- Home
- Sports
- Cricket
- ವೈಭವ್ ಸೂರ್ಯವಂಶಿ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಐಪಿಎಲ್ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಹೊಸದೊಂದು ಫೋಟೋ ವೈರಲ್
ವೈಭವ್ ಸೂರ್ಯವಂಶಿ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಐಪಿಎಲ್ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಹೊಸದೊಂದು ಫೋಟೋ ವೈರಲ್
Vaibhav Suryavanshi Family Photo 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ ಕುಟುಂಬದ ಫೋಟೋ ವೈರಲ್ ಆಗಿದೆ.

19ನೇ ಸೀಸನ್‌ನಲ್ಲಿ ವೈಭವ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್, 15 ವರ್ಷದ ವೈಭವ್ ಸೂರ್ಯವಂಶಿ, 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಅಬ್ಬರಿಸುತ್ತಿದ್ದಾರೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ವೈಭವ್
ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 41.64ರ ಬ್ಯಾಟಿಂಗ್ ಸರಾಸರಿಯಲ್ಲಿ 232.27ರ ಸ್ಟ್ರೈಕ್‌ರೇಟ್‌ನಲ್ಲಿ 583 ರನ್ ಬಾರಿಸಿದ್ದು, ಮತ್ತೆ ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ಮುಂದುವರೆಸಿದ್ದಾರೆ.
ಎದುರಾಳಿ ಎದೆಯಲ್ಲಿ ನಡುಕ ಹುಟ್ಟಿಸಿರುವ ವೈಭವ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಒಂದು ಶತಕ ಹಾಗೂ ಮೂರು ಶತಕ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಟೂರ್ನಿಯಲ್ಲಿ 53 ಸಿಕ್ಸರ್ ಹಾಗೂ 50 ಬೌಂಡರಿ ಬಾರಿಸುವ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ವೈಭವ್ ಸೂರ್ಯವಂಶಿಯ ಕುಟುಂಬದ ಫೋಟೋ ವೈರಲ್
ಇದೀಗ ಸನ್‌ರೈಸರ್ಸ್ ಹೈದರಾಬಾದ್ ಎದುರು ಎಲಿಮಿನೇಟರ್ ಪಂದ್ಯವನ್ನಾಡಲು ಸಜ್ಜಾಗಿರುವ ವೈಭವ್ ಸೂರ್ಯವಂಶಿ, ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಹೀಗಿರುವಾಗಲಿ ವೈಭವ್ ಸೂರ್ಯವಂಶಿಯ ಕುಟುಂಬದವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ವೈಭವ್ ಸೂರ್ಯವಂಶಿ ಜತೆಗೆ ಅವರ ಅಣ್ಣ ಉಜ್ವಲ್ ಸೂರ್ಯವಂಶಿ, ತಮ್ಮ ಆಶೀರ್ವಾದ್ ಸೂರ್ಯವಂಶಿ ಹಾಗೂ ತಂದೆ ಸಂಜೀವ್ ಸೂರ್ಯವಂಶಿ ಕಾಣಿಸಿಕೊಂಡಿದ್ದಾರೆ.
ಸಹೋದರ ಫೋಟೋ ಹಂಚಿಕೊಂಡ ವೈಭವ್ ಅಣ್ಣ ಉಜ್ವಲ್ ಸೂರ್ಯವಂಶಿ
ಈ ಫೋಟೋಗಳನ್ನು ವೈಭವ್ ಸೂರ್ಯವಂಶಿ ಅವರ ಅಣ್ಣ ಉಜ್ವಲ್ ಸೂರ್ಯವಂಶಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಉಜ್ವಲ್ ಹಂಚಿಕೊಂಡಿರುವ ಫೋಟೋದಲ್ಲಿ ವೈಭವ್ ಸೂರ್ಯವಂಶಿ ಅವರ ತಾಯಿ ಆರತಿ ಸೂರ್ಯವಂಶಿ ಕಾಣಿಸಿಕೊಂಡಿಲ್ಲ. ಇನ್ನು ಉಜ್ವಲ್ ಸೂರ್ಯವಂಶಿ ಕೂಡಾ ಕ್ರಿಕೆಟಿಗನಾಗಿದ್ದು, ಸಹೋದರ ವೈಭವ್‌ಗೆ ಸೂಕ್ತ ಬ್ಯಾಟಿಂಗ್ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಇನ್ನು ವೈಭವ್ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಕೂಡಾ ಮುಂಬರುವ ದಿನಗಳಲ್ಲಿ ಐಪಿಎಲ್ ಹಾಗೂ ಭಾರತ ತಂಡಕ್ಕೆ ಆಡುವ ಕನಸು ಕಾಣುತ್ತಿದ್ದಾರೆ.
ವೈಭವ್ ಸೂರ್ಯವಂಶಿ ತಾಯಿ ಗೃಹಿಣಿ
ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ, ಮಕ್ಕಳನ್ನು ಕ್ರಿಕೆಟಿಗರನ್ನಾಗಿ ಮಾಡಲು ಉದ್ಯೋಗ ತೊರೆದು, ಅಂಗೈಯಷ್ಟಗಲದ ಜಮೀನನ್ನು ಮಾರಿ ಮಕ್ಕಳ ಕ್ರಿಕೆಟ್ ಬದುಕಿಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದರು. ಅದರ ಪ್ರತಿಫಲ ಇಂದು 15 ವರ್ಷದ ವೈಭವ್ ಸೂರ್ಯವಂಶಿ ಭಾರತದ ಮನೆ ಮಾತಾಗಿದ್ದಾರೆ. ಅಂದಹಾಗೆ ವೈಭವ್ ತಾಯಿ ಆರತಿ ಗೃಹಿಣಿಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
