ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಜಿಂಟಾ, ದಿಗ್ಗಜರಿಗೆ ನೋಟಿಸ್
ಪಂಜಾಬ್ ಕಿಂಗ್ಸ್ ಒಡತಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಷ್ಟೇ ಅಲ್ಲ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಪ್ರೀತಿ ಜಿಂಟಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಯಾಕೆ?

ಹೈಕೋರ್ಟ್ ಮೊರೆ ಹೋದ ಪ್ರೀತಿ ಜಿಂಟಾ
ಬಾಲಿವುಡ್‌ನಲ್ಲಿ ಮಿಂಚಿದ ಪ್ರೀತಿ ಜಿಂಟಾ ಇದೀಗ ಬಾಲಿವುಡ್‌ನಿಂದ ದೂರ ಉಳಿದಿದ್ದಾರೆ. ಆದರೆ ಪ್ರತಿ ಐಪಿಎಲ್ ಟೂರ್ನಿಯಲ್ಲಿ ಪ್ರೀತಿ ಜಿಂಟಾ ತಮ್ಮ ಪಂಜಾಬ್ ಕಿಂಗ್ಸ್ ತಂಡವನ್ನು ಹುರಿದುಂಬಿಸುತ್ತಾ ಅಭಿಮಾನಿಗಳ ಮನಗೆದ್ದಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ ಇದೀಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯಲ್ಲಿ ತಪ್ಪತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ
ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಜಿಂಟಾ ಈ ಬಾರಿ ಬಾಂಬೈ ಕೋರ್ಟ್ ಮೆಟ್ಟಿಲೇರಲು ಮುಖ್ಯ ಕಾರಣ ಎಐ ಹಾಗೂ ಡೀಪ್ ಫೇಕ್ ವಿಡಿಯೋ. ತನ್ನ ಮಾರ್ಫಡ್ ವಿಡಿಯೋ, ಡೀಪ್ ಫೇಕ್, ಎಐ ಜನರೇಟೆಡ್ ವಿಡಿಯೋಗಳನ್ನು ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಲಾಗುತ್ತಿದೆ. ಇದರಿಂತ ತನ್ನ ಘನತೆಗೆ, ಗೌರವಕ್ಕೆ ಧಕ್ಕೆಯಾಗಿದೆ ಎಂದು ಪ್ರೀತಿ ಜಿಂಟಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೂರಿನಲ್ಲಿ ಏನಿದೆ?
ನಕಲಿ ಖಾತೆಗಳು ಸೇರಿದಂತೆ ಹಲವು ಖಾತೆಗಳಲ್ಲಿ ತನ್ನ ಎಐ ಜನರೇಟೆಡ್, ಡೀಪ್ ಫೇಕ್ ವಿಡಿಯೋಗಳು, ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ ಎಂದು ಪ್ರೀತಿ ಜಿಂಟಾ ದೂರಿದ್ದಾರೆ. ದೂರಿನಲ್ಲಿ ಗೂಗಲ್‌ನ ಹಲವು ಪ್ಲಾಟ್‌ಫಾರ್ಮ್, ಮೆಟಾ ಪ್ಲಾಟ್‌ಫಾರ್ಮ್ ಸೇರಿದಂತೆ ಇತರ ಕೆಲ ತಾಣಗಳ ವಿರುದ್ಧವೂ ದೂರಿದ್ದಾರೆ.
ದಿಗ್ಗಜರಿಗೆ ನೋಟಿಸ್
ಪ್ರೀತಿ ಜಿಂಟಾ ಮನವಿಯಿಂದ ಗೂಗಲ್, ಮೆಟಾ ಸೇರಿದಂತೆ ದಿಗ್ಗಜ ಕಂಪನಿಗಳಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್‌ಗೆ ಕಂಪನಿಗಳ ವಕೀಲರು ಹಾಜರಾಗಿದ್ದಾರೆ. ಈ ವೇಳೆ ಪ್ರೀತಿ ಜಿಂಟಾ ನೀಡಿರುವ ಲಿಂಕ್,ವಿಡಿಯೋ,ಫೋಟೋಗಳನ್ನು ತೆಗೆದು ಹಾಕಲಾವುದು ಎಂದಿದ್ದಾರೆ.
ನಕಲಿ ವಿಡಿಯೋಗಳನ್ನು ತೆಗೆದು ಹಾಕುವುದಿಲ್ಲವೇಕೆ?
ಡೀಪ್ ಫೇಕ್, ಎಐ ಜನರೇಟೆಡ್ ವಿಡಿಯೋಗಳು ತಾಣಗಳಲ್ಲಿದ್ದರೆ ಸ್ವಯಂಪ್ರೇರಿತವಾಗಿ ಯಾಕೆ ತೆಗೆದು ಹಾಕುವುದಿಲ್ಲ. ದೂರಿನ ಬಳಿಕ, ಘನತೆಗೆ ಧಕ್ಕೆಯಾದ ಬಳಿಕ ಮಾತ್ರ ಕ್ರಮ ಯಾಕೆ ಎಂದು ಕೋರ್ಟ್ ಪ್ರಶ್ನಿಸಿದೆ. ಈ ರೀತಿಯ ನಕಲಿ ಪೋಸ್ಟ್‌ಗಳನ್ನು ಪತ್ತೆ ಹಚ್ಚುವ ಮೆಕಾನಿಸಂ ಇಲ್ಲವೇ ಎಂದು ಕೋರ್ಟ್ ಪ್ರಶ್ನಿಸಿದೆ. ಇದೇ ವೇಳೆ ನಕಲಿ ಹೆಸರಿನಲ್ಲಿ ನೈಜ ಹಾಗೂ ಉತ್ತಮ ಕೆಂಟೆಂಟ್‌ಗಳು ಡಿಲೀಟ್ ಆಗಬಾರದು ಎಂದು ಕೋರ್ಟ್ ಸೂಚಿಸಿದೆ.
ಹಲವು ಸೆಲೆಬ್ರೆಟಿಗಳಿಗೆ ಸಂಕಷ್ಟ
ಪ್ರೀತಿ ಜಿಂಟಾ ರೀತಿ ಹಲವು ಸೆಲೆಬ್ರೆಟಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಮುಖವಾಗಿ ಕಾರ್ತಿಕ್ ಆರ್ಯನ್, ಶತ್ರಘ್ನ ಸಿನ್ಹ, ಶಿಲ್ಪಾ ಶೆಟ್ಟಿ, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಅರಿಜಿತ್ ಸಿಂಗ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕೋರ್ಟ್‌ನಿಂದ ರಕ್ಷಣೆ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

