IPLನಲ್ಲಿ CSKಗೆ ಥೀಮ್ ಸಾಂಗ್ ಮಾಡಿಕೊಡಲು ಗಾಯಕ ಅನಿರುದ್ಧ್ ನಿರಾಕರಿಸಿದ್ದೇಕೆ?
Anirudh Refused to Compose CSK Theme Music : ಐಪಿಎಲ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಥೀಮ್ ಮ್ಯೂಸಿಕ್ ಹಾಕಿಕೊಡಲು ಸಂಗೀತ ನಿರ್ದೇಶಕ ಅನಿರುದ್ಧ್ ಯಾಕೆ ನಿರಾಕರಿಸಿದರು ಎಂಬುದನ್ನು ನೋಡೋಣ.

ತಮಿಳು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ಸಂಗೀತ ನಿರ್ದೇಶಕ ಅನಿರುದ್ಧ್. ಮುಟ್ಟಿದ್ದೆಲ್ಲಾಚಿನ್ನ ಎಂಬಂತೆ ಅನಿರುದ್ಧ ಕೊಟ್ಟಿದೆಲ್ಲಾ ಹಿಟ್ ಅವರು ಕೊನೆಯದಾಗಿ ಅಜಿತ್ ಅವರ ವಿಡಾಮುಯರ್ಚಿ ಚಿತ್ರಕ್ಕೆ ಸಂಗೀತ ನೀಡಿದ್ದರು. ಇದರ ನಂತರ ಅನಿರುದ್ಧ್ ಸಂಗೀತದಲ್ಲಿ ಕೂಲಿ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಇದರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದು ಹಿನ್ನೆಲೆ ಕೆಲಸಗಳು ನಡೆಯುತ್ತಿವೆ.
ಅನಿರುದ್ಧ್
ಕೂಲಿ ಚಿತ್ರದ ನಂತರ ಅನಿರುದ್ಧ್ ಕೈಯಲ್ಲಿರುವ ಮತ್ತೊಂದು ದೊಡ್ಡ ಸಿನಿಮಾ ಜನ ನಾಯಕನ್. ಈ ಚಿತ್ರವನ್ನು ಎಚ್.ವಿನೋತ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಜನ ನಾಯಕನ್ ಚಿತ್ರದೊಂದಿಗೆ ನಟ ವಿಜಯ್ ಸಿನಿಮಾ ರಂಗದಿಂದ ದೂರ ಸರಿಯುವುದರಿಂದ, ಈ ಚಿತ್ರಕ್ಕಾಗಿ ಅನಿರುದ್ಧ್ ವಿಶೇಷವಾಗಿ ಹಲವು ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರಂತೆ.
ಅನಿರುದ್ಧ್ ಸಿಎಸ್‌ಕೆ ಫ್ಯಾನ್
ಇಷ್ಟು ಬ್ಯುಸಿ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್, ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಥೀಮ್ ಮ್ಯೂಸಿಕ್ ಹಾಕಿಕೊಡಲು ನಿರಾಕರಿಸಿದ್ದಾರೆ. ಇಷ್ಟಕ್ಕೂ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತೀ ದೊಡ್ಡ ಅಭಿಮಾನಿಯಂತೆ. ಫ್ಯಾನ್ ಆಗಿದ್ದೂ ಸಿಎಸ್‌ಕೆಗಾಗಿ ಅನಿರುದ್ಧ್ ಥೀಮ್ ಮ್ಯೂಸಿಕ್ ಹಾಕಲು ನಿರಾಕರಿಸಿದ ಹಿಂದಿನ ಒಂದು ಸಣ್ಣ ಕಥೆ ಇದೆ. ಅದರ ಬಗ್ಗೆ ನೋಡೋಣ.
ಸಿಎಸ್‌ಕೆ ಆಫರ್ ತಿರಸ್ಕರಿಸಿದ ಅನಿರುದ್ಧ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದು ಗೊತ್ತೆ ಇದೆ. ಆ ನಿಷೇಧದ ಅವಧಿ ಮುಗಿದು ಮತ್ತೆ 2018ರಲ್ಲಿ ಕಮ್‌ಬ್ಯಾಕ್ ಕೊಟ್ಟ ಸಿಎಸ್‌ಕೆ ಕಪ್ ಗೆದ್ದು ಅಬ್ಬರಿಸಿತು. ಆಗ ಸಿಎಸ್‌ಕೆ ಆಡಳಿತ ಮಂಡಳಿಯವರು ಅನಿರುದ್ಧ್ ಅವರನ್ನು ತಮ್ಮ ತಂಡಕ್ಕೆ ಒಂದು ಥೀಮ್ ಮ್ಯೂಸಿಕ್ ಕಂಪೋಸ್ ಮಾಡಿಕೊಡುವಂತೆ ಕೇಳಿದ್ದರಂತೆ. ಆದರೆ ಅನಿರುದ್ಧ್ ಆ ಅವಕಾಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದರಂತೆ. ಅದಕ್ಕೆ ಅವರು ಹೇಳಿದ ಕಾರಣವೇ ಹೈಲೈಟ್.
ಸಿಎಸ್‌ಕೆ ಥೀಮ್ ಮ್ಯೂಸಿಕ್‌ಗೆ ನೋ ಎಂದ ಅನಿರುದ್ಧ್
ಸಿಎಸ್‌ಕೆ ಅಂದರೆ ನಮಗೆ ನೆನಪಿಗೆ ಬರುವುದು ವಿಸಿಲ್ ಪೊಡ್ ಹಾಡು. ಆ ಹಾಡು ಕೇಳಿದರೆ ನನಗೂ ರೋಮಾಂಚನವಾಗುತ್ತದೆ. ಆ ಥೀಮ್ ಮ್ಯೂಸಿಕ್‌ಗೆ ನಾನು ದೊಡ್ಡ ಅಭಿಮಾನಿ. ಆ ಥೀಮ್ ಮ್ಯೂಸಿಕ್ ಸೃಷ್ಟಿಸಿದ ಮ್ಯಾಜಿಕ್ ಅನ್ನು ನಾನು ಸರಿಗಟ್ಟಲು ಸಾಧ್ಯವಿಲ್ಲ. ಹೇಗೆ ರಜಿನಿ ಸರ್‌ಗೆ ಅಣ್ಣಾಮಲೈ ಥೀಮ್ ಮ್ಯೂಸಿಕ್ಕೋ ಅದೇ ರೀತಿ ಸಿಎಸ್‌ಕೆಗೂ ವಿಸಿಲ್ ಪೊಡ್ ಇರಬೇಕು. ಅದು ಅಭಿಮಾನಿಗಳ ನಡುವೆಯೂ ಬೇರೆ ಲೆವೆಲ್‌ನಲ್ಲಿ ರೀಚ್ ಆಗಿದೆ. ಅದಕ್ಕೆ ನಾನು ಮತ್ತೆ ಒಂದು ಥೀಮ್ ಮ್ಯೂಸಿಕ್ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದ್ದಾರಂತೆ ಅನಿರುದ್ಧ್. ಸಿಎಸ್‌ಕೆಗಾಗಿ ವಿಸಿಲ್ ಪೊಡ್ ಹಾಡನ್ನು ಸೃಷ್ಟಿಸಿದ್ದು ಒಬ್ಬ ಸ್ವತಂತ್ರ ಸಂಗೀತಗಾರ ಎಂಬುದು ಗಮನಾರ್ಹ.