MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿದಾಯವೂ ಇಲ್ಲ, ಪಂದ್ಯವೂ ಇಲ್ಲ, ಸೈಲೆಂಟ್ ಆಗಿ ಸಿಎಸ್‌ಕೆಯಿಂದ ದೂರ ಸರಿಯುತ್ತಿದ್ದಾರ ಧೋನಿ?

ವಿದಾಯವೂ ಇಲ್ಲ, ಪಂದ್ಯವೂ ಇಲ್ಲ, ಸೈಲೆಂಟ್ ಆಗಿ ಸಿಎಸ್‌ಕೆಯಿಂದ ದೂರ ಸರಿಯುತ್ತಿದ್ದಾರ ಧೋನಿ?

ಗೌರವಯುತ ಬೀಳ್ಕೊಡುಗೆ ಇಲ್ಲ, ವಿದಾಯದ ಪಂದ್ಯವಿಲ್ಲ, ಸೈಲೆಂಟ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಧೋನಿ ದೂರವಾಗುತ್ತಿದ್ದಾರೆ. ಧೋನಿಗೆ ಹಾಗೂ ಸಿಎಸ್‌ಕೆ ಮ್ಯಾನೇಜ್ಮೆಂಟ್ ಜೊತೆ ಸಂಬಂಧ ನೆಟ್ಟಗಿಲ್ಲ. ಕೆಲ ಆತಂಕಕಾರಿ ವರದಿ ಬಿಡುಗಡೆಯಾಗಿದೆ.

1 Min read
Author : Chethan Kumar
Published : May 20 2026, 08:06 PM IST
Share this Photo Gallery
  • FB
  • TW
  • Linkdin
  • Whatsapp
15
ಧೋನಿ ಐಪಿಎಲ್ ಕ್ರಿಕೆಟ್
Image Credit : Getty

ಧೋನಿ ಐಪಿಎಲ್ ಕ್ರಿಕೆಟ್

ಐಪಿಎಲ್ 2026ರ ಆವೃತ್ತಿಯಲ್ಲಿ ಧೋನಿ ಒಂದು ಪಂದ್ಯವೂ ಆಡಿಲ್ಲ. 13 ಪಂದ್ಯದಲ್ಲೂ ಅಭಿಮಾನಿಗಳು ಧೋನಿಗಾಗಿ ಕಾಯುತ್ತಾ ಕುಳಿತಿದ್ದರು. ಆದರೆ ಪ್ರತಿ ಬಾರಿ ತಂಡ ಇಂಜುರಿ ಕಾರಣ ನೀಡಿತ್ತು. 2026ರ ಐಪಿಎಲ್ ಟೂರ್ನಿ ಬಳಿಕ ಧೋನಿ ಸೈಲೆಂಟ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ದೂರ ಸರಿಯುತ್ತಿದ್ದಾರೆ. ಈ ಕುರಿತ ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ.

Add Asianetnews Kannada as a Preferred SourcegooglePreferred
25
ಧೋನಿಗೂ ಅಸಮಾಧಾನ
Image Credit : X

ಧೋನಿಗೂ ಅಸಮಾಧಾನ

ಕ್ರಿಕ್‌ಬ್ಲಾಗರ್ ಮಾಧ್ಯಮ ಈ ಕುರಿತು ಸ್ಫೋಟಕ ಸುದ್ದಿ ಬಹಿರಂಗ ಮಾಡಿದೆ. ಎಂಎಸ್ ಧೋನಿ ಹಾಗೂ ಸಿಎಸ್‌ಕೆ ಮ್ಯಾನೇಜ್ಮೆಂಟ್ ನಡುವೆ ಸಂಬಂಧ ಚೆನ್ನಾಗಿಲ್ಲ. ಕಳೆದೆರಡು ವರ್ಷದಿಂದ ಧೋನಿಯನ್ನು ಸಂಪೂರ್ಣವಾಗಿ ತಂಡ ಕಡೆಗಣಿಸಿದೆ. ಧೋನಿ ಅರಿವಿಲ್ಲದೆ ತಂಡದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಇದು ಧೋನಿ ಅಸಮಾಧಾನಕ್ಕೂ ಕಾರಣಾಗಿದೆ.

Related Articles

Related image1
CSK ಪರ ಆಡಿದ ಮೊದಲ ಸೀಸನ್‌ನಲ್ಲೇ 13 ವರ್ಷಗಳಿಂದ ಧೋನಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಸಂಜು ಸ್ಯಾಮ್ಸನ್!
Related image2
ಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?
35
ಒಂದೇ ಪಂದ್ಯ ಆಡದೇ, ವಿದಯವೂ ಇಲ್ಲದೆ ರಿಟೈರ್ಡ್
Image Credit : Getty

ಒಂದೇ ಪಂದ್ಯ ಆಡದೇ, ವಿದಯವೂ ಇಲ್ಲದೆ ರಿಟೈರ್ಡ್

2026ರಲ್ಲಿ ಧೋನಿ ಒಂದೇ ಒಂದು ಪಂದ್ಯ ಆಡಿಲ್ಲ. ಇನ್ನೊಂದು ಪಂದ್ಯ ಬಾಕಿ ಇದೆ. ಈ ಪಂದ್ಯದಲ್ಲೂ ಧೋನಿ ಆಡೋ ಸಾಧ್ಯತೆ ಇಲ್ಲ. 2026ರ ಟೂರ್ನಿ ಬಳಿಕ ಧೋನಿ ಸದ್ದಿಲ್ಲದೆ ಸಿಎಸ್‌ಕೆಯಿಂದ ದೂರ ಸರಿಯುತ್ತಿದ್ದಾರೆ ಎಂದು ವರದಿಯಾಗಿದೆ. ಸಿಎಸ್‌ಕೆಯಿಂದ ಮಾತ್ರವಲ್ಲ, ಐಪಿಎಲ್ ಟೂರ್ನಿಯಿಂದಲೂ ದೂರ ಸರಿಯುತ್ತಿದ್ದಾರೆ.

45
ಜಡೇಜಾ, ಸಂಜು ನಿರ್ಧಾರ ಧೋನಿಗೆ ಗೊತ್ತೇ ಇಲ್ಲ
Image Credit : Getty

ಜಡೇಜಾ, ಸಂಜು ನಿರ್ಧಾರ ಧೋನಿಗೆ ಗೊತ್ತೇ ಇಲ್ಲ

ರವೀಂದ್ರ ಜಡೇಜಾ ಔಟ್ ಹಾಗೂ ಸಂಜು ಸ್ಯಾಮ್ಸನ್ ಇನ್ ನಿರ್ಧಾರ ಧೋನಿಗೆ ಗೊತ್ತೇ ಇರಲಿಲ್ಲ. ಇದು ಧೋನಿ ಅಸಮಾಧಾನಕ್ಕೆ ಕಾರಣವಾಗಿತ್ತು. ತಂಡಕ್ಕೆ ಯುವ ಆಟಗಾರರ ಸೇರ್ಪಡೆ ನಿರ್ಧಾರಗಳಿಂದ ಧೋನಿಯನ್ನು ಹೊರಗಿಡಲಾಗಿತ್ತು ಅನ್ನೋ ಮಾಹಿತಿ ವರದಿಯಲ್ಲಿ ಪ್ರಕಟಿಸಲಾಗಿದೆ.

55
ಧೋನಿ ಕಡೆಗಣಿಸಿದ ಮ್ಯಾನೇಜ್ಮೆಂಟ್
Image Credit : ANI

ಧೋನಿ ಕಡೆಗಣಿಸಿದ ಮ್ಯಾನೇಜ್ಮೆಂಟ್

ಧೋನಿಯನ್ನು ಕಡೆಗಣಿಸಿ ಹೊಸ ತಂಡ ಕಟ್ಟಲು ಮುಂದಾಗಿದ್ದ ಸಿಎಸ್‌ಕೆ ಮ್ಯಾನೇಜ್ಮೆಂಟ್ ಭಾಗಶಃ ಯಶಸ್ವಿಯಾಗಿತ್ತು. ಆದರೆ ಇದು ಧೋನಿಗೆ ತೀವ್ರ ಬೇಸರ ತರಿಸಿತ್ತು. ಇಂಜುರಿಯಲ್ಲೂ ತಂಡಕ್ಕೆ ಆಡಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನನ್ನು ಅತ್ತ ರಿಲೀಸ್ ಮಾಡದೇ ಇತ್ತ ಲೆಕ್ಕಕ್ಕಿಲ್ಲ ಅನ್ನೋ ರೀತಿ ನಡೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಎಂ.ಎಸ್. ಧೋನಿ
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್
ಕ್ರಿಕೆಟ್

Latest Videos
Recommended Stories
Recommended image1
ಸಿಕ್ಸರ್‌ಗಳ 'ಹಾಫ್ ಸೆಂಚುರಿ' ಬಾರಿಸಿದ ವೈಭವ್ ಸೂರ್ಯವಂಶಿ; ಈ ಸಾಧನೆ ಮಾಡಿದ ಮೊದಲ ಭಾರತೀಯ! ಮುಂದಿನ ಟಾರ್ಗೆಟ್ ಗೇಲ್
Recommended image2
ಲಖನೌ ಎದುರು ರಾಜಸ್ಥಾನ ರಾಯಲ್ಸ್‌ ಗೆಲುವಿನಿಂದ ತಲೆಕೆಳಗಾದ ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ..!
Recommended image3
ಚೆನ್ನೈ ಸೂಪರ್ ಕಿಂಗ್ಸ್ ಆತನ ಮೇಲೆ ವಿಶ್ವಾಸವಿಟ್ಟಿದ್ದಾದ್ರೂ ಹೇಗೆ? ಯುವ ಆಟಗಾರನ ಮೇಲೆ ಕಿಡಿಕಾರಿದ ಕೃಷ್ಣಮಾಚಾರಿ ಶ್ರೀಕಾಂತ್
Related Stories
Recommended image1
CSK ಪರ ಆಡಿದ ಮೊದಲ ಸೀಸನ್‌ನಲ್ಲೇ 13 ವರ್ಷಗಳಿಂದ ಧೋನಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಸಂಜು ಸ್ಯಾಮ್ಸನ್!
Recommended image2
ಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved