MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • T20 World Cup: ಟೀಂ ಇಂಡಿಯಾ ಸೂಪರ್ 8 ಹಂತದಲ್ಲೇ ಔಟ್! ಪಾಕ್ ಆಟಗಾರನಿಂದ ಶಾಕಿಂಗ್ ಭವಿಷ್ಯ!

T20 World Cup: ಟೀಂ ಇಂಡಿಯಾ ಸೂಪರ್ 8 ಹಂತದಲ್ಲೇ ಔಟ್! ಪಾಕ್ ಆಟಗಾರನಿಂದ ಶಾಕಿಂಗ್ ಭವಿಷ್ಯ!

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ ತಲುಪುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಗಂಭೀರ ಹೇಳಿಕೆ ನೀಡಿದ್ದಾರೆ. ಸೂಪರ್ 8 ಹಂತದಲ್ಲೇ ಭಾರತ ಟೂರ್ನಿಯಿಂದ ಹೊರಬೀಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

2 Min read
Author : Naveen Kodase
Published : Feb 22 2026, 04:37 PM IST
Share this Photo Gallery
  • FB
  • TW
  • Linkdin
  • Whatsapp
16
 ಪಾಕ್ ಬೌಲರ್ ಅಚ್ಚರಿ ಹೇಳಿಕೆ
Image Credit : BCCI\Twitter

ಪಾಕ್ ಬೌಲರ್ ಅಚ್ಚರಿ ಹೇಳಿಕೆ

ಪಾಕಿಸ್ತಾನದ ಆಟಗಾರ ಮೊಹಮ್ಮದ್ ಅಮೀರ್ ಪ್ರಕಾರ, 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆಯುವುದಿಲ್ಲವಂತೆ. ಫೆಬ್ರವರಿ 21 ರಿಂದ ಸೂಪರ್ 8 ಹಂತ ಶುರುವಾಗಿದೆ. ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಒಂದೇ ಗುಂಪಿನಲ್ಲಿವೆ. ಸೆಮಿಫೈನಲ್‌ಗೆ ಹೋಗಬೇಕಾದರೆ, ಈ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನಾದರೂ ಗೆಲ್ಲಲೇಬೇಕು.
26
ಸೆಮಿಫೈನಲ್ ರೇಸ್ ಆರಂಭ
Image Credit : X/BCCI

ಸೆಮಿಫೈನಲ್ ರೇಸ್ ಆರಂಭ

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ಗೆ ತಲುಪುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸೂಪರ್ 8 ಹಂತದಲ್ಲೇ ಭಾರತ ಟೂರ್ನಿಯಿಂದ ಹೊರಬೀಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಸೂಪರ್-8 ಹಂತದಲ್ಲಿ ಎಂಟು ತಂಡಗಳು ಎರಡು ಗುಂಪುಗಳಾಗಿ ವಿಂಗಡನೆಯಾಗಿ ಸೆಮಿಫೈನಲ್ ಸ್ಥಾನಕ್ಕಾಗಿ ಹೋರಾಡುತ್ತಿವೆ.

Related Articles

Related image1
3 ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಟೀಂ ಇಂಡಿಯಾ ಕ್ರಿಕೆಟಿಗನೀತ!
Related image2
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದಲ್ಲಿ ಬದಲಾವಣೆ ಬೇಕು; ಒಬ್ಬರಲ್ಲ, ಇಬ್ಬರನ್ನು ಕೈಬಿಡಿ! ಸಂಜಯ್ ಬಂಗಾರ್ ಸಲಹೆ
36
ಗ್ರೂಪ್ ಆಫ್ ಡೆತ್
Image Credit : Team India\BCCI

ಗ್ರೂಪ್ ಆಫ್ ಡೆತ್

ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಇರುವ ಗ್ರೂಪ್ 1 ಅನ್ನು 'ಗ್ರೂಪ್ ಆಫ್ ಡೆತ್' ಎಂದು ಪರಿಗಣಿಸಲಾಗಿದೆ. ಯಾಕೆಂದರೆ, ಗ್ರೂಪ್ ಹಂತದಲ್ಲಿ ಈ ನಾಲ್ಕೂ ತಂಡಗಳು ಒಂದೂ ಪಂದ್ಯ ಸೋತಿಲ್ಲ. ಫೆಬ್ರವರಿ 22ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ನಂತರ ಫೆಬ್ರವರಿ 26ರಂದು ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಮತ್ತು ಮಾರ್ಚ್ 1ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.

46
ಮೂರು ಪಂದ್ಯಗಳ ಪೈಕಿ ಎರಡು ಮ್ಯಾಚ್ ಗೆದ್ದರಷ್ಟೇ ಸಮೀಸ್ ಕನ್ಫರ್ಮ್
Image Credit : ANI

ಮೂರು ಪಂದ್ಯಗಳ ಪೈಕಿ ಎರಡು ಮ್ಯಾಚ್ ಗೆದ್ದರಷ್ಟೇ ಸಮೀಸ್ ಕನ್ಫರ್ಮ್

ಸೆಮಿಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು ಭಾರತ ಈ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡರಲ್ಲಿ ಗೆಲ್ಲಬೇಕು. ಭಾರತ ಹಾಲಿ ಚಾಂಪಿಯನ್ ಮತ್ತು ಆತಿಥೇಯ ರಾಷ್ಟ್ರವಾಗಿದ್ದರೂ, ಕಳಪೆ ಬ್ಯಾಟಿಂಗ್ ಲೈನ್‌ಅಪ್ ಮತ್ತು ಎದುರಾಳಿಗಳ ಬಲದಿಂದಾಗಿ ಹೀಗಾಗಬಹುದು ಎಂದು ಅಮೀರ್ ತಮ್ಮ ಭವಿಷ್ಯಕ್ಕೆ ಕಾರಣ ನೀಡಿದ್ದಾರೆ.

56
ಗ್ರೂಪ್-1ನಲ್ಲಿರುವ ಎಲ್ಲಾ ತಂಡಗಳು ಟೂರ್ನಿಯಲ್ಲಿ ಒಂದೂ ಮ್ಯಾಚ್ ಸೋತಿಲ್ಲ
Image Credit : Team India\BCCI

ಗ್ರೂಪ್-1ನಲ್ಲಿರುವ ಎಲ್ಲಾ ತಂಡಗಳು ಟೂರ್ನಿಯಲ್ಲಿ ಒಂದೂ ಮ್ಯಾಚ್ ಸೋತಿಲ್ಲ

ಸೂಪರ್ 8ರ ಗ್ರೂಪ್ 1ರಲ್ಲಿರುವ ನಾಲ್ಕೂ ತಂಡಗಳು ಹಿಂದಿನ ಸುತ್ತಿನಲ್ಲಿ ಅಜೇಯವಾಗಿವೆ. ಅಂದರೆ, ಈ ತಂಡಗಳು ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಬಂದಿವೆ. ಜಿಂಬಾಬ್ವೆ ಮೂರು ಪಂದ್ಯಗಳನ್ನು ಗೆದ್ದಿದ್ದು, ಐರ್ಲೆಂಡ್ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಆ ತಂಡವೂ ಅಜೇಯವಾಗಿಯೇ ಉಳಿದಿದೆ. ಇದು ಗ್ರೂಪ್ 1 ಅನ್ನು ಅತ್ಯಂತ ಕಠಿಣವಾಗಿಸಿದೆ.
66
ಜಿಂಬಾಬ್ವೆ ತಂಡವನ್ನೂ ಸುಲಭವಾಗಿ ಪರಿಗಣಿಸುವಂತಿಲ್ಲ
Image Credit : X/BCCI

ಜಿಂಬಾಬ್ವೆ ತಂಡವನ್ನೂ ಸುಲಭವಾಗಿ ಪರಿಗಣಿಸುವಂತಿಲ್ಲ

ಫೆಬ್ರವರಿ 26ರಂದು ಚೆನ್ನೈನಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಅಲ್ಲಿ ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡ ಅಪಾಯಕಾರಿಯಾಗಿ ಪರಿಣಮಿಸಬಹುದು. ಕೊನೆಯ ಸೂಪರ್ 8 ಪಂದ್ಯವು ಮಾರ್ಚ್ 1ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಟೀಂ ಇಂಡಿಯಾ ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ ಈ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನಾದರೂ ಗೆಲ್ಲಲೇಬೇಕು. ಇದು ಸುಲಭವಲ್ಲ ಎಂಬುದು ಅಮೀರ್ ಅವರ ಅಂದಾಜು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಟೀಮ್ ಇಂಡಿಯಾ

Latest Videos
Recommended Stories
Recommended image1
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದಲ್ಲಿ ಬದಲಾವಣೆ ಬೇಕು; ಒಬ್ಬರಲ್ಲ, ಇಬ್ಬರನ್ನು ಕೈಬಿಡಿ! ಸಂಜಯ್ ಬಂಗಾರ್ ಸಲಹೆ
Recommended image2
ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ
Recommended image3
ಪಾಕ್-ಕಿವೀಸ್ ಮ್ಯಾಚ್ ಮಳೆಯಿಂದ ರದ್ದು; ಭಾರತ-ದಕ್ಷಿಣ ಆಫ್ರಿಕಾ ಮ್ಯಾಚ್‌ಗೆ ವರುಣ ಅಡ್ಡಿ? ಇಲ್ಲಿದೆ ವರದಿ
Related Stories
Recommended image1
3 ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದ ಏಕೈಕ ಟೀಂ ಇಂಡಿಯಾ ಕ್ರಿಕೆಟಿಗನೀತ!
Recommended image2
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದಲ್ಲಿ ಬದಲಾವಣೆ ಬೇಕು; ಒಬ್ಬರಲ್ಲ, ಇಬ್ಬರನ್ನು ಕೈಬಿಡಿ! ಸಂಜಯ್ ಬಂಗಾರ್ ಸಲಹೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved