MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Sports
  • Cricket
  • ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ

ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ

ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಸೆಣಸಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ. ತಿಲಕ್ ಮತ್ತು ಅಭಿಷೇಕ್ ಫಾರ್ಮ್‌ನಲ್ಲಿ ಇಲ್ಲ. ಯಾರನ್ನು ಕೈಬಿಡುತ್ತಾರೆ ಎನ್ನುವ ಕುತೂಹಲವಿದೆ.  ಈ ನಡುವೆ ಇರ್ಫಾನ್ ಪಠಾಣ್ ತಮ್ಮ ಆಯ್ಕೆಯ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.

2 Min read
Author : Naveen Kodase
Published : Feb 25 2026, 10:02 AM IST
Share this Photo Gallery
  • FB
  • TW
  • Linkdin
  • Whatsapp
16
ಸೂರ್ಯ ಮೂರನೇ ಕ್ರಮಾಂಕದಲ್ಲಿ ಆಡಬೇಕು
Image Credit : ANI

ಸೂರ್ಯ ಮೂರನೇ ಕ್ರಮಾಂಕದಲ್ಲಿ ಆಡಬೇಕು

ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.

ಸೂರ್ಯನ ದಾಖಲೆ

ಭಾರತದ ಪರ ಟಿ20ಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿರುವ ಸೂರ್ಯ, 32 ಪಂದ್ಯಗಳಿಂದ 32ರ ಸರಾಸರಿ ಹಾಗೂ 158.53ರ ಸ್ಟ್ರೈಕ್ ರೇಟ್‌ನಲ್ಲಿ 864 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಆರು ಅರ್ಧಶತಕಗಳು ಸೇರಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತಿಲಕ್ ನಾಲ್ಕನೇ ಕ್ರಮಾಂಕ
Image Credit : Getty

ತಿಲಕ್ ನಾಲ್ಕನೇ ಕ್ರಮಾಂಕ

ಭಾರತದ ಅಗ್ರ ಮೂವರು ಬ್ಯಾಟರ್‌ಗಳು ಎಡಗೈ ಆಟಗಾರರಾಗಿರುವುದರಿಂದ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಬದಲಾವಣೆ ಅಗತ್ಯವಿದೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಮತ್ತು ಅವರ ನಂತರ ತಿಲಕ್ ವರ್ಮಾ ಕಣಕ್ಕಿಳಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಸೂರ್ಯ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ. ಸತತವಾಗಿ ಮೂವರು ಎಡಗೈ ಆಟಗಾರರು ಬರುವುದನ್ನು ತಪ್ಪಿಸಬಹುದು ಎಂದು ಪಠಾಣ್ ಹೇಳಿದ್ದಾರೆ. ಸದ್ಯ ಈಗ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಎಡಗೈ ಆರಂಭಿಕರಾಗಿದ್ದು, ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ.

Related Articles

Related image1
ಜಿಂಬಾಬ್ವೆ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಮನೆಯತ್ತ ಓಡಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ! ಅಷ್ಟಕ್ಕೂ ಆಗಿದ್ದೇನು?
Related image2
ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋತಿದ್ದು ಹೇಗೆ? ಇಲ್ಲಿವೆ ಆರು ಇಂಟ್ರೆಸ್ಟಿಂಗ್ ಕಾರಣಗಳು!
36
ಅಕ್ಷರ್ ಪಟೇಲ್ ಕೆಳಕ್ರಮಾಂಕದ ನಂಬಿಗಸ್ಥ ಬ್ಯಾಟರ್
Image Credit : AFP

ಅಕ್ಷರ್ ಪಟೇಲ್ ಕೆಳಕ್ರಮಾಂಕದ ನಂಬಿಗಸ್ಥ ಬ್ಯಾಟರ್

ಬ್ಯಾಟಿಂಗ್‌ನಲ್ಲಿ ಕೆಳ ಕ್ರಮಾಂಕಕ್ಕೆ ಬಲ ತುಂಬುವ ಸಾಮರ್ಥ್ಯವೂ ಅಕ್ಷರ್‌ಗೆ ಇದೆ ಎಂದು ಪಠಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೂಪರ್ 8ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಷರ್ ಆಡಿರಲಿಲ್ಲ. ಅಕ್ಷರ್ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಮಣೆ ಹಾಕಲಾಗಿತ್ತು.

ತಂಡದಲ್ಲಿ ಅಕ್ಷರ್ ಪಟೇಲ್ ಇರಬೇಕು ಎಂದು ಪಠಾಣ್ ಒತ್ತಿ ಹೇಳಿದ್ದಾರೆ. ಎಡಗೈ ಬ್ಯಾಟರ್‌ಗಳ ವಿರುದ್ಧ ಉತ್ತಮವಾಗಿ ಬೌಲ್ ಮಾಡುವ ಸಾಮರ್ಥ್ಯವಿರುವ ಅನುಭವಿ ಆಟಗಾರ ಅಕ್ಷರ್ ಪಟೇಲ್ ಎಂದು ಪಠಾಣ್ ಹೇಳಿದ್ದಾರೆ.

46
ಕುಲ್ದೀಪ್ ಯಾದವ್
Image Credit : AFP

ಕುಲ್ದೀಪ್ ಯಾದವ್

ಕುಲ್ದೀಪ್ ಅವರನ್ನು ವಾಪಸ್ ಕರೆತರಬೇಕು ಎಂದೂ ಪಠಾಣ್ ಕಿವಿಮಾತು ಹೇಳಿದ್ದಾರೆ. 'ವೆಸ್ಟ್ ಇಂಡೀಸ್ ವಿರುದ್ಧದ ದೊಡ್ಡ ಪಂದ್ಯಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧ ಕುಲ್ದೀಪ್‌ಗೆ ಅವಕಾಶ ನೀಡುವುದು ಉತ್ತಮ' ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

56
ಸಂಜು ಸ್ಯಾಮ್ಸನ್
Image Credit : Getty

ಸಂಜು ಸ್ಯಾಮ್ಸನ್

'ತಂಡದ ಮ್ಯಾನೇಜ್‌ಮೆಂಟ್ ಸಂಜು ಅವರನ್ನು ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸುತ್ತಿರಬಹುದು. ಆದರೆ ತಂಡದಲ್ಲಿ ಹೆಚ್ಚು ಪ್ರಯೋಗಗಳು ಬೇಡ. ಪ್ಲೇಯಿಂಗ್ XIನಲ್ಲಿ ಅಕ್ಷರ್ ಪಟೇಲ್ ಅವರನ್ನು ಸೇರಿಸಿಕೊಳ್ಳುವ ಒಂದು ಬದಲಾವಣೆ ಸದ್ಯಕ್ಕೆ ಸಾಕು' ಎಂದು ಪಠಾಣ್ ಸ್ಪಷ್ಟಪಡಿಸಿದ್ದಾರೆ.
66
ಸಾಕಷ್ಟು ಒತ್ತಡದಲ್ಲಿದೆ ಟೀಂ ಇಂಡಿಯಾ
Image Credit : Getty

ಸಾಕಷ್ಟು ಒತ್ತಡದಲ್ಲಿದೆ ಟೀಂ ಇಂಡಿಯಾ

ಸೂಪರ್ 8ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದರಿಂದ ಭಾರತ ಈಗ ತೀವ್ರ ಒತ್ತಡದಲ್ಲಿದೆ. ಸೋಮವಾರ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆಯನ್ನು ಸೋಲಿಸಿದ್ದರಿಂದ ಭಾರತದ ಸೆಮಿಫೈನಲ್ ಆಸೆ ಮತ್ತಷ್ಟು ಕಠಿಣವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಐಸಿಸಿ ಟಿ20 ವಿಶ್ವಕಪ್

Latest Videos
Recommended Stories
Recommended image1
ಏಷ್ಯನ್ ಗೇಮ್ಸ್ ಹೋಟೆಲ್ ವಿವಾದ: ಕೊನೆಗೂ ಮೌನ ಮುರಿದ ಬಿಸಿಸಿಐ
Recommended image2
BCCI ಖಜಾನೆಗೆ ಕುಬೇರನ ಕೃಪೆ: ChatGPT ಜೊತೆ ಬಿಗ್ ಡೀಲ್, ಒಂದೊಂದು ಪಂದ್ಯಕ್ಕೂ ಕೋಟಿ ಕೋಟಿ ಹಣ
Recommended image3
ದುಲೀಪ್‌ ಟ್ರೋಫಿ ಫೈನಲ್‌ನಿಂದ ಹೊರಬಿದ್ದ ಬೆನ್ನಲ್ಲೇ ಕರುಣ್‌ ನಾಯರ್‌ ಶತಕ; ತಿಲಕ್‌ ವರ್ಮಾಗೆ ಸೋಷಿಯಲ್‌ ಮೀಡಿಯಾದಲ್ಲಿ ಟಾಂಗ್‌
Related Stories
Recommended image1
ಜಿಂಬಾಬ್ವೆ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಮನೆಯತ್ತ ಓಡಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ! ಅಷ್ಟಕ್ಕೂ ಆಗಿದ್ದೇನು?
Recommended image2
ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋತಿದ್ದು ಹೇಗೆ? ಇಲ್ಲಿವೆ ಆರು ಇಂಟ್ರೆಸ್ಟಿಂಗ್ ಕಾರಣಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved