- Home
- Sports
- Cricket
- ಹಾರ್ದಿಕ್ ಪಾಂಡ್ಯಗೆ ಮುಂಬೈನಿಂದ ಗೇಟ್‌ಪಾಸ್ ಸಾಧ್ಯತೆ; ರಾಜಸ್ಥಾನದ ಓಪನರ್ ಮೇಲೆ ಬಿತ್ತು ಅಂಬಾನಿ ಕಣ್ಣು!
ಹಾರ್ದಿಕ್ ಪಾಂಡ್ಯಗೆ ಮುಂಬೈನಿಂದ ಗೇಟ್‌ಪಾಸ್ ಸಾಧ್ಯತೆ; ರಾಜಸ್ಥಾನದ ಓಪನರ್ ಮೇಲೆ ಬಿತ್ತು ಅಂಬಾನಿ ಕಣ್ಣು!
ಐಪಿಎಲ್ 2026ರ ಕಳಪೆ ಪ್ರದರ್ಶನದ ನಂತರ, ಮುಂಬೈ ಇಂಡಿಯನ್ಸ್ ತಂಡದಲ್ಲಿ ದೊಡ್ಡ ಬದಲಾವಣೆಗಳಿಗೆ ಮುಂದಾಗಿದೆ. ವರದಿಗಳ ಪ್ರಕಾರ, ನಾಯಕ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್‌ನ ಓಪನರ್ ಕರೆತರಲು ಫ್ರಾಂಚೈಸಿ ಚಿಂತನೆ ನಡೆಸಿದೆ. ಇಲ್ಲಿದೆ ಫುಲ್ ಡಿಟೇಲ್ಸ್.

ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತೀರಾ ನಿರಾಸೆ ಮೂಡಿಸಿತ್ತು. ಇದರ ಬೆನ್ನಲ್ಲೇ ತಂಡದಲ್ಲಿ ದೊಡ್ಡ ಸರ್ಜರಿ ನಡೆಸಲು ಫ್ರಾಂಚೈಸಿ ಮುಂದಾಗಿದೆ ಅನ್ನೋ ಸುದ್ದಿ ಬಂದಿದೆ. ವರದಿಗಳ ಪ್ರಕಾರ, ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧವನ್ನು ಮುಂಬೈ ಇಂಡಿಯನ್ಸ್ ಕಡಿದುಕೊಳ್ಳಲು ನಿರ್ಧರಿಸಿದೆ. ಅವರ ಜಾಗಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಓಪನರ್ ಅನ್ನು ಕರೆತರಲು ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ರೋಹಿತ್ ಶರ್ಮಾ ನಂತರ ತಂಡವನ್ನು ದೀರ್ಘಕಾಲ ಮುನ್ನಡೆಸಬಲ್ಲ ಆಟಗಾರನಾಗಿ ಮುಂಬೈ ಇಂಡಿಯನ್ಸ್ ಯಶಸ್ವಿ ಜೈಸ್ವಾಲ್‌ರನ್ನು ನೋಡುತ್ತಿದೆ. ಬರುವ ವಾರಗಳಲ್ಲಿ ತಂಡದ ಮ್ಯಾನೇಜ್ಮೆಂಟ್ ಒಂದು ಪ್ರಮುಖ ಸಭೆ ನಡೆಸಲಿದೆ. ಈ ಸಭೆಯಲ್ಲಿ ಹಿರಿಯ ಆಟಗಾರರು ಮತ್ತು ಕೋಚ್‌ಗಳ ಭವಿಷ್ಯದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಅಷ್ಟೇ ಅಲ್ಲ, ಸೂರ್ಯಕುಮಾರ್ ಯಾದವ್‌ರನ್ನು ಕೂಡ ತಂಡದಿಂದ ಕೈಬಿಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ರೋಹಿತ್ ಶರ್ಮಾ ನಂತರ ನಾಯಕತ್ವದ ರೇಸ್‌ನಲ್ಲಿ ತಿಲಕ್ ವರ್ಮಾ ಹೆಸರು ಮುಂಚೂಣಿಯಲ್ಲಿದೆ. ಭಾರತೀಯ ಟಿ20 ತಂಡದ ಉಪನಾಯಕನಾಗಿ ತಿಲಕ್ ವರ್ಮಾ ಬೆಳೆಯುತ್ತಿರುವುದು ಮುಂಬೈ ಮ್ಯಾನೇಜ್ಮೆಂಟ್‌ಗೆ ದೊಡ್ಡ ಭರವಸೆ ನೀಡಿದೆ.
ಇನ್ನೊಂದೆಡೆ, ಹಾರ್ದಿಕ್ ಪಾಂಡ್ಯಗೆ ಮತ್ತೆ ಗಾಯವಾಗಿರುವುದು ಅವರಿಗೂ ಮತ್ತು ತಂಡಕ್ಕೂ ದೊಡ್ಡ ಹಿನ್ನಡೆಯಾಗಿದೆ. ಕ್ವಾಡ್ರಿಸೆಪ್ಸ್ ಸ್ನಾಯು ಸೆಳೆತದ ಗಾಯದಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸದ ಏಕದಿನ ತಂಡದಲ್ಲೂ ಹಾರ್ದಿಕ್‌ಗೆ ಸ್ಥಾನ ಸಿಕ್ಕಿಲ್ಲ.
ಐಪಿಎಲ್ ವೇಳೆ ಬೆನ್ನುನೋವಿನಿಂದ ಬಳಲುತ್ತಿದ್ದ ಪಾಂಡ್ಯ, ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆ ವೇಳೆ ಅವರಿಗೆ ಈ ಹೊಸ ಗಾಯವಾಗಿದೆ. 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಪಾಂಡ್ಯರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಿಸಿಸಿಐ ಬಯಸುತ್ತಿದೆ. ಆದರೆ, ಪದೇ ಪದೇ ಆಗುತ್ತಿರುವ ಗಾಯಗಳು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತಿವೆ.
ಇದೀಗ ನಡೆಸಲಾಗಿರುವ ಚರ್ಚೆಯಂತೆ ಹಾರ್ದಿಕ್ ಪಾಂಡ್ಯ ಜಾಗಕ್ಕೆ ದೀರ್ಘಕಾಲ ಮುಂಬೈ ತಂಡವನ್ನು ನಡೆಸುವಂತಹ ಬೆಸ್ಟ್ ಬ್ಯಾಟ್ಸ್‌ಮನ್ ಹುಡುಗನನ್ನು ಹುಡುಕುತ್ತಿದ್ದು, ಅದಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ಓಪನರ್ ಯಶಸ್ವಿ ಜೈಸ್ವಾಲ್ ಅವರನ್ನು ಕರೆತರಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

