MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಬ್ರೇಕಿಂಗ್: IPL ಮುಂದಕ್ಕೆ ಹಾಕಿ ಎಂದು ಸಲಹೆ ಕೊಟ್ಟ BCCI; ಇದಕ್ಕೆ ಬಲವಾದ ಕಾರಣ ಕೂಡ ಇದೆ!

ಬ್ರೇಕಿಂಗ್: IPL ಮುಂದಕ್ಕೆ ಹಾಕಿ ಎಂದು ಸಲಹೆ ಕೊಟ್ಟ BCCI; ಇದಕ್ಕೆ ಬಲವಾದ ಕಾರಣ ಕೂಡ ಇದೆ!

‌IPL 2026: ಭಾರೀ ಬೇಸಿಗೆಯ ಬಿಸಿ ಮತ್ತು ಆಟಗಾರರ ಆರೋಗ್ಯದ ದೃಷ್ಟಿಯಿಂದ, ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಿಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಗಂಭೀರವಾಗಿ ಚಿಂತನೆ ನಡೆಸಿದೆ. ಈ ಅವಧಿಯು ಜಾಹೀರಾತುದಾರರಿಗೆ 'ಗೋಲ್ಡನ್ ವಿಂಡೋ' ಆಗಲಿದೆ ಎನ್ನಲಾಗಿದೆ. 

2 Min read
Author : Padmashree Bhat
Published : May 27 2026, 05:33 PM IST
Share this Photo Gallery
  • FB
  • TW
  • Linkdin
  • Whatsapp
14
ಐಪಿಎಲ್‌ ಟೂರ್ನಿ ಮುಂದಕ್ಕೆ ಹೋಗುತ್ತೆ!
Image Credit : ANI

ಐಪಿಎಲ್‌ ಟೂರ್ನಿ ಮುಂದಕ್ಕೆ ಹೋಗುತ್ತೆ!

ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್‌ನಿಂದ ಮೇ ತಿಂಗಳವರೆಗೆ ಐಪಿಎಲ್ (IPL) ಟಿ20 ಕ್ರಿಕೆಟ್ ಟೂರ್ನಿ ನಡೆಯುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೇ ತಿಂಗಳಲ್ಲಿ ಹೆಚ್ಚುತ್ತಿರುವ ತೀವ್ರ ಬಿಸಿಲು ಮತ್ತು ಶಾಖದ ಅಲೆಗಳಿಂದಾಗಿ, ಪಂದ್ಯಗಳನ್ನು ಸೆಪ್ಟೆಂಬರ್-ಅಕ್ಟೋಬರ್‌ಗೆ ಹಾಕುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯೋಚಿಸುತ್ತಿದೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred
24
ಮೇನಲ್ಲಿ ಕ್ರಿಕೆಟ್‌ ಕಷ್ಟ!
Image Credit : X

ಮೇನಲ್ಲಿ ಕ್ರಿಕೆಟ್‌ ಕಷ್ಟ!

ಹವಾಮಾನ ಬದಲಾವಣೆಯಿಂದಾಗಿ, ಮೇ ತಿಂಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದು ದೊಡ್ಡ ಸವಾಲಾಗಿದೆ. ವಿಪರೀತ ಬಿಸಿಲು ಮತ್ತು ಹೆಚ್ಚಿನ ತೇವಾಂಶದಿಂದ (Humidity) ಆಟಗಾರರು ಬೇಗನೆ ಸುಸ್ತಾಗುತ್ತಾರೆ. ಜೊತೆಗೆ ಸ್ನಾಯು ಸೆಳೆತ (Cramps) ಮತ್ತು ಗಾಯಗಳಿಂದ ಬಳಲುತ್ತಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ನಿರಂತರವಾಗಿ ಆಡಿ ಬರುವ ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಸಿಗುವುದಿಲ್ಲ. ಹೀಗಾಗಿ, ಆಟಗಾರರ ಹಿತದೃಷ್ಟಿಯಿಂದ ಮತ್ತು ಗಾಯಗಳನ್ನು ತಪ್ಪಿಸಲು ಬಿಸಿಸಿಐ ಈ ಹೊಸ ವೇಳಾಪಟ್ಟಿಯ ಬಗ್ಗೆ ಪರಿಶೀಲಿಸುತ್ತಿದೆ.

Related Articles

Related image1
Rajat Patidar IPL record: ರಜತ್ ಪಾಟಿದಾರ್ ಅಬ್ಬರ; 19 ವರ್ಷದ IPL ಇತಿಹಾಸದಲ್ಲಿ ದಾಖಲೆ ಬರೆದು ಮಿಂಚಿದ RCB ನಾಯಕ
Related image2
IPL ಕ್ವಾಲಿಫೈಯರ್-1 ಪಂದ್ಯಕ್ಕೂ ಗುಜರಾತ್ ಟೈಟಾನ್ಸ್‌ ತಂಡಕ್ಕೆ ಖಡಕ್ ವಾರ್ನಿಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್
34
ಸೆಪ್ಟೆಂಬರ್-ಅಕ್ಟೋಬರ್ ತಿಂಗಳು ಬೆಸ್ಟ್!‌
Image Credit : IPL MEDIA

ಸೆಪ್ಟೆಂಬರ್-ಅಕ್ಟೋಬರ್ ತಿಂಗಳು ಬೆಸ್ಟ್!‌

ಜಾಹೀರಾತುದಾರರು ಮತ್ತು ಪ್ರಸಾರಕರ ದೃಷ್ಟಿಕೋನದಿಂದ ನೋಡಿದರೆ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು ಬಹಳ ಅನುಕೂಲಕರ ಸಮಯ. ಏಕೆಂದರೆ, ಭಾರತದಲ್ಲಿ ಈ ಸಮಯದಲ್ಲಿ ದೀಪಾವಳಿ ಸೇರಿದಂತೆ ಹಬ್ಬಗಳ ಸೀಸನ್ ಶುರುವಾಗುತ್ತದೆ. ಹೀಗಾಗಿ, ಕಂಪನಿಗಳು ತಮ್ಮ ಜಾಹೀರಾತುಗಳಿಗಾಗಿ ಹೆಚ್ಚು ಹೂಡಿಕೆ ಮಾಡಲು ಸಿದ್ಧವಾಗಿರುತ್ತವೆ. 

'ಪಂದ್ಯಗಳನ್ನು ಬೇರೆ ತಿಂಗಳಿಗೆ ಬದಲಾಯಿಸುವ ಬಗ್ಗೆ ಪ್ರಸಾರಕರೊಂದಿಗೆ ವಿವರವಾಗಿ ಚರ್ಚಿಸಬೇಕು. ಸೆಪ್ಟೆಂಬರ್-ಅಕ್ಟೋಬರ್ ವಿಂಡೋ ಜಾಹೀರಾತುದಾರರಿಗೆ ಅತ್ಯುತ್ತಮ ಸಮಯ. ಮುಂದಿನ ದ್ವಿಪಕ್ಷೀಯ ಹಕ್ಕುಗಳ ಟೆಂಡರ್ (Bilateral Tender) ಬಂದಾಗ, ನಾವು ಈ ಸಾಧ್ಯತೆಗಳನ್ನು ಪರಿಶೀಲಿಸುತ್ತೇವೆ' ಎಂದು ಅರುಣ್ ಧುಮಾಲ್ ಹೇಳಿದ್ದಾರೆ.

44
ಎರಡು ಭಾಗಗಳಾಗಿ ವಿಂಗಡಣೆ
Image Credit : stockPhoto

ಎರಡು ಭಾಗಗಳಾಗಿ ವಿಂಗಡಣೆ

ಐಪಿಎಲ್ ಆಡಳಿತ ಮಂಡಳಿಯು 2028ರಿಂದ ಪಂದ್ಯಗಳ ಸಂಖ್ಯೆಯನ್ನು ಈಗಿರುವ 74ರಿಂದ 94ಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ. ಈಗಿನ ಎರಡು ತಿಂಗಳ ಅವಧಿಯಲ್ಲಿ ಇಷ್ಟು ಪಂದ್ಯಗಳನ್ನು ನಡೆಸುವುದು ಅಸಾಧ್ಯ. ಹೀಗಾಗಿ, ಟೂರ್ನಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಂದು ಭಾಗವನ್ನು ಫೆಬ್ರವರಿ-ಏಪ್ರಿಲ್‌ನಲ್ಲಿ ಮತ್ತು ಇನ್ನೊಂದು ಭಾಗವನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸುವ ಆಲೋಚನೆಯೂ ಇದೆ. 

ಅಂತಿಮ ನಿರ್ಧಾರವು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ವೇಳಾಪಟ್ಟಿ ಮತ್ತು ಇತರ ದೇಶಗಳ ಕ್ರಿಕೆಟ್ ಮಂಡಳಿಗಳ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಯಾವುದೇ ಆತುರವಿಲ್ಲ, ಎಲ್ಲರೊಂದಿಗೆ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಐಪಿಎಲ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕ್ರಿಕೆಟ್
ಕ್ರಿಕೆಟ್ ಕ್ರೀಡಾಂಗಣ
ಐಪಿಎಲ್
ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು

Latest Videos
Recommended Stories
Recommended image1
'ಎಣ್ಣೆ ಹೊಡೆಯೋದು ಬಿಟ್ಟ ಮೇಲೆ ಬದುಕು ಟ್ರ್ಯಾಕಿಗೆ ಬಂತು': ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ!
Recommended image2
ವೈಭವ್ ಸೂರ್ಯವಂಶಿ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಐಪಿಎಲ್ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಹೊಸದೊಂದು ಫೋಟೋ ವೈರಲ್
Recommended image3
RCB ಫೈನಲ್ ಪ್ರವೇಶಿಸಿದರೂ, ಕಳೆದೊಂದು ದಶಕದಿಂದ ಕನಸಾಗಿಯೇ ಉಳಿದ ವಿರಾಟ್ ಕೊಹ್ಲಿಯ ಅದೊಂದು ಬಯಕೆ!
Related Stories
Recommended image1
Rajat Patidar IPL record: ರಜತ್ ಪಾಟಿದಾರ್ ಅಬ್ಬರ; 19 ವರ್ಷದ IPL ಇತಿಹಾಸದಲ್ಲಿ ದಾಖಲೆ ಬರೆದು ಮಿಂಚಿದ RCB ನಾಯಕ
Recommended image2
IPL ಕ್ವಾಲಿಫೈಯರ್-1 ಪಂದ್ಯಕ್ಕೂ ಗುಜರಾತ್ ಟೈಟಾನ್ಸ್‌ ತಂಡಕ್ಕೆ ಖಡಕ್ ವಾರ್ನಿಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved