- Home
- Sports
- Cricket
- ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ಮದುವೆ ದಿನಾಂಕ ರಿವೀಲ್, ಜೈಲರ್ 2 ಸಿನಿಮಾಗೆ ಇದೆ ಲಿಂಕ್
ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ಮದುವೆ ದಿನಾಂಕ ರಿವೀಲ್, ಜೈಲರ್ 2 ಸಿನಿಮಾಗೆ ಇದೆ ಲಿಂಕ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಮದುವೆಯಾಗುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಮದುವೆಯಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ದಿನಾಂಕ ಬಹಿರಂಗವಾಗಿದೆ.

ಕಾವ್ಯಾ ಮಾರನ್ ಮದುವೆ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಮಾರನ್ ಉದ್ಯಮ ಸಾಮ್ರಾಜ್ಯದ ಹಲವು ಜವಾಬ್ದಾರಿ ನಿರ್ವಹಿಸುತ್ತಿರುವ ಕಾವ್ಯಾ ಮಾರನ್ ಪ್ರಮುಖವಾಗಿ ಐಪಿಎಲ್ ಪಂದ್ಯಗಳ ವೇಳೆ ಕಾಣಿಸಿಕೊಳ್ಳುತ್ತಾರೆ. ಸೈನ್‌ರೈಸರ್ಸ್ ಹೈದರಾಬದ್ ತಂಡದ ಮಾಲಕಿಯಾಗಿ, ತಂಡವನ್ನು ಹುರಿದುಂಬಿಸುತ್ತಾರೆ. ಇದೀಗ ಕಾವ್ಯಾ ಮಾರನ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮದುವೆಯಾಗುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಈ ಕುರಿತು ಅನಿರುದ್ ಅಂಕಲ್ ಮಾಹಿತಿ ಖಚಿತಪಡಿಸಿದ್ದರು. ಇದೀಗ ಇವರಬ್ಬರ ಮದುವೆ ದಿನಾಂಕವನ್ನು ಅನಿರುದ್ದ್ ಆಪ್ತ ಸಂಬಂಧಿ ಹಾಗೂ ನಟ ವೈ ಗಿ ಮಹೇಂದ್ರ ಬಹಿರಂಗಪಡಿಸಿದ್ದಾರೆ.
ಯಾವಾಗ ಮದುವೆ?
ಕಾವ್ಯ ಮಾರನ್ ಹಾಗೂ ಅನಿರುದ್ ಚಂದರ್ ಮದುವೆಯಾಗುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ವೈ.ಗಿ ಮಹೇಂದ್ರ ಖಚಿತಪಡಿಸಿದ್ದರು. ಇದೀಗ ಇವರಿಬ್ಬರ ಮದುವೆ ದಿನಾಂಕವನ್ನೂ ಮಹೇಂದ್ರ ಬಹಿರಂಗಪಡಿಸಿದ್ದಾರೆ. ರಜನಿಕಾಂತ್ ಅಭಿನಯದ ಜೈಲರ್2 ಸಿನಿಮಾ ಬಿಡುಗೆ ಬಳಿಕ ಕಾವ್ಯಾ ಮಾರನ್ ಹಾಗೂ ಅನಿರುದ್ಧ ಮದುವೆ ನಡೆಯಲಿದೆ ಎಂದಿದ್ದಾರೆ.
ಜೈಲರ್ ಸಿನಿಮಾ ರಿಲೀಸ್ ಯಾವಾಗ
ಜೈಲರ್ 2 ಸಿನಿಮಾದ ಸಂಗೀತ ನಿರ್ದೇಶಕ ಜವಾಬ್ದಾರಿ ಹೊತ್ತುಕೊಂಡಿರುವ ಅನಿರುದ್ದ್ ಸದ್ಯ ಬ್ಯೂಸಿಯಾಗಿದ್ದಾರೆ. ಪರಿಣಾಮ ಹೀಗಾಗಿ ಜೈಲರ್ 2 ಸಿನಿಮಾ ರಿಲೀಸ್ ಬಳಿಕ ಅನಿರುದ್ಧ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ವೈಗಿ ಮಹೇಂದ್ರ ಹೇಳಿದ್ದಾರೆ. ಜೈಲರ್ 2 ಸಿನಿಮಾ ಅಕ್ಟೋಬರ್ 15ಕ್ಕೆ ರಿಲೀಸ್ ಆಗಲಿದೆ.
ನವೆಂಬರ್ ಅಥವಾ ಡೆಸೆಂಬರ್ ಸೀಕ್ರೆಟ್
ಮೂಲಗಳ ಪ್ರಕಾರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ನಟ ಮಹೇಂದ್ರ ಹೇಳಿದ್ದಾರೆ. ಆದರೆ ಅನಿರುದ್ಧ್ ಅಥವಾ ಕಾವ್ಯ ಮಾರನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ ತಮ್ಮ ಮದುವೆ ರೂಮರ್ ಕುರಿತು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಆಪ್ತ ಸಂಬಂಧಿ ಹೇಳಿದ್ದೇನು
ಕಾವ್ಯ ಮಾರನ್ ಹಾಗೂ ಅನಿರುದ್ ಉತ್ತಮ ಜೋಡಿ ಎಂದು ನಟ ಮಹೇಂದ್ರ ಹೇಳಿದ್ದಾರೆ. ಕಾವ್ಯ ಮಾರನ್ ದೊಡ್ಡ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಆಕೆ ಸಾಮಾನ್ಯ ಹುಡುಗಿಯಲ್ಲಿ ಅನಿರುದ್ಧ್ ರವಿಚಂದರ್‌ಗೆ ಉತ್ತಮ ಜೋಡಿ ಎಂದು ಆಪ್ತ ಸಬಂಧಿ ಹಾಗೂ ನಟ ಮಹೇಂದ್ರ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

