MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 3 ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಟೀಂ ಇಂಡಿಯಾ ಕ್ರಿಕೆಟಿಗನೀತ!

3 ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಟೀಂ ಇಂಡಿಯಾ ಕ್ರಿಕೆಟಿಗನೀತ!

ಬೆಂಗಳೂರು: 10ನೇ ಸೀಸನ್ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಇಂದಿನಿಂದ ಸೂಪರ್-8 ಪಂದ್ಯಗಳು ಆರಂಭವಾಗುತ್ತಿವೆ. ಈ ಸಂದರ್ಭದಲ್ಲಿ 3 ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಭಾರತೀಯ ಕ್ರಿಕೆಟಿಗ ಯಾರು ಎನ್ನುವುದನ್ನು ನೋಡೋಣ ಬನ್ನಿ. 

2 Min read
Author : Naveen Kodase
Published : Feb 21 2026, 10:51 AM IST
Share this Photo Gallery
  • FB
  • TW
  • Linkdin
  • Whatsapp
16
ಐಸಿಸಿ ಟಿ20 ವಿಶ್ವಕಪ್ 2026
Image Credit : Getty

ಐಸಿಸಿ ಟಿ20 ವಿಶ್ವಕಪ್ 2026

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಂಡಿದ್ದವು. ಇದೀಗ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು 12 ತಂಡಗಳು ಟೂರ್ನಿಯಿಂದ ಹೊರಬಿದ್ದರೇ, ಎಂಟು ತಂಡಗಳು ಸೂಪರ್-8 ಹಂತಕ್ಕೆ ಪ್ರವೇಶ ಪಡೆದಿವೆ. ಇಂದಿನಿಂದ ಸೂಪರ್-8 ಹಂತದ ಪಂದ್ಯಗಳು ಆರಂಭವಾಗಲಿವೆ.

26
10ನೇ ಸೀಸನ್ ಟಿ20 ವಿಶ್ವಕಪ್
Image Credit : Getty

10ನೇ ಸೀಸನ್ ಟಿ20 ವಿಶ್ವಕಪ್

2007ರಿಂದ ಆರಂಭವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಒಂಬತ್ತು ಯಶಸ್ವಿ ಆವೃತ್ತಿಗಳು ಮುಗಿದಿವೆ. 2026ರ ಟಿ20 ವಿಶ್ವಕಪ್ ಟೂರ್ನಿಯು ಹತ್ತನೇ ಆವೃತ್ತಿಯ ಚುಟುಕು ವಿಶ್ವಕಪ್ ಆಗಿದೆ. ಈ ಪೈಕಿ ಕೆಲವೇ ಕೆಲವು ಕ್ರಿಕೆಟಿಗರು ಮೂರು ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ್ದಾರೆ. ಈ ಪೈಕಿ ಭಾರತದ ಓರ್ವ ಕ್ರಿಕೆಟಿಗನೂ ಮೂರು ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ್ದಾರೆ.

Related Articles

Related image1
ಇನ್ನು ಆರು ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಔಟ್! ಈ ಸರಣಿಯಲ್ಲಿ ರೋ-ಕೋ ಜೋಡಿ ಕಮ್‌ಬ್ಯಾಕ್
Related image2
26 ಕೋಟಿ ರೂ. ಮನೆ ಖರೀದಿಸಿದ ರೋಹಿತ್ ಶರ್ಮಾ ಪತ್ನಿ! ರಿತಿಕಾ ಸಂಪಾದನೆ ಎಷ್ಟು?
36
ಮೂರು ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಭಾರತೀಯ
Image Credit : Facebook/Indian Cricket Team

ಮೂರು ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಭಾರತೀಯ

ಹೌದು, ಮೂರು ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಭಾರತೀಯ ಎನ್ನುವ ಹೆಗ್ಗಳಿಕೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಅಂದಹಾಗೆ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ, ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದಾರೆ.

46
2007ರಲ್ಲಿ ಆಟಗಾರನಾಗಿ ಟಿ20 ವಿಶ್ವಕಪ್ ಗೆಲುವು
Image Credit : Instagram

2007ರಲ್ಲಿ ಆಟಗಾರನಾಗಿ ಟಿ20 ವಿಶ್ವಕಪ್ ಗೆಲುವು

ರೋಹಿತ್ ಶರ್ಮಾ ಆಟಗಾರನಾಗಿ ಹಾಗೂ ನಾಯಕನಾಗಿ ಟಿ20 ವಿಶ್ವಕಪ್ ಗೆದ್ದ ಏಕೈಕ ಭಾರತೀಯ ಕ್ರಿಕೆಟಿಗ ಕೂಡಾ ಹೌದು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಆಗ ರೋಹಿತ್ ಶರ್ಮಾ ಭಾರತ ತಂಡದಲ್ಲಿದ್ದರು.

56
2026ರಲ್ಲಿ ನಾಯಕನಾಗಿ ಟಿ20 ವಿಶ್ವಕಪ್ ಗೆಲುವು
Image Credit : Twitter

2026ರಲ್ಲಿ ನಾಯಕನಾಗಿ ಟಿ20 ವಿಶ್ವಕಪ್ ಗೆಲುವು

ಇದಾದ ಬಳಿಕ ಕಳೆದ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ದಕ್ಷಿಣ ಆಫ್ರಿಕಾ ಎದುರು ಭಾರತ ವಿರೋಚಿತ ಗೆಲುವು ಸಾಧಿಸುವ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

66
2014ರಲ್ಲೂ ಭಾರತ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು.
Image Credit : Gemini

2014ರಲ್ಲೂ ಭಾರತ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು.

ಇನ್ನು ಇವೆರಡರ ನಡುವೆ 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಧೋನಿ ನೇತೃತ್ವದ ಟೀಂ ಇಂಡಿಯಾ, ಫೈನಲ್ ಪ್ರವೇಶಿಸಿತ್ತು. ಆದರೆ ಶ್ರೀಲಂಕಾ ಎದುರು 6 ವಿಕೆಟ್ ಅಂತರದಲ್ಲಿ ಸೋತು ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಆಗ ರೋಹಿತ್ ಶರ್ಮಾ ಆರಂಭಿಕನಾಗಿ 26 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

  • ವಿರಾಟ್ ಕೊಹ್ಲಿ ಕೇವಲ ಎರಡು ಬಾರಿ(2014&2024) ಫೈನಲ್ ಆಡಿದ್ದರು. 2007ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ ಕೊಹ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿರಲಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ರೋಹಿತ್ ಶರ್ಮಾ
ಐಸಿಸಿ ಟಿ20 ವಿಶ್ವಕಪ್

Latest Videos
Recommended Stories
Recommended image1
ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಟ್ರೋಫಿ ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ! ಹಲವು ಸ್ಟಾರ್ ಆಟಗಾರರಿಗೆ ಸ್ಥಾನ
Recommended image2
ಟಿ20 ವಿಶ್ವಕಪ್: ಇಂದಿನಿಂದ ಸೂಪರ್‌-8, ಮೊದಲ ಪಂದ್ಯದಲ್ಲಿ ಪಾಕ್‌ vs ಕಿವೀಸ್‌ ಫೈಟ್
Recommended image3
ಬೆಂಗಳೂರಲ್ಲಿ ಹುಟ್ಟಿದ ಇಶಾನಿ ಜೋಹರ್‌ ಜೊತೆಗಿನ Divorce ಬೆನ್ನಲ್ಲಿಯೇ ಟ್ರೆಂಡ್‌ ಆದ ಟೀಮ್‌ ಇಂಡಿಯಾ ಕ್ರಿಕೆಟಿಗ ರಾಹುಲ್‌ ಜಾತಿ!
Related Stories
Recommended image1
ಇನ್ನು ಆರು ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಔಟ್! ಈ ಸರಣಿಯಲ್ಲಿ ರೋ-ಕೋ ಜೋಡಿ ಕಮ್‌ಬ್ಯಾಕ್
Recommended image2
26 ಕೋಟಿ ರೂ. ಮನೆ ಖರೀದಿಸಿದ ರೋಹಿತ್ ಶರ್ಮಾ ಪತ್ನಿ! ರಿತಿಕಾ ಸಂಪಾದನೆ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved