ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಡೆಬ್ಯೂಗೆ ಎದುರಾದ ಅಡ್ಡಿ, ಐರ್ಲೆಂಡ್ ಸರಣಿ ಅನುಮಾನ
ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ತಂಡಕ್ಕೆ ಪಾದಾರ್ಪಣೆ ಅನುಮಾನವಾಗಿದೆ. ಅಷ್ಟಕ್ಕೂ ವೈಭವ್ ಸೂರ್ಯವಂಶಿಗೆ ಡೆಬ್ಯೂ ಮಾಡಲು ಅಡ್ಡಿಯಾಗಿದ್ದೇನು? ಐರ್ಲೆಂಡ್ ಸರಣಿಗೆ ಏನಾಯಿತು?

ವೈಭವ್ ಸೂರ್ಯವಂಶಿಗೆ ಅಡ್ಡಿ ಆತಂಕ
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗೆ 15ರ ಪೋರ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾನೆ. ಐಪಿಎಲ್ ಟೂರ್ನಿಯಲ್ಲಿ ದಾಖಲೆ ಪ್ರದರ್ಶನ ನೀಡಿದ ವೈಭವ್ ಅಷ್ಟೇ ವೇಗದಲ್ಲಿ ಟೀಂ ಇಂಡಿಯಾ ಹಿರಿಯರ ತಂಡಕ್ಕೂ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಆದರೆ ಟೀಂ ಇಂಡಿಯಾ ಡೆಬ್ಯೂ ಮಾಡಲು ಕೆಲ ಅಡ್ಡಿ ಆತಂಕ ಎದುರಾಗಿದೆ.
ಐರ್ಲೆಂಡ್ ಸರಣಿ ಅನುಮಾನ
ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯ ಆಡಲು ಎಲ್ಲಾ ತಯಾರಿ ಮಾಡಲಾಗಿದೆ. ಆದರೆ ಐರ್ಲೆಂಡ್‌ನಲ್ಲಿ ಗಲಭೆ ಆರಂಭಗೊಂಡಿದೆ. ಇದರ ಪರಿಣಾಮ ಇಂಟರ್ ಪ್ರೊವಿನ್ಶಿಯಲ್ ಟಿ20 ಫೆಸ್ಟಿವಲ್ ಟೂರ್ನಿ ರದ್ದು ಮಾಡಲಾಗಿದೆ. ಇತ್ತ ಭಾರತ ವಿರುದ್ದ ಸರಣಿ ಕುರಿತು ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ಐರ್ಲೆಂಡ್ ಕ್ರಿಕೆಟ್ ಹೇಳಿದೆ.
ಐರ್ಲೆಂಡ್ ಜೊತೆ ಬಿಸಿಸಿಐ ಸಂಪರ್ಕ
ಪರಿಸ್ಥಿತಿ ಕುರಿತು ಮಾಹಿತಿ ಪಡೆದಿರುವ ಬಿಸಿಸಿಐ, ಐರ್ಲೆಂಡ್ ಕ್ರಿಕೆಟ್ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದೆ. ಟೂರ್ನಿಗೆ ಕೆಲ ದಿನಗಳಿವೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ನಿರ್ಧಾರ ತೆಗೆದುಕೊಳ್ಳಲಿದೆ. ಸುರಕ್ಷತೆಗೆ ಮೊದಲ ಆದ್ಯತೆ ಎಂದು ಬಿಸಿಸಿಐ ಹೇಳಿದೆ.
ಇಂಗ್ಲೆಂಡ್ ವಿರುದ್ಧ ಡೆಬ್ಯೂ ಮಾಡ್ತಾರಾ?
ಐರ್ಲೆಂಡ್ ವಿರುದ್ದದ 2 ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವ ಕುರಿತು ಟೀಂ ಮ್ಯಾನೇಜ್ಮೆಂಟ್ ಚರ್ಚಿಸಿತ್ತು. ಇದೀಗ ಐರ್ಲೆಂಡ್ ಸರಣಿಯೇ ಅನುಮಾನವಾಗಿರುವ ಕಾರಣ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ ಡೆಬ್ಯೂ ಮಾಡುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ.
ಶ್ರೀಲಂಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ
ಸದ್ಯ ಭಾರತ ಎ ತಂಡದ ಜೊತೆ ಶ್ರೀಲಂಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ದಿಟ್ಟ ಹೋರಾಟ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರೂ ಇತರ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಹಿರಿಯರ ತಂಡದಲ್ಲಿ ವೈಭವ್ ಆಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

