MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 'ಎಣ್ಣೆ ಹೊಡೆಯೋದು ಬಿಟ್ಟ ಮೇಲೆ ಬದುಕು ಟ್ರ್ಯಾಕಿಗೆ ಬಂತು': ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ!

'ಎಣ್ಣೆ ಹೊಡೆಯೋದು ಬಿಟ್ಟ ಮೇಲೆ ಬದುಕು ಟ್ರ್ಯಾಕಿಗೆ ಬಂತು': ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ!

Yuzvendra Chahal Opens Up on Quitting Alcohol After Divorce 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಭಿಯಾನ ಲೀಗ್ ಹಂತದಲ್ಲೇ ಮುಕ್ತಾಯವಾಗಿದೆ. ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಯುಜುವೇಂದ್ರ ಚಹಲ್ ತಮ್ಮ ಖಾಸಗಿ ಬದುಕಿನ ಅತ್ಯಂತ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

2 Min read
Author : Naveen Kodase
Published : May 27 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
16
ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಚಹಲ್
Image Credit : X/PunjabKingsIPL

ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಚಹಲ್

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮೊದಲ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೇರುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಇದಾದ ಬಳಿಕ ಸತತ ಆರು ಸೋಲು ಕಾಣುವ ಮೂಲಕ ನಾಕೌಟ್ ಹಂತಕ್ಕೇರುವ ಅವಕಾಶವನ್ನು ಕೈಚೆಲ್ಲಿತು. ಇನ್ನು ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್, ತಮ್ಮ ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred
26
ವೈವಾಹಿಕ ಜೀವನದಿಂದ ಬೇಸತ್ತಿದ್ದ ಚಹಲ್
Image Credit : Instagram

ವೈವಾಹಿಕ ಜೀವನದಿಂದ ಬೇಸತ್ತಿದ್ದ ಚಹಲ್

ಧನಶ್ರೀ ವರ್ಮಾ ಜತೆಗೆ ದಾಂಪತ್ಯ ಜೀವನ ಬಿರುಕು ಬಿಟ್ಟ ಬಳಿಕ ಚಹಲ್-ಧನಶ್ರೀ ಪರಸ್ಪರ ಸಮ್ಮತಿ ಮೇರೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಈ ಜೋಡಿ ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮಾಡಿಕೊಂಡಿಕೊಂಡಿದ್ದರು. ಇದೆಲ್ಲದರ ನಡುವೆ ಯುಜುವೇಂದ್ರ ಚಹಲ್ ತಾವು ಮದ್ಯ ವ್ಯಸನಿಯಾಗಿದ್ದೆ ಎನ್ನುವ ವಿಚಾರವನ್ನು ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

Related Articles

Related image1
IPL ಕ್ವಾಲಿಫೈಯರ್-1 ಪಂದ್ಯದಲ್ಲಿ 4 ಅಪರೂಪದ ದಾಖಲೆ ಬರೆದ RCB..! ಬೆಂಗಳೂರು ಆರ್ಭಟಕ್ಕೆ CSK, ಗುಜರಾತ್ ರೆಕಾರ್ಡ್ಸ್‌ ನುಚ್ಚುನೂರು
Related image2
IPL 2026: ಪ್ಲೇ ಆಫ್‌ ತಲುಪಿರುವ ತಂಡಗಳಿಗೆ ಬಿಸಿಸಿಐನಿಂದು ಸಿಗುವ ನಗದು ಹಣ ಇಷ್ಟೊಂದಾ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
36
ಆಲ್ಕೋಹಾಲ್ ತ್ಯಜಿಸಿದ ಬಳಿಕ ಜೀವನದಲ್ಲಾದ ಬದಲಾವಣೆಗಳು
Image Credit : ANI

ಆಲ್ಕೋಹಾಲ್ ತ್ಯಜಿಸಿದ ಬಳಿಕ ಜೀವನದಲ್ಲಾದ ಬದಲಾವಣೆಗಳು

ಯುಜುವೇಂದ್ರ ಚಹಲ್ ತಾವು ಎಣ್ಣೆ ಹೊಡೆಯುವುದನ್ನು ಬಿಟ್ಟ ಬಳಿಕ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಚಹಲ್, ಹರ್ಲೀನ್ ಡಿಯೊಲ್ ಜತೆಗಿನ ಪಂಜಾಬ್ ಕಿಂಗ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 'ಕ್ಯಾಂಡೀಡ್ ವಿಥ್ ಕಿಂಗ್ಸ್‌' ಪಾಡ್‌ಕಾಸ್ಟ್‌ನಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

46
'ಕ್ಯಾಂಡೀಡ್ ವಿಥ್ ಕಿಂಗ್ಸ್‌' ಪಾಡ್‌ಕಾಸ್ಟ್‌ನಲ್ಲಿ ಚಹಲ್ ಮುಕ್ತ ಮಾತು
Image Credit : X/ANI

'ಕ್ಯಾಂಡೀಡ್ ವಿಥ್ ಕಿಂಗ್ಸ್‌' ಪಾಡ್‌ಕಾಸ್ಟ್‌ನಲ್ಲಿ ಚಹಲ್ ಮುಕ್ತ ಮಾತು

'ಕ್ಯಾಂಡೀಡ್ ವಿಥ್ ಕಿಂಗ್ಸ್‌' ಪಾಡ್‌ಕಾಸ್ಟ್‌ನಲ್ಲಿ ಯುಜುವೇಂದ್ರ ಚಹಲ್, ಮದ್ಯಪಾನ ತ್ಯಜಿಸಿದ್ದು, ಡ್ರಿಪ್ರೆಸ್ಸನ್ ವಿರುದ್ದ ಹೋರಾಡಿದ್ದು ಹಾಗೂ ಕ್ರಿಕೆಟ್‌ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಮೆಲುಕು ಹಾಕಿದ್ದಾರೆ.

56
ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ ಎಂದ ಚಹಲ್
Image Credit : X@yuzi_chahal

ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ ಎಂದ ಚಹಲ್

ಪಾಡ್‌ಕಾಸ್ಟ್‌ನ ಆರಂಭದಲ್ಲೇ ಹರ್ಲೀನ್ ಡಿಯೊಲ್, ಚಹಲ್‌ಗೆ ನೀವು ಎಣ್ಣೆ ಹೊಡೆಯುವುದನ್ನು ಬಿಟ್ಟಿದ್ದೀರಾ ಅಲ್ವಾ ಎಂದು ಪ್ರಶ್ನಿಸುತ್ತಾರೆ. ಆಗ ಯುಜಿ, ಹೌದು, ಇದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ಹೇಳಿದ್ದಾರೆ. ಎಣ್ಣೆ ಹೊಡೆಯುವುದನ್ನು ಬಿಟ್ಟ ಬಳಿಕ ನನ್ನ ಜೀವನವೂ ತುಂಬಾ ಬದಲಾಯಿತು. ನಾನೀಗ ನನ್ನ ಕುಟುಂಬ ಹಾಗೂ ಸ್ನೇಹಿತರ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ

66
IPL ಇತಿಹಾಸದ ಅತ್ಯಂತ ಯಶಸ್ವಿ ಸ್ಪಿನ್ನರ್ ಚಹಲ್
Image Credit : X/PunjabKingsIPL

IPL ಇತಿಹಾಸದ ಅತ್ಯಂತ ಯಶಸ್ವಿ ಸ್ಪಿನ್ನರ್ ಚಹಲ್

2026ರ ಐಪಿಎಲ್ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್ ಪ್ರದರ್ಶನ ಸಾಧಾರಣವಾಗಿತ್ತು. ಪಂಜಾಬ್ ಕಿಂಗ್ಸ್ ಪರ ಆಡಿದ 14 ಪಂದ್ಯಗಳಲ್ಲಿ ಕೇವಲ 12 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಇನ್ನು ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಹೆಗ್ಗಳಿಕೆ ಚಹಲ್‌ ಅವರದ್ದು. ಚಹಲ್ ಐಪಿಎಲ್‌ನಲ್ಲಿ ಒಟ್ಟು 231 ವಿಕೆಟ್ ಕಬಳಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಪಂಜಾಬ್ ಕಿಂಗ್ಸ್
ಯುಜ್ವೇಂದ್ರ ಚಹಲ್

Latest Videos
Recommended Stories
Recommended image1
ವೈಭವ್ ಸೂರ್ಯವಂಶಿ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಐಪಿಎಲ್ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಹೊಸದೊಂದು ಫೋಟೋ ವೈರಲ್
Recommended image2
RCB ಫೈನಲ್ ಪ್ರವೇಶಿಸಿದರೂ, ಕಳೆದೊಂದು ದಶಕದಿಂದ ಕನಸಾಗಿಯೇ ಉಳಿದ ವಿರಾಟ್ ಕೊಹ್ಲಿಯ ಅದೊಂದು ಬಯಕೆ!
Recommended image3
IPL ಕ್ವಾಲಿಫೈಯರ್-1 ಪಂದ್ಯದಲ್ಲಿ 4 ಅಪರೂಪದ ದಾಖಲೆ ಬರೆದ RCB..! ಬೆಂಗಳೂರು ಆರ್ಭಟಕ್ಕೆ CSK, ಗುಜರಾತ್ ರೆಕಾರ್ಡ್ಸ್‌ ನುಚ್ಚುನೂರು
Related Stories
Recommended image1
IPL ಕ್ವಾಲಿಫೈಯರ್-1 ಪಂದ್ಯದಲ್ಲಿ 4 ಅಪರೂಪದ ದಾಖಲೆ ಬರೆದ RCB..! ಬೆಂಗಳೂರು ಆರ್ಭಟಕ್ಕೆ CSK, ಗುಜರಾತ್ ರೆಕಾರ್ಡ್ಸ್‌ ನುಚ್ಚುನೂರು
Recommended image2
IPL 2026: ಪ್ಲೇ ಆಫ್‌ ತಲುಪಿರುವ ತಂಡಗಳಿಗೆ ಬಿಸಿಸಿಐನಿಂದು ಸಿಗುವ ನಗದು ಹಣ ಇಷ್ಟೊಂದಾ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved