MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಶಾಸಕರಿಗೆ ಸೇರಿ 10,000 ಉಚಿತ ಟಿಕೆಟ್ ಕೇಳಿದ KSCA; ಬೆಂಗಳೂರು ಫೈನಲ್ ಪಂದ್ಯವನ್ನೇ ಶಿಫ್ಟ್ ಮಾಡಬೇಕಾಯ್ತು ಎಂದ BCCI

ಶಾಸಕರಿಗೆ ಸೇರಿ 10,000 ಉಚಿತ ಟಿಕೆಟ್ ಕೇಳಿದ KSCA; ಬೆಂಗಳೂರು ಫೈನಲ್ ಪಂದ್ಯವನ್ನೇ ಶಿಫ್ಟ್ ಮಾಡಬೇಕಾಯ್ತು ಎಂದ BCCI

ಕರ್ನಾಟಕದ ಶಾಸಕರು ಮತ್ತು ಕೆಎಸ್‌ಸಿಎ ವತಿಯಿಂದ 10,000ಕ್ಕೂ ಹೆಚ್ಚು ಉಚಿತ ಟಿಕೆಟ್‌ಗಳಿಗೆ ಬೇಡಿಕೆ ಬಂದಿದ್ದರಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ತಿಳಿಸಿದ್ದಾರೆ.

2 Min read
Author : Sathish Kumar KH
Published : May 07 2026, 10:02 PM IST
Share this Photo Gallery
  • FB
  • TW
  • Linkdin
  • Whatsapp
16
ಶಾಸಕರ ‘ಉಚಿತ ಟಿಕೆಟ್’ ಹಸಿವು
Image Credit : X

ಶಾಸಕರ ‘ಉಚಿತ ಟಿಕೆಟ್’ ಹಸಿವು

ಪ್ರತಿ ಬಾರಿ ಐಪಿಎಲ್ ಪಂದ್ಯ ನಡೆದಾಗಲೂ 'ಈ ಸಲ ಕಪ್ ನಮ್ದೇ' ಎಂದು ಅಬ್ಬರಿಸುವ ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿ ತವರು ನೆಲದಲ್ಲೇ ಫೈನಲ್ ನೋಡುವ ಸೌಭಾಗ್ಯ ತಪ್ಪಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯ ಈಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಗೊಂಡಿದೆ. 

ಇದಕ್ಕೆ ಕಾರಣ ಭದ್ರತೆಯೋ ಅಥವಾ ಮಳೆಯೋ ಅಲ್ಲ, ಬದಲಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಮತ್ತು ರಾಜ್ಯದ ಶಾಸಕರ ‘ಉಚಿತ ಟಿಕೆಟ್’ ಹಸಿವು ಎನ್ನುವ ಆಘಾತಕಾರಿ ವಿಚಾರವನ್ನು ಬಿಸಿಸಿಐ ಬಯಲು ಮಾಡಿದೆ.

26
ಏನಿದು ಉಚಿತ ಟಿಕೆಟ್ ವಿವಾದ
Image Credit : ANI

ಏನಿದು ಉಚಿತ ಟಿಕೆಟ್ ವಿವಾದ

ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದು, ಕೆಎಸ್ಸಿಎ (KSCA) ನಡೆಸಿರುವ ಟಿಕೆಟ್ ಲೂಟಿಯನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಶಿಷ್ಟಾಚಾರದ ಪ್ರಕಾರ, ಪಂದ್ಯ ಆಯೋಜಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಒಟ್ಟು ಆಸನ ಸಾಮರ್ಥ್ಯದ ಕೇವಲ 15% ರಷ್ಟು ಟಿಕೆಟ್‌ಗಳನ್ನು ಮಾತ್ರ ಉಚಿತವಾಗಿ (Complimentary Passes) ನೀಡಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ.

Related Articles

Related image1
'ಶಾಸಕರ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರು ಬಲಿ', IPL ಫೈನಲ್ ಅಹಮದಾಬಾದ್‌ಗೆ ಶಿಫ್ಟ್: ನಿಖಿಲ್ ಕುಮಾರಸ್ವಾಮಿ ಕಿಡಿ
Related image2
ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್
36
10 ಸಾವಿರ ಹೆಚ್ಚುವರಿ ಟಿಕೆಟ್‌ಗೆ ಬೇಡಿಕೆ!
Image Credit : X

10 ಸಾವಿರ ಹೆಚ್ಚುವರಿ ಟಿಕೆಟ್‌ಗೆ ಬೇಡಿಕೆ!

ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಕೆಎಸ್ಸಿಎ ತನ್ನ ಸದಸ್ಯರು, ಕ್ಲಬ್‌ಗಳು ಮತ್ತು ಇತರರಿಗಾಗಿ ನಿಗದಿತ 15% ಕೋಟಾದ ಹೊರತಾಗಿ ಸುಮಾರು 10,000 ಹೆಚ್ಚುವರಿ ಉಚಿತ ಟಿಕೆಟ್‌ಗಳನ್ನು ನೀಡುವಂತೆ ಪಟ್ಟು ಹಿಡಿದಿತ್ತು. ಈ ಬಗ್ಗೆ ಬಿಸಿಸಿಐ ವಿವರಣೆ ಕೇಳಿ ಮೇ 2 ರಂದು ಇಮೇಲ್ ಕಳುಹಿಸಿತ್ತು. ಇದಕ್ಕೆ ಕೆಎಸ್ಸಿಎ ನೀಡಿದ ಉತ್ತರ ಕಂಡು ಬಿಸಿಸಿಐ ಅಧಿಕಾರಿಗಳೇ ಆಘಾತಕ್ಕೊಳಗಾಗಿದ್ದಾರೆ.

46
ಶಾಸಕರಿಗೆ ಬೇಕಂತೆ 700 ಫ್ರೀ ಟಿಕೆಟ್!
Image Credit : ANI

ಶಾಸಕರಿಗೆ ಬೇಕಂತೆ 700 ಫ್ರೀ ಟಿಕೆಟ್!

ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕದ ಶಾಸಕರು (MLAs) ಮತ್ತು ವಿಧಾನ ಪರಿಷತ್ ಸದಸ್ಯರಿಗಾಗಿ (MLCs) ಸುಮಾರು 700ಕ್ಕೂ ಹೆಚ್ಚು ಉಚಿತ ಟಿಕೆಟ್‌ಗಳನ್ನು ನೀಡಬೇಕೆಂದು ಕೆಎಸ್ಸಿಎ ಬೇಡಿಕೆ ಇಟ್ಟಿತ್ತು. ರಾಜ್ಯ ಸರ್ಕಾರದ ಸದಸ್ಯರಿಗೂ ಉಚಿತ ಪಾಸ್ ನೀಡಬೇಕೆಂಬ ಒತ್ತಡವಿತ್ತು. ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಭಿಮಾನಿಗಳ ನಡುವೆ, ಜನಪ್ರತಿನಿಧಿಗಳ ಈ ಉಚಿತ ಟಿಕೆಟ್ ದಾಹದಿಂದಾಗಿ ಇಡೀ ಫೈನಲ್ ಪಂದ್ಯವೇ ಬೆಂಗಳೂರಿನಿಂದ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.

56
ಬಿಸಿಸಿಐ ಕಠಿಣ ನಿರ್ಧಾರ:
Image Credit : Asianet News

ಬಿಸಿಸಿಐ ಕಠಿಣ ನಿರ್ಧಾರ:

ನಿಯಮ ಮೀರಿ 10,000ಕ್ಕೂ ಹೆಚ್ಚು ಉಚಿತ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಬಿಸಿಸಿಐ, ಇಂತಹ 'ಟಿಕೆಟ್ ಹಗರಣದ' ನಡುವೆ ಪಂದ್ಯ ನಡೆಸುವುದು ಅಸಾಧ್ಯ ಎಂದು ನಿರ್ಧರಿಸಿತು. ಹೀಗಾಗಿ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಹಾಗೂ ಇತರ ಪ್ಲೇ ಆಫ್ ಪಂದ್ಯಗಳನ್ನು ಧರ್ಮಶಾಲಾ ಮತ್ತು ಹೊಸ ಚಂಡೀಗಢಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಮಾಹಿತಿ ನೀಡಿದ್ದಾರೆ.

66
ಆರ್‌ಸಿಬಿ ಫ್ಯಾನ್ಸ್‌ಗೆ ಅನ್ಯಾಯ:
Image Credit : IPL BCCI

ಆರ್‌ಸಿಬಿ ಫ್ಯಾನ್ಸ್‌ಗೆ ಅನ್ಯಾಯ:

ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ತಂಡವು 9 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ತಂಡದ ಅದ್ಭುತ ಪ್ರದರ್ಶನ ಕಂಡು ಅಭಿಮಾನಿಗಳು ಫೈನಲ್ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೋಡಿ ಸಂಭ್ರಮಿಸಲು ಕಾಯುತ್ತಿದ್ದರು. ಆದರೆ ಸಾರ್ವಜನಿಕರ ಹಿತ ಕಾಯಬೇಕಾದ ಶಾಸಕರೇ ಉಚಿತ ಟಿಕೆಟ್‌ಗಾಗಿ ಹಠ ಮಾಡಿದ್ದರಿಂದ ಅಭಿಮಾನಿಗಳ ಕನಸು ಭಗ್ನಗೊಂಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಆರ್‌ಸಿಬಿ
ಬಿಸಿಸಿಐ
ಕ್ರಿಕೆಟ್

Latest Videos
Recommended Stories
Recommended image1
ವಿರಾಟ್ ಅತ್ಯಾಪ್ತ ಗೆಳೆಯ ಅಕಾಲಿಕ ನಿಧನ; ಅಂಡರ್-19 ಸಹ ಆಟಗಾರನಿಗೆ ಸಂತಾಪ ಸೂಚಿಸಿದ ಕೊಹ್ಲಿ!
Recommended image2
Virat Kohli: ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!
Recommended image3
IPL 2026 Final: ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌! ಮೇ 31ರ ಫೈನಲ್‌ ಮ್ಯಾಚ್ ಎಲ್ಲಿ?
Related Stories
Recommended image1
'ಶಾಸಕರ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರು ಬಲಿ', IPL ಫೈನಲ್ ಅಹಮದಾಬಾದ್‌ಗೆ ಶಿಫ್ಟ್: ನಿಖಿಲ್ ಕುಮಾರಸ್ವಾಮಿ ಕಿಡಿ
Recommended image2
ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved