ಯ ಅವರೇ ಸ್ಪಷ್ಟನೆ ನೀಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಸೂರ್ಯಕುಮಾರ್ ಯಾದವ್
ಟೀಮ್ ಇಂಡಿಯಾ
ಐಸಿಸಿ ಟಿ20 ವಿಶ್ವಕಪ್

Latest Videos
Recommended Stories
Recommended image1
ಫೈನಲ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್! ಕೊನೆಗೂ ಕಠಿಣ ನಿರ್ಧಾರ ತೆಗೆದುಕೊಳ್ಳಲು ರೆಡಿಯಾದ್ರಾ ಗಂಭೀರ್?
Recommended image2
ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ!
Recommended image3
IND vs NZ World Cup Final 2026: ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ? ಫ್ಯಾನ್ಸ್ ಶಾಕ್!
Related Stories
Recommended image1
ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ!
Recommended image2
ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved