- Home
- Sports
- Cricket
- ಟಿ20 ಪಂದ್ಯದಲ್ಲಿ ನಡೆಯಿತು ಅಸಲಿ ಫೈಟ್, ಔಟಾದ ಬೆನ್ನಲ್ಲೇ ಮೈದಾನದಲ್ಲೇ ಕಿತ್ತಾಡಿಕೊಂಡ ಕ್ರಿಕೆಟರ್ಸ್
ಟಿ20 ಪಂದ್ಯದಲ್ಲಿ ನಡೆಯಿತು ಅಸಲಿ ಫೈಟ್, ಔಟಾದ ಬೆನ್ನಲ್ಲೇ ಮೈದಾನದಲ್ಲೇ ಕಿತ್ತಾಡಿಕೊಂಡ ಕ್ರಿಕೆಟರ್ಸ್
ವಾಂಖೆಡೆಯಲ್ಲಿ ನಡೆದ ರೋಚಕ ಹೋರಾಟದಲ್ಲಿ ಅಸಲಿ ಫೈಟ್ ನಡೆದಿದೆ. ಇಬ್ಬರು ಕ್ರಿಕೆಟಿಗರು ಮೈದಾದನಲ್ಲೇ ಕಿತ್ತಾಡಿಕೊಂಡಿದ್ದಾರೆ. ಅಂಪೈರ್, ಆಟಗಾರರು ಸೇರಿದಂತೆ ಹಲವರು ಮಧ್ಯಪ್ರವೇಶಿಸಿದರೂ ಕೆಲ ಹೊತ್ತು ಕಿತ್ತಾಟ ಮುಂದುವರಿದಿತ್ತು.

ವಿಕೆಟ್ ಪತನದ ಬೆನ್ನಲ್ಲೇ ಮೈದಾನದಲ್ಲಿ ಕಿತ್ತಾಟ
ಐತಿಹಾಸಿಕ ವಾಂಖೆಡೆ ಮೈದಾನದಲ್ಲಿ ಮುಂಬೈ ಟಿ20 ಲೀಗ್ ಟೂರ್ನಿಯ ಫೈನಲ್ ಪಂದ್ಯ. ಮರಾಠ ರಾಯಲ್ಸ್ ಹಾಗೂ ಎಆರ್‌ಸಿಎಸ್ ಅಂಧೇರಿ ನಡುವಿನ ಹೋರಾಟ. ಪಂದ್ಯ ರೋಚಕ ಘಟ್ಟ ತಲುಪಿತ್ತು. ಯಾರಿಗೆ ಗೆಲುವು ಅನ್ನೋದೇ ಕುತೂಹಲ ಮೂಡಿಸಿತ್ತು. ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಅಂಧೇರಿ ತಂಡದ ಗೌರವ್ ಗೌರವ್ ಜಥಾರ್ ವಿಕೆಟ್ ಪತನ ಪಂದ್ಯದ ಗತಿ ಬದಲಿಸಿದ್ದು ಮಾತ್ರವಲ್ಲ, ಕಿತ್ತಾಟಕ್ಕೂ ಕಾರಣವಾಗಿದೆ.
ವೇಗಿ ಜೊತೆ ಕಿರಿಕ್, ಸಿಡಿದೆದ್ದ ಬ್ಯಾಟರ್
ಚೇಸಿಂಗ್ ಮಾಡುತ್ತಿದ್ದ ಅಂಧೇರಿ ತಂಡ ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಂಡು ಸೋಲಿನತ್ತ ವಾಲಿತ್ತು. 19ನೇ ಓವರ್‌ನಲ್ಲಿ ಈ ಕಿತ್ತಾಟ ನಡೆದಿದೆ. ಅಂಧೇರಿ ಬ್ಯಾಟರ್ ಗೌರವ್ ಜಾಥರ್ ಸಿಕ್ಸರ್ ಮೂಲಕ ತಂಡದ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದ್ದರು. 17 ಎಸೆತದಲ್ಲಿ 23 ರನ್ ಸಿಡಿಸಿದ ಜಾಥರ್ ಮರು ಎಸೆತದಲ್ಲಿ ಔಟಾದರು. ಪೆವಿಲಿಯನ್ ಕಡೆ ಮರಳುತ್ತಿದ್ದಾಗ, ಮರಾಠ ರಾಯಲ್ಸ್ ತಂಜದ ತುಷಾರ್ ದೇಶಪಾಂಡೆ ಜೊತೆ ಕಿರಿಕ್ ನಡೆದಿದೆ.
ಮೈದಾನದಿಂದ ಹೊರನಡೆಯುವಂತೆ ಸೂಚಿಸಿದ ತುಷಾರ್
ಜಾಥರ್ ಪೆವಿಲಿಯನ್‌ನತ್ತ ಬರುತ್ತಿದ್ದಂತೆ ತುಷಾರ್ ದೇಶಪಾಂಡೆ ಹೊರಗೆ ನಡಿ ಎಂದಿದ್ದಾರೆ. ಇದು ಜಾಥರ್ ಕೆರಳಿಸಿದೆ. ಅಲ್ಲೆ ತಿರುಗೇಟು ನೀಡಿದ್ದಾರೆ. ಮಾತಿಗೆ ಮಾತು ಬೆಳೆದು ತಳ್ಳಾಟ, ನೂಕಾಟ ಆರಂಭಗೊಂಡಿದೆ. ತಕ್ಷಣವೇ ಅಂಪೈರ್ ಹಾಗೂ ಆಟಗಾರರು ಮಧ್ಯಪ್ರವೇಶಿಸಿದ್ದಾರೆ. ಆದರೆ ಗಲಾಟೆ ಜೋರಾಗಿದೆ.
ನಿಯಮ ಉಲ್ಲಂಘಿಸಿದ ಇಬ್ಬರು ಕ್ರಿಕೆಟಿಗರು
ಗೌರವ್ ಜಾಥರ್ ಹಾಗೂ ತುಷಾರ್ ದೇಶಾಪಾಂಡೆ ಇಬ್ಬರನ್ನು ಆಟಗಾರರು ದೂರ ಸರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇಬ್ಬರು ತಣ್ಣಗಾಗುವ ಲಕ್ಷಣ ಇರಲಿಲ್ಲ. ಬೈಗುಳ, ಮುಂದುವರಿದಿದೆ. ಅಂಪೈರ್ ಮನವಿ ಮಾಡಿಕೊಂಡರೂ ಕೇಳಲೇ ಇಲ್ಲ. ಇಬ್ಬರೂ ಕೂಡ ಕ್ರಿಕೆಟ್ ನಿಯಮ ಉಲ್ಲಂಘಿಸಿದ್ದಾರೆ. ಈ ಜಗಳ ಅಭಿಮಾನಿಗಳಲ್ಲಿ ಆತಂಕ ತಂದಿತ್ತು.
ತುಷಾರ್ ಮೇಲಿತ್ತು ಸಿಟ್ಟು
ತುಷಾರ್ ದೇಶಾಪಾಂಡೆ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದರು. ಪ್ರಮುಖ 2 ವಿಕೆಟ್ ಕಬಳಿಸಿದ್ದರು. ಇದು ಅಂಧೇರಿ ತಂಡದ ಕುಸಿತಕ್ಕೂ ಕಾರಣವಾಗಿತ್ತು. ಇತ್ತ ತುಷಾರ್ ದೇಶಪಾಂಡೆ ಆಡಿದ ಮಾತುಗಳು ಜಾಥರ್ ಕೆರಳಿಸಿದೆ. ಹೀಗಾಗಿ ಮಾತಿನ ಚಕಮಕಿ ಕಿತ್ತಾಟವಾಗಿ ಮಾರ್ಪಟ್ಟಿದೆ.
ಚಾಂಪಿಯನ್ ಆದ ಮರಾಠ ರಾಯಲ್ಸ್
ರೋಚಕ ಹೋರಾಟದಲ್ಲಿ ಕೊನೆಯ ಓವರ್‌ನಲ್ಲಿ ಮರಾಠ ರಾಯಲ್ಸ್ ಗೆಲುವು ಸಾಧಿಸಿತು. 8 ರನ್ ಗೆಲುವು ದಾಖಳಿಸಿದ ಮರಾಠ ರಾಯಲ್ಸ್ ಸತತ 2ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ಮುಂಬೈ ಟಿ20 ಲೀಗ್ ಟೂರ್ನಿಯಲ್ಲಿ ಮರಾಠ ರಾಯಲ್ಸ್ ಬಲಿಷ್ಠ ತಂಡವಾಗಿ ಗುರಿತಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

