MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್ ಮಾತ್ರವಲ್ಲ ಇನ್ನು ಭಾರತದಲ್ಲೇ ಆಸ್ಟ್ರೇಲಿಯಾದ BBL, ಶೀಘ್ರದಲ್ಲೇ ಪ್ರಧಾನಿ ಮೋದಿ ಮಹತ್ವದ ಘೋಷಣೆ

ಐಪಿಎಲ್ ಮಾತ್ರವಲ್ಲ ಇನ್ನು ಭಾರತದಲ್ಲೇ ಆಸ್ಟ್ರೇಲಿಯಾದ BBL, ಶೀಘ್ರದಲ್ಲೇ ಪ್ರಧಾನಿ ಮೋದಿ ಮಹತ್ವದ ಘೋಷಣೆ

ಲೀಗ್ ಕ್ರಿಕೆಟ್ ಟೂರ್ನಿ ಕುರಿತು ಮಹತ್ವದ ಘೋಷಣೆ ಜುಲೈ 8 ರಂದು ಹೊರಬೀಳಲಿದೆ. ವಿಶೇಷ ಅಂದರೆ ಈ ಘೋಷಣೆ ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಕ್ರಿಕೆಟ್ ಲೀಗ್ ಟೂರ್ನಿ ಭಾರತದಲ್ಲಿ ನಡೆಯಲಿದೆ. 

2 Min read
Author : Chethan Kumar
Published : Jul 04 2026, 03:02 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದಲ್ಲಿ ಬಿಗ್ ಬ್ಯಾಶ್ ಲೀಗ್
Image Credit : stockPhoto

ಭಾರತದಲ್ಲಿ ಬಿಗ್ ಬ್ಯಾಶ್ ಲೀಗ್

ಭಾರತದ ಐಪಿಎಲ್ ಟೂರ್ನಿಯ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಟೂರ್ನಿಯಾಗಿ ಹೊರಹೊಮ್ಮಿದೆ. ಇನ್ನು ಆಯಾ ದೇಶಗಳು ತಮ್ಮ ತಮ್ಮ ಲೀಗ್ ಟೂರ್ನಿ ಆಯೋಜಿಸುತ್ತಿದೆ. ಈ ಪೈಕಿ ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಲೀಗ್ ಟೂರ್ನಿ ಪ್ರತಿ ವರ್ಷ ನಡೆಯುತ್ತಿದೆ. ವಿಶೇಷ ಅಂದರೆ ಮುಂದಿನ ಭಾರಿ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಕೆಲ ಪಂಗ್ಯ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮುಂದಿನ ವಾರ ಪ್ರಧಾನಿ ಮೋದಿ ಘೋಷಣೆ
Image Credit : ANI

ಮುಂದಿನ ವಾರ ಪ್ರಧಾನಿ ಮೋದಿ ಘೋಷಣೆ

ಜುಲೈ 8 ರಿಂದ 10 ವರೆಗೆ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಈ ವೇಳೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದೆ. ಇದೇ ವೇಳೆ ಉಭಯ ರಾಷ್ಟ್ರಗಳ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಶ್ ಲೀಗ್ ಟೂರ್ನಿ ಭಾರತದಲ್ಲಿ ಆಯೋಜಿಸುವ ಕುರಿತು ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಲಿದ್ದಾರೆ.

Related Articles

Related image1
ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
Related image2
ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!
36
ಚೆನ್ನೈನಲ್ಲಿ ಬಿಬಿಎಲ್ ಉದ್ಘಾಟನಾ ಪಂದ್ಯ
Image Credit : Getty

ಚೆನ್ನೈನಲ್ಲಿ ಬಿಬಿಎಲ್ ಉದ್ಘಾಟನಾ ಪಂದ್ಯ

ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಡಿಸೆಂಬರ್ 12ರಂದು ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಕುರಿತು ಈಗಾಗಲೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಒಪ್ಪಂದ ಮಾಡಿಕೊಳ್ಳಲಾಗಿದೆ. ತಮಿಳುನಾಡು ಕ್ರಿಕೆಟ್ ಸಂಸ್ಥೆ ಬಿಬಿಎಲ್ ಉದ್ಘಾಟನಾ ಪಂದ್ಯದ ಆತಿಥ್ಯ ವಹಿಸಿದೆ.

46
ಮೋದಿ ಪ್ರವಾಸದಲ್ಲಿ ಹಲವು ಘೋಷಣೆ
Image Credit : X

ಮೋದಿ ಪ್ರವಾಸದಲ್ಲಿ ಹಲವು ಘೋಷಣೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಲವಾದ ಕ್ರಿಕೆಟ್ ಕನೆಕ್ಷನ್ ಇದೆ. ಇದೇ ಕ್ರಿಕೆಟ್ ಮೂಲಕ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಭಾರತ ಹಾಗೂ ಆಸ್ಟೇಲಿಯಾದ ನಾಯಕರು ಮುಂದಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆಸ್ಟ್ರೇಲಿಯಾ ತಿಂಗಳಲ್ಲಿ ಫಿಲ್ ರಿಗ್‌ಬೈ, ಮಾರ್ಗೆಟ್ ಹಾರ್ಲೆ ಭಾರತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಟೂರ್ನಿ ನಡೆಯಲಿದೆ.

56
ಕೆಲ ಪಂದ್ಯಗಳು ಭಾರತದಲ್ಲಿ ಆಯೋಜನೆ
Image Credit : Twitter

ಕೆಲ ಪಂದ್ಯಗಳು ಭಾರತದಲ್ಲಿ ಆಯೋಜನೆ

ಭಾರತ ಹಾಗೂ ಆಸ್ಟ್ರೇಲಿಯಾದ ನಡುವಿನ ಒಪ್ಪಂದ ಪ್ರಕಾರ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಕೆಲ ಪಂದ್ಯಗಳು ಭಾರತದಲ್ಲಿ ನಡೆಯಲಿದೆ. ಸದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲ ಕೆಲ ಪಂದ್ಯಗಳು ಮಾತ್ರ ಆಯೋಜಿಸಲಾಗುತ್ತದೆ. ಉದ್ಘಾಟನಾ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ಹೋರಾಟ ನಡೆಸಲಿದೆ.

66
ಪ್ರಯಾಣದ ಸಮಸ್ಯೆ
Image Credit : our own

ಪ್ರಯಾಣದ ಸಮಸ್ಯೆ

ಸಿಡ್ನಿಯಿಂದ ನೇರವಾಗಿ ಚೆನ್ನೈಗೆ ವಿಮಾನ ಸೌಲಭ್ಯವಿಲ್ಲ. ಹೀಗಾಗಿ ನವದೆಹಲಿ, ಮುಂಬೈಗೆ ಆಗಮಿಸಿ ಬಳಿಕ ಚೆನ್ನೈಗೆ ಪ್ರಯಾಣ ಬೆಳೆಸಬೇಕು. ಪರಿಣಾಮ ಒಂದೆರೆಡು ಪಂದ್ಯಕ್ಕಾಗಿ ಆಟಗಾರರು ಸರಿಸುಮಾರು 13 ಗಂಟೆಗಳ ಪ್ರಯಾಣ ಮಾಡಬೇಕು. ಇದರಿಂದ ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಮೇಲೂ ಹೊಡೆತ ಬೀಳಲಿದೆ. ಈ ಸವಾಲು ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಪಿಎಲ್
ಆಸ್ಟ್ರೇಲಿಯಾ
ಭಾರತ
ಬಿಸಿಸಿಐ
ಕ್ರಿಕೆಟ್

Latest Videos
Recommended Stories
Recommended image1
Vaibhav Sooryavanshi: ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೆ ಸೂರ್ಯವಂಶಿ ಕ್ರೀಸ್‌ಗಿಳಿಯೋದು ಫಿಕ್ಸ್? ಎರಡೇ ಮಾತಲ್ಲಿ ರಹಸ್ಯ ಬಿಚ್ಚಿಟ್ಟ ವೈಭವ್!
Recommended image2
ಭಾರತ ಇಂಗ್ಲೆಂಡ್ 2ನೇ ಟಿ20, ತಂಡದಲ್ಲಿ ಸೂರ್ಯವಂಶಿಗೆ ಚಾನ್ಸ್ ಕುರಿತು ಮಹತ್ವದ ಅಪ್‌ಡೇಟ್ ಕೊಟ್ಟ ಕೋಚ್
Recommended image3
ಅಮೆರಿಕದಲ್ಲಿ ಶಾರುಖ್ ಖಾನ್​​ ಮಾಲೀಕತ್ವದ ಸ್ಟೇಡಿಯಂ: 200 ಕೋಟಿ ರೂ. ಕ್ರೀಡಾಂಗಣದಲ್ಲಿ ಏನೆಲ್ಲಾ ಇವೆ ನೋಡಿ
Related Stories
Recommended image1
ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
Recommended image2
ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved